ಜನನ ಪ್ರಮಾಣ ಪತ್ರ ಪಡೆಯುವುದು ಹೇಗೆ?
ಬೆಂಗಳೂರು, ನ.6 : ಮನೆಗೆ ಹೊಸ ಅತಿಥಿ ಆಗಮಿಸಿದ ಸಂತಸದಲ್ಲಿರುವ ಪೋಷಕರು ಮಗುವಿನ ಜನನ ಪ್ರಮಾಣ ಪತ್ರವನ್ನು ಪಡೆಯುವುದನ್ನು ಮರೆಯಬಾರದು. 21 ದಿನಗಳವೊಳಗೆ ಜನನ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಬೇಕು. ಹಲವಾರು ದಾಖಲೆಗಳನ್ನು ಪಡೆಯಲು ಈ ಪ್ರಮಾಣ ಪತ್ರ ಪ್ರಮುಖವಾದ ದಾಖಲೆಯಾಗಿದೆ.
ಬೆಂಗಳೂರಿನಲ್ಲಿ ಜನನ ಪ್ರಮಾಣ ಪತ್ರ ಹೇಗೆ ಪಡೆಯಬೇಕು?, ಅರ್ಜಿ ಎಲ್ಲಿ ಸಿಗುತ್ತದೆ? ಮುಂತಾದ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆನ್‌ಲೈನ್ ಮೂಲಕವೇ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು. ಅರ್ಜಿಯೂ ಬಿಬಿಎಂಪಿ ವೆಬ್ ಸೈಟ್‌ನಲ್ಲಿ ಲಭ್ಯವಿದೆ. [ಅರ್ಜಿಗಾಗಿ ಇಲ್ಲಿ ಕ್ಲಿಕ್ ಮಾಡಿ]

ಪ್ರಮುಖ ದಾಖಲೆ : ನಿಮ್ಮ ಜನ್ಮ ದಿನಾಂಕವನ್ನು ತಿಳಿಸುವ ಪ್ರಮುಖ ದಾಖಲೆ ಜನನ ಪ್ರಮಾಣ ಪತ್ರವಾಗಿದೆ. ಮಗು ಹುಟ್ಟಿದ 21 ದಿನಗಳವೊಳಗೆ ನೀವು ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿ, ಸಂಬಂಧಿಸಿದ ಕಚೇರಿಯಿಂದ ಅದನ್ನು ಪಡೆಯಬಹುದಾಗಿದೆ. ಆಸ್ಪತ್ರೆಗಳಿಂದಲೇ ನೀವು ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಎಲ್ಲಿ ರಿಜಿಸ್ಟರ್ ಮಾಬೇಕು : ಮಗು ಸರ್ಕಾರಿ ಅಥವ ಖಾಸಗಿ ಆಸ್ಪತ್ರೆಯಲ್ಲಿ ಹುಟ್ಟಿರಲಿ ಆಸ್ಪತ್ರೆಯ ಸಿಬ್ಬಂದಿಯನ್ನು ನೀವು ಜನನ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಎಂದು ವಿಚಾರಿಸಿ. ಖಾಸಗಿ ಆಸ್ಪತ್ರೆಗಳು ಸಹ ಬಿಬಿಎಂಪಿ ಕಚೇರಿಯೊಂದಿಗೆ ಸಂಪರ್ಕದಲ್ಲಿರುತ್ತವೆ, ಅಲ್ಲಿ ನಿಮಗೆ ಅರ್ಜಿ ದೊರೆಯುತ್ತದೆ. [ಬೆಂಗಳೂರು ಒನ್ ಕೇಂದ್ರದ ವಿಳಾಸ]
ಅರ್ಜಿ ಸಲ್ಲಿಸಿದ ನಂತರ ನಿಮ್ಮ ಸಮೀಪದ ಬೆಂಗಳೂರು ಒನ್ ಕಚೇರಿಗೆ ಅಥವ ಬಿಬಿಎಂಪಿ ಕೇಂದ್ರ ಕಚೇರಿಗೆ ಹೋಗಿ ನೀವು ಸಲ್ಲಿಸಿದ ಅರ್ಜಿ ಸರಿಯಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ, ನಂತರ ಪ್ರಮಾಣ ಪತ್ರ ಪಡೆಯಲು ಅಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.
ದಾಖಲಾತಿ ತೆಗೆದುಕೊಂಡು ಹೋಗಿ : ಬೆಂಗಳೂರು ಒನ್ ಕೇಂದ್ರ ಜನನ ಪ್ರಮಾಣ ಪತ್ರವನ್ನು ನೀಡುವ ಅಧಿಕಾರವನ್ನು ಹೊಂದಿದೆ. ಅಲ್ಲಿ ನೀವು ಸಲ್ಲಿಸಿದ ಅರ್ಜಿಯಲ್ಲಿರುವ ಮಾಹಿತಿ ಅನ್ವಯ ಪ್ರಮಾಣ ಪತ್ರವನ್ನು ಅಧಿಕಾರಿಗಳು ಭರ್ತಿ ಮಾಡುತ್ತಾರೆ. ತಿದ್ದುಪಡಿಗಳಿದ್ದರೆ ನೀವು ಅಲ್ಲಿಯೇ ಸೂಚಿಸಬಹುದು.
ಮಗುವಿನ ಪೋಷಕರ ವಿಳಾಸ, ತಂದೆ ಮತ್ತು ತಾಯಿ ಹೆಸರು, ಮಗುವಿನ ಹೆಸರು ಮುಂತಾದ ವಿವರಗಳನ್ನು ಭರ್ತಿ ಮಾಡಲಾಗುತ್ತದೆ. ಆದ್ದರಿಂದ ನೀವು ವಿಳಾಸ ದೃಡೀಕರಣಕ್ಕಾಗಿ ದಾಖಲಾತಿಗಳನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ನಿಮ್ಮ ವಿವಾಹ ನೋಂದಣಿ ಪತ್ರವನ್ನು ತೆಗೆದುಕೊಂಡು ಹೋಗಬೇಕು.
ಆನ್‌ಲೈನ್‌ನಲ್ಲಿ ನೋಂದಣಿ : ಬೆಂಗಳೂರು ಒನ್ ಕೇಂದ್ರದ ವೆಬ್‌ಸೈಟ್‌ಗೆ ಭೇಟಿ ನೀಡಿ ನೀವು ಆನ್‌ಲೈನ್ ಮೂಲಕವೂ ಜನನ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ಎಲ್ಲಾ ಹೆಸರು ಮತ್ತು ಮಾಹಿತಿ ಸರಿಯಾಗಿಯೇ ನೋಡಿಕೊಂಡು ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಬೇಕಾಗುತ್ತದೆ. ಕೆಲವು ದಿನಗಳಲ್ಲಿ ಪ್ರಮಾಣ ಪತ್ರ ನಿಮ್ಮ ವಿಳಾಸಕ್ಕೆ ಬರುತ್ತದೆ.
ಆನ್‌ಲೈನ್ ಮೂಲಕ ನೋಂದಣಿ ಮಾಡಿದರೆ, 25 ರೂ. ಸೇವಾಶುಲ್ಕ, 5 ರೂ. ಪ್ರಮಾಣ ಪತ್ರಕ್ಕೆ 5 ರೂ. ಮತ್ತು ಕೋರಿಯರ್ ಶುಲ್ಕಕ್ಕೆ 10 ರೂ. ಪಾವತಿ ಮಾಡಬೇಕು. [ಹೊಸದಾಗಿ ಗ್ಯಾಸ್ ಸಂಪರ್ಕ ಪಡೆಯುವುದು ಹೇಗೆ?]
-
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
Property Mutation: ಆಸ್ತಿ ನೋಂದಣಿ ನಂತರ ಶೇ.98ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಬದಲಾವಣೆ: ಸಚಿವ ಕೃಷ್ಣ ಬೈರೇಗೌಡ -
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
Karnataka: ಧಾರ್ಮಿಕ ಮೆರವಣಿಗೆ, ಜಯಂತಿಗಳಲ್ಲಿ DJ ಸದ್ದಿಗೆ ಬ್ರೇಕ್? 'ಐಟಂ ಸಾಂಗ್' ಬ್ಯಾನ್ ಮಾಡಲು ರಾಜ್ಯ ಸರ್ಕಾರ ಒಲವು -
ಉನ್ನತ ಶಿಕ್ಷಣಕ್ಕೆ ಭಾರತದ ಯಾವ ನಗರ ಬೆಸ್ಟ್? QS ರ್ಯಾಂಕಿಂಗ್ ಪಟ್ಟಿಯಲ್ಲಿದೆ ಬೆಂಗಳೂರು ಸೇರಿದಂತೆ 4 ನಗರಗಳ ಹೆಸರು -
ಯುದ್ಧದ ಬಿಸಿ: ಬೆಂಗಳೂರಿಗೆ ಅರಬ್ ರಾಷ್ಟ್ರಗಳ ವಿಮಾನ ಸಂಚಾರ ಕಡಿತ; ರಾಜ್ಯ ಟ್ರಾವೆಲ್ಸ್ ಮಾಲೀಕರಲ್ಲಿ ಆತಂಕ -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
SSLC ಪರೀಕ್ಷೆ-1 ಆರಂಭ: ಮಲ್ಲೇಶ್ವರಂನ ಕೆಪಿಎಸ್ ಶಾಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ವಿದ್ಯಾರ್ಥಿಗಳಿಗೆ ಶುಭಹಾರೈಕೆ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್












Click it and Unblock the Notifications