ಪುಸ್ತಕೋತ್ಸವದಲ್ಲಿ ಒಂದು ಸುತ್ತು, 50 ಪುಸ್ತಕ ಖರೀದಿಸಿದ ಎಚ್ಡಿಕೆ
ಬೆಂಗಳೂರು, ಅಕ್ಟೋಬರ್ 20 : ಬಿಡುವಿಲ್ಲದ ರಾಜಕೀಯ ಚಟುವಟಿಕೆಗಳ ನಡುವೆಯೂ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಮಂಗಳವಾರ ಪುಸ್ತಕೋತ್ಸವಕ್ಕೆ ಭೇಟಿ ನೀಡಿದ್ದರು. ಒಟ್ಟು 50 ಪುಸ್ತಕಗಳನ್ನು ಕುಮಾರಸ್ವಾಮಿ ಅವರು ಖರೀದಿ ಮಾಡಿದರು.
ಬೆಂಗಳೂರು ಪುಸ್ತಕ ಪ್ರಕಾಶಕರು ಮತ್ತು ಮಾರಾಟಗಾರರ ಸಂಘ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ 7 ದಿನಗಳ ಕಾಲ 12ನೇ ವರ್ಷದ ಪುಸ್ತಕೋತ್ಸವವನ್ನು ಆಯೋಜಿಸಿದ್ದು, ಅಕ್ಟೋಬರ್ 19ರಂದು ಉತ್ಸವಕ್ಕೆ ಚಾಲನೆ ಸಿಕ್ಕಿದೆ. ಅಕ್ಟೋಬರ್ 25ರ ತನಕ ಉತ್ಸವ ನಡೆಯಲಿದೆ. [ಬೆಂಗಳೂರು ಪುಸ್ತಕೋತ್ಸವಕ್ಕೆ ಚಾಲನೆ]
ಮಂಗಳವಾರ ದೇವನಹಳ್ಳಿ ಶಾಸಕ ಪಿಳ್ಳ ಮುನಿಶಾಮಪ್ಪ ಅವರ ಜೊತೆ ಪುಸ್ತಕೋತ್ಸವಕ್ಕೆ ಭೇಟಿ ನೀಡಿದ್ದ ಕುಮಾರಸ್ವಾಮಿ ಅವರು, ಸುಮಾರು ಹೊತ್ತು ಸುತ್ತಾಡಿದರು, ಹಲವು ಪುಸ್ತಕಗಳನ್ನು ನೋಡಿದರು. 50 ಪುಸ್ತಕಗಳನ್ನು ಖರೀದಿ ಮಾಡಿದರು. [ಡಿವಿಜಿ ಮಂಕುತಿಮ್ಮನ ಕಗ್ಗಕ್ಕೆ ಸರಳ ಕನ್ನಡದ ಸ್ಪರ್ಶ]
ಈ ಬಾರಿಯ ಪುಸ್ತಕೋತ್ಸವದಲ್ಲಿ 300ಕ್ಕೂ ಹೆಚ್ಚು ಮಳಿಗೆಗಳಿವೆ. ಕನ್ನಡ, ಹಿಂದಿ, ಉರ್ದು, ಮಲಯಾಳಂ, ತೆಲುಗು, ತಮಿಳು, ಇಂಗ್ಲಿಷ್ ಸೇರಿದಂತೆ ಹಲವು ಭಾಷೆಯ ಪುಸ್ತಕಗಳು ಲಭ್ಯವಿವೆ. 100ಕ್ಕೂ ಹೆಚ್ಚು ಮಳಿಗೆಗಳು ಕೇವಲ ಕನ್ನಡ ಪುಸ್ತಕಗಳಿಗೆ ಮಾತ್ರ ಸೀಮಿತವಾಗಿವೆ. ಕುಮಾರಸ್ವಾಮಿ ಅವರ ಭೇಟಿ ಚಿತ್ರಗಳನ್ನು ನೋಡಿ...

ಪುಸ್ತಕೋತ್ಸವಕ್ಕೆ ಎಚ್ಡಿಕೆ ಭೇಟಿ
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಮಂಗಳವಾರ ಪುಸ್ತಕೋತ್ಸವಕ್ಕೆ ಭೇಟಿ ನೀಡಿದ್ದರು. ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ 7 ದಿನಗಳ ಕಾಲದ 12ನೇ ವರ್ಷದ ಪುಸ್ತಕೋತ್ಸವ ನಡೆಯುತ್ತಿದೆ.

