ಫ್ಲೆಕ್ಸ್, ರಸ್ತೆಗುಂಡಿ ಮುಗಿತು, ರಾಜಕಾಲುವೆ ಮೇಲೆ ಹೈಕೋರ್ಟ್ ಕೆಂಗಣ್ಣು

ಬೆಂಗಳೂರು, ಸೆ.26: ಬಿಬಿಎಂಪಿ ವ್ಯಾಪ್ತಿಯಲ್ಲಿನ ಬ್ಯಾನರ್, ಫ್ಲೆಕ್ಸ್ ತೆರವು ರಸ್ತೆಗುಂಡಿ ಭರ್ತಿ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಹೈಕೋರ್ಟ್ ಸೂಚನೆ ನೀಡಿತ್ತು ಇದೆಲ್ಲಾ ಮುಗಿದ ನಂತರ ಇದೀಗ ರಾಜಕಾಲುವೆ ನಿರ್ವಹಣೆ ವೈಫಲ್ಯವನ್ನು ಗಂಭೀರವಾಗಿ ಪರಿಗಣಿಸಿದೆ.

ರಾಜಕಾಲುವೆ ನಿರ್ವಹಣೆ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಕರೆಸಿಕೊಂಡು ಮುಖ್ಯ ನ್ಯಾಯಮೂರ್ತಿಗಳು ಹಲವು ಸಲಹೆಗಳನ್ನು ನೀಡಿದ್ದಾರೆ, ಈ ಕುರಿತು ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್ ಜಿ ಪಂಡಿತ್ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿದೆ.

ನ್ಯಾಯಮೂರ್ತಿಗಳ ಸಲಹೆಗಳೇನು?:ಈಗಿರುವ ಸಮಿತಿ ನಡೆಸುತ್ತಿರುವ ಎರಡು ಸಭೆಗಳ ಬದಲಾಗಿ ಪ್ರತಿ ವಾರ ಸಭೆ ನಡೆಸಬೇಕು, ಬೆಂಗಳೂರಿನ ಸರ್ವಾಂಗೀಣ ವಲಯದ ದೈನಂದಿನ ಸಮಸ್ಯೆಗಳ ಕುರಿತಂತೆ ಈಗಿರುವ ಸಮಿತಿಗೆ ಹೈಕೋರ್ಟ್ ಹಿರಿಯ ವಕೀಲರನ್ನು ನೇಮಕ ಮಾಡಬೇಕು.

HC insists on main canal in Bengaluru after flex and potholes

ರಾಜಕಾಲುವೆ ನಿರ್ವಹಣೆಯಲ್ಲಿ ಬೆಂಗಳೂರು ಒಳಚರಂಡಿ ಮಂಡಳಿ ಹಾಕಿರುವ ಪೈಪ್ ಲೈನ್ ಗಳ ಕುರಿತಂತೆ ಇರುವ ದೂರುಗಳನ್ನು ಸರಿಯಾಗಿ ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು ಸೆ.27ಕ್ಕೆ ಮುಂದೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+