ನಾನು ಕಾಂಗ್ರೆಸ್ ಮುಲಾಜಿನಲ್ಲಿರುವುದು ಸತ್ಯ: ಕುಮಾರಸ್ವಾಮಿ
Recommended Video

ಬೆಂಗಳೂರು, ಜೂನ್ 04: ನಾನು ಕಾಂಗ್ರೆಸ್ ಪಕ್ಷದ ಮುಲಾಜಿನಲ್ಲಿರುವುದು ಸತ್ಯ, ಆದರೆ ನಾನು ಅವರಿಗೆ ಮಾತ್ರ ಮುಖ್ಯಮಂತ್ರಿ ಅಲ್ಲ ಕರ್ನಾಟಕದ ಎಲ್ಲ ಜನರ ಮುಖ್ಯಮಂತ್ರಿ ಎಂದು ಕುಮಾರಸ್ವಾಮಿ ಅವರು ತಮ್ಮ ಹಳೆಯ ಹೇಳಿಕೆಗೆ ತೇಪೆ ಹಚ್ಚುವ ಪ್ರಯತ್ನವನ್ನು ಮಾಡಿದ್ದಾರೆ.
ತಾವು ಓದಿದ ನ್ಯಾಷನಲ್ ಕಾಲೇಜಿಗೆ ಭೇಟಿ ನೀಡುವ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದಲೇ ನಾನು ಸಿಎಂ ಆಗಿರುವುದು, ಕಾಂಗ್ರೆಸ್‌ನ ಹಂಗಿನಲ್ಲಿರುವುದೂ ಸತ್ಯ, ಆದರೆ ನಾನು ಜನರ ಸೇವಕನಷ್ಟೆ ಎಂದು ಹೇಳಿದರು.
ಈ ಹಿಂದೆ 'ನಾನು ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ, ಜನರ ಆಯ್ಕೆಯಿಂದ ನಾನು ಮುಖ್ಯಮಂತ್ರಿ ಆಗಿಲ್ಲ' ಎಂಬ ಹೇಳಿಕೆ ನೀಡಿ ವಿರೋಧಕ್ಕೆ ಗುರಿಯಾಗಿದ್ದರು. ಹಾಗಾಗಿ ಈಗ ಅದಕ್ಕೆ ತೇಪೆ ಹಾಕುವ ಪ್ರಯತ್ನವನ್ನು ಮುಖ್ಯಮಂತ್ರಿಗಳು ಮಾಡಿದರು.

'ನಾನು ಸಾಂಧರ್ಬಿಕ ಶಿಶು' ಹೇಳಿಕೆಯನ್ನು ಪುನರ್ ಉಚ್ಛರಿಸಿದ ಕುಮಾರಸ್ವಾಮಿ, ಈ ಹೇಳಿಕೆಯನ್ನು ತುಂಬಾ ಜನ ಖಂಡಿಸಿದರು ಆದರೆ ಇದು ಸತ್ಯ 'ನಾನು ರಾಜಕೀಯ ಸಾಂಧರ್ಭಿಕ ಶಿಶು' ಎಂದು ಅವರು ಹೇಳಿದರು.
ಜನರ ಜೀವನ ಸುಧಾರಣೆಯ ಗುರಿ ಇಟ್ಟುಕೊಂಡು ಮುಂದೆ ನಡೆಯುತ್ತಿರುವ ನಾನು ಅದೃಷ್ಟದ ರಾಜಕಾರಣಿ ಎಂಬುದರಲ್ಲಿ ಅನುಮಾನ ಇಲ್ಲ. ಎಂದ ಅವರು, ಖಾತೆ ಹಂಚಿಕೆ ವಿಷಯದಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆ ಯಾವುದೇ ಅಸಮಾಧಾನ ಇಲ್ಲ ಎಂದು ಸ್ಪಷ್ಟಪಡಿಸಿದರು.












Click it and Unblock the Notifications