Haj Bhavan fire accident: ತನಿಖೆಗೆ ಸಮಿತಿ ರಚನೆ, ವರದಿ ಕೇಳಿದ ಸಚಿವ ರಹೀಮ್ ಖಾನ್

ಬೆಂಗಳೂರು, ಅಕ್ಟೋಬರ್ 30: ನಗರದ ಕಳೆದ ಶನಿವಾರ ಹಜ್ ಭವನದಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, ಒಟ್ಟು ಸುಮಾರು 04 ಕೋಟಿ ರೂಪಾಯಿ ನಷ್ಟವಾಗಿದೆ. ಈ ಸಂಬಂಧ ಸೂಕ್ತ ತನಿಖೆ ನಡೆಸಿ ಅವಘಡಕ್ಕೆ ಕಾರಣವೇನು ಎಂಬುದರ ಬಗ್ಗೆ ವರದಿ ಸಲ್ಲಿಸುವಂತೆ ಹಜ್ ಮತ್ತು ಪೌರಾಡಳಿತ ಸಚಿವ ರಹೀಮ್ ಖಾನ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಂಗಳೂರಿನ ಹೆಗಡೆ ನಗರದ ಬಳಿ ಇರುವ ತಿರುಮನೇಹಳ್ಳಿಯಲ್ಲಿರುವ ಹಜ್ ಭವನಕ್ಕೆ ಭೇಟಿ ನೀಡಿ ಬೆಂಕಿಗೆ ಹೊತ್ತಿ ಉರಿದ ಹಜ್ ಭವನವನ್ನು ಸಚಿವರು ಖುದ್ದು ