ನಿಗಮ-ಮಂಡಳಿ ನೇಮಕಕ್ಕೆ ತಡೆ, ಸಿಎಂ ಕುಮಾರಸ್ವಾಮಿ ಹೇಳಿದ್ದೇನು?
ಬೆಂಗಳೂರು, ಜನವರಿ 9: ಕೆಲವು ರಾಜಕೀಯ ತೊಂದರೆಯಿಂದಾಗಿ ನಿಗಮ-ಮಂಡಿ ಸ್ಥಾನವನ್ನು ತಡೆಹಿಡಿಯಲಾಗಿದೆ, ಯಾರಿಗೂ ಅಗೌರವ ತೋರಬೇಕೆಂದು ನಾನು ಈ ರೀತಿ ಮಾಡಿಲ್ಲ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಗಮ-ಮಂಡಳಿ ನೇಮಕದ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ವಿವಿಧ ರೀತಿಯಲ್ಲಿ ಮಾತನಾಡುತ್ತಿದ್ದಾರೆ, ಊಹಾಪೋಹಗಳೇ ಹೆಚ್ಚಾಗಿದೆ. ಕೆಲವು ರಾಜಕೀಯ ತೊಂದರೆಯಿಂದಾಗಿ ನೇಮಕಾತಿ ನಿಧಾನವಾಗುತ್ತಿದೆ ಇದಕ್ಕೆ ಬೇರೆ ಬಣ್ಣ ಬಳಿಯುವುದು ಬೇಡ ಎಂದು ಹೇಳಿದರು.
ಮೈತ್ರಿ ಪಕ್ಷವಾದ ಕಾಂಗ್ರೆಸ್ ತನ್ನ ಸಚಿವ ಸ್ಥಾನವನ್ನು ಭರ್ತಿ ಮಾಡಿ, ನಿಗಮ ಮಂಡಳಿ ಸಂಸದೀಯ ಕಾರ್ಯದರ್ಶಿ ಸ್ಥಾನಕ್ಕೆ ಕೂಡ ನೇಮಕಾತಿ ಮಾಡಿದೆ, ಆದರೆ ಜೆಡಿಎಸ್ ಮಾತ್ರ ತನ್ನ ಸ್ಥಾನವನ್ನು ಹಾಗೆಯೇ ಉಳಿಸಿಕೊಂಡಿದೆ.

ಈ ಕಾರಣದಿಂದಾಗಿ ಜೆಡಿಎಸ್ ಪಾಲಿನ ನಿಗಮ ಮಂಡಳಿಗೆ ನೇಮಕಾತಿ ವಿಷಯದಲ್ಲಿ ಹಿರಿಯ ನಾಯಕರು ಕುಂಟು ನೆಪ ಹೇಳಿ ನೇಮಕಾತಿಯನ್ನು ಮುಂದೂಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿತ್ತು.
ಈ ವಿಷಯ ಕುರಿತು ಸ್ಪಷ್ಟನೆ ನೀಡಿರುವ ಕುಮಾರಸ್ವಾಮಿ ಯಾರಿಗೂ ಅಗೌರವ ತೋರುವುದು ನನ್ನ ಉದ್ದೇಶವಲ್ಲ, ಕೆಲ ಆಂತರಿಕ ಸಮಸ್ಯೆಗಳಿವೆ ಹೀಗಾಗಿ ನಿಗಮ-ಮಂಡಳಿ ನೇಮಕವನ್ನು ಮುಂದೂಡಿದ್ದೇನೆ ಎಂದರು.












Click it and Unblock the Notifications