ನಿರಂತರ ಮಳೆ: ರಸ್ತೆಗೆ ಬಂತು ಬೆಳ್ಳಂದೂರು ಕೆರೆ ನೊರೆ
ಬೆಂಗಳೂರು, ಮೇ 18: ಮಹಾನಗರದಲ್ಲಿ ನಿರಂತರ ಮಳೆಯಾಗುತ್ತಿರುವುದು ಬೆಳ್ಳಂದೂರು ಕೆರೆಯನ್ನು ಭರ್ತಿ ಮಾಡಿದೆ. ಆದರೆ ಕೆರೆ ತುಂಬಿದೆ ಎಂದು ಇಲ್ಲಿ ಸಂತಸಪಡಬೇಕಾಗಿಲ್ಲ.
ಕೆರೆಗೆ ನೀರು ಹರಿದು ಬರುವುದರೊಂದಿಗೆ ರಾಸಾಯನಿಕ ಮಿಶ್ರಿತ ನೊರೆಯ ಪ್ರಮಾಣವೂ ಹೆಚ್ಚಾಗಿದೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರು ಜಲಮಂಡಳಿ ವಿರುದ್ಧ ಈ ಬಗ್ಗೆ ಪ್ರಕರಣ ದಾಖಲಿಸಲು ಮುಂದಾಗಿದೆ.[ವರ್ತೂರು ಕೆರೆಯಿಂದ ಹಾರಿ ಬಂತು ನೊರೆ ನೊರೆ]

ಕೆರೆ ಮಾಲಿನ್ಯವಾಗುತ್ತಿರುವ ಬಗ್ಗೆ ಜಲಮಂಡಳಿಗೆ ಸಾಕಷ್ಟು ಸಾರಿ ದೂರು ಸಲ್ಲಿಕೆ ಮಾಡಿದರೂ ಪ್ರಯೋಜನವಾಗಿಲ್ಲ. ಎಲ್ಲ ದೂರುಗಳನ್ನು ಜಲಮಂಡಳಿ ಕಸದ ಬುಟ್ಟಿಗೆ ಹಾಕಿತ್ತು ಎಂದು ಸ್ಥಳೀಯ ನಿವಾಸಿ ವೆಂಕಟೇಶ್ ಆರೋಪ ಮಾಡುತ್ತಾರೆ.[ಈ ಮರ ಕಡಿಯುವುದೋ? ಬಿಡುವುದೋ? ನೀವೇ ಹೇಳಿ..]
ಮಳೆ ಜೋರಾದ ಪರಿಣಾಮ ಕೆರೆ ತುಂಬಿದ ಅಪಾಯಕಾರಿ ರಾಸಾಯನಿಕತಯುಕ್ತ ನೊರೆ ರಿಂಗ್ ರಸ್ತೆಯ ಮೇಲೂ ಹರಿಯತೊಡಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ತಾತ್ಕಾಲಿಕ ಪರಿಹಾರ ಹುಡುಕಲು ಮುಂದಾಗಿದ್ದಾರೆ ವಿನಃ ಶಾಶ್ವತ ಪರಿಹಾರದ ಬಗ್ಗೆ ಯೋಚಿಸಿಲ್ಲ ಎಂದು ನಾಗರೀಕರು ಆರೋಪಿಸಿದ್ದಾರೆ.
ಇತ್ತೀಚೆಗೆ ಕೆರೆಯನ್ನು ಬಿಡಿಎಗೆ ಹಸ್ತಾಂತರ ಮಾಡಲಾಗಿತ್ತು. ಆದರೆ ಕೆರೆ ನೊರೆ ಪ್ರಕರಣದ ಕುರಿತು ಯಾವ ಒಂದು ಇಲಾಖೆಯೂ ಸರಿಯಾಗಿ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಅಧಿಕಾರಿಗಳು ಮತ್ತೊಂದು ಇಲಾಖೆ ಮೇಲೆ ದೂರು ಹೇಳುತ್ತಿದ್ದು ಸಮಸ್ಯೆ ಸದ್ಯಕ್ಕೆ ನಿಬವಾರಣೆಯಾಗುವ ಲಕ್ಷಣ ಕಂಡುಬರುತ್ತಿಲ್ಲ.











Click it and Unblock the Notifications