50 ಪುಸ್ತಕಗಳ ಖರೀದಿ ಕುಮಾರಸ್ವಾಮಿ
ದೇವನಹಳ್ಳಿ ಶಾಸಕ ಪಿಳ್ಳ ಮುನಿಶಾಮಪ್ಪ ಅವರ ಮಂಗಳವಾರ ಪುಸ್ತಕೋತ್ಸವಕ್ಕೆ ಬಂದ್ದ ಕುಮಾರಸ್ವಾಮಿ ಅವರು, ಸುಮಾರು ಹೊತ್ತು ಸುತ್ತಾಡಿದರು, ಹಲವು ಪುಸ್ತಕಗಳನ್ನು ನೋಡಿದರು. 50 ಪುಸ್ತಕಗಳನ್ನು ಖರೀದಿ ಮಾಡಿದರು.

ಯಾವ-ಯಾವ ಪುಸ್ತಕ ಖರೀದಿ?
ದೇವನೂರ ಮಹಾದೇವ ಅವರ 'ಎದೆಗೆ ಬಿದ್ದ ಅಕ್ಷರ', ಕುಂ. ವೀರಭದ್ರಪ್ಪ ಅವರ 'ಅರಮನೆ', ರಾಮಚಂದ್ರ ಗುಹಾ ಅವರ 'ಇಂಡಿಯಾ ಆಫ್ಟರ್ ಗಾಂಧಿ' ಸೇರಿದಂತೆ ಹಲವು ಪುಸ್ತಕಗಳನ್ನು ಎಚ್ಡಿಕೆ ಖರೀದಿ ಮಾಡಿದರು. 'ಕಾದಂಬರಿ, ಸಾಮಾಜಿಕ, ಪರಿಸರ, ನೀರಾವರಿಗೆ ಸಂಬಂಧಿಸಿದ ಪುಸ್ತಕಗಳನ್ನು ಹುಡುಕಿಕೊಂಡು ಬಂದಿದ್ದೇನೆ' ಎಂದು ಮಾಧ್ಯಮಗಳಿಗೆ ಚುಟುಕಾಗಿ ಪ್ರತಿಕ್ರಿಯೆ ನೀಡಿದರು.

ಬಿಜೆಪಿಯವರಿಗೆ ಹಸ್ತಲಾಘವ
ಕುಮಾರಸ್ವಾಮಿ ಅವರಿಗೆ ಪುಸ್ತಕೋತ್ಸವದಲ್ಲಿ ಬೆಂಗಳೂರು ಮಹಾನಗರ ಬಿಜೆಪಿ ಘಟಕದ ಅಧ್ಯಕ್ಷ ಸುಬ್ಬನರಸಿಂಹ ಮತ್ತು ರಾಜ್ಯ ಬಿಜೆಪಿ ವಕ್ತಾರ ಪ್ರಕಾಶ್ ಶೇಷರಾಘವಾಚಾರ್ ಮುಖಾಮುಖಿಯಾದರು. ಅವರಿಗೆ ಹಸ್ತ ಲಾಘವ ನೀಡಿದ ಬಳಿಕ ಕುಮಾರಸ್ವಾಮಿ ಪುಸ್ತಕಗಳತ್ತ ಕಣ್ಣು ಹಾಯಿಸಿದರು.

25ರ ತನಕ ಪುಸ್ತಕೋತ್ಸವ ನಡೆಯಲಿದೆ
ಬೆಂಗಳೂರು ಪುಸ್ತಕ ಪ್ರಕಾಶಕರು ಮತ್ತು ಮಾರಾಟಗಾರರ ಸಂಘ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ 7 ದಿನಗಳ ಕಾಲ 12ನೇ ವರ್ಷದ ಪುಸ್ತಕೋತ್ಸವವನ್ನು ಆಯೋಜಿಸಿದ್ದು, ಅಕ್ಟೋಬರ್ 19ರಂದು ಉತ್ಸವಕ್ಕೆ ಚಾಲನೆ ಸಿಕ್ಕಿದೆ. ಅಕ್ಟೋಬರ್ 25ರ ತನಕ ಉತ್ಸವ ನಡೆಯಲಿದೆ. 300 ಪುಸ್ತಕಮಳಿಗೆಗಳಿದ್ದು, ಹಲವಾರು ಭಾಷೆಯ ಪುಸ್ತಕಗಳು ಲಭ್ಯವಿವೆ.












Click it and Unblock the Notifications