• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೊಸಕೆರೆಹಳ್ಳಿ ಕೆರೆ ಮಾಲಿನ್ಯ, ಸುತ್ತಲಿನ ಶಾಲಾ ಮಕ್ಕಳಿಗೆ ಚರ್ಮದ ಅಲರ್ಜಿ

|

ಬೆಂಗಳೂರು, ನವೆಂಬರ್ 3: ಕಳೆದ ಮೂರು ವರ್ಷಗಳಿಂದ ಕಾಮಗಾರಿ ನಿಧಾನ ಗತಿಯಲ್ಲಿ ನಡೆಯುತ್ತಿದೆ, ಸ್ಯಾನಿಟರಿ ನೀರು ರಸ್ತೆಗೆ ಬರುತ್ತಿದೆ, ಒಂದು ಮಳೆ ಬಂದರೆ ಸಾಕು ವಾಸಿಸಲು ಕಷ್ಟವಾಗುತ್ತದೆ ಯಾವಾಗ ಇದೆಲ್ಲವನ್ನು ಸರಿ ಮಾಡುತ್ತೀರ ಎಂದು ಹೊಸಕೆರೆಹಳ್ಳಿಯ ಕೆರೆಯ ಸುತ್ತಮುತ್ತಲ ಪ್ರದೇಶದ ನಿವಾಸಿಗಳು ಮೇಯರ್ ಗಂಗಾಂಬಿಕೆಯವರನ್ನು ತರಾಟೆಗೆ ತೆಗೆದುಕೊಂಡರು.

ದೀಪಾವಳಿ ವಿಶೇಷ ಪುರವಣಿ

ಮೇಯರ್ ಗಂಗಾಂಬಿಕೆ ಹೊಸಕೆರೆಹಳ್ಳಿ ಕೆರೆ ಪರಿಶೀಲನೆಗೆಂದು ಶನಿವಾರ ತೆರಳಿದ್ದರು, ಕೆರೆ ತ್ಯಾಜ್ಯ ನಿರ್ವಹಣೆಯಲ್ಲಿ ಗುತ್ತಿಗೆದಾರರು ಆಸಕ್ತಿ ತೋರುತ್ತಿಲ್ಲ, ಯಾವುದೇ ಅಧಿಕಾರಿಗಳು ಈ ಕಡೆ ಗಮನವಹಿಸುತ್ತಿಲ್ಲ ಎಂದರು ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯೊಬ್ಬಳು ಮಾತನಾಡಿ ಈ ಕೆರೆಯಿಂದ ಬರುವ ವಾಸನೆಯಿಂದಾಗಿ ಶಾಲೆಯಲ್ಲಿ ಗಮನವಿಟ್ಟು ಪಾಠ ಕೇಳಲು ಸಾಧ್ಯವಾಗುತ್ತಿಲ್ಲ ಅಷ್ಟೇ ಅಲ್ಲದೆ ಚರ್ಮದ ಅಲರ್ಜಿ ಹೆಚ್ಚಾಗುತ್ತಿದೆ ಎಂದು ಹೇಳಿದರು.

ಹಸಿ ಕಸ ನಿರ್ವಹಣೆ ಉತ್ತೇಜನಕ್ಕೆ ತೆರಿಗೆ ವಿನಾಯ್ತಿಗಾಗಿ ಅಭಿಯಾನ

ರಾಜಕಾಲುವೆ ಸಮರ್ಪಕ ನಿರ್ವಹಣೆ ಮಾಡದ ಕಾರಣ ನೀರು ಸರಾಗವಾಗಿ ಹೋಗದೆ ಅಲ್ಲೇ ನಿಂತಿರುತ್ತದೆ. ಅಕ್ಕಪಕ್ಕದ ವಾರ್ಡ್‍ಗಳಿಂದ ಹೊಸಕೆರೆಹಳ್ಳಿ ಕೆರೆಗೆ ಕೊಳಚೆ ನೀರು ಬಂದು ಸೇರುತ್ತಿದೆ. ಇದರಿಂದ ನೀರು ಕಲುಷಿತಗೊಂಡು ಗಬ್ಬು ವಾಸನೆ ಬೀರುತ್ತಿದೆ. ಸೊಳ್ಳೆಗಳ ತಾಣವಾಗಿ ಮಾರ್ಪಟ್ಟಿದೆ. ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

English summary
BBMP mayor Gangambike mallikarjun visited Hosakerehalli ward on Saturday.During this time localities showed their anger about incomplete projects.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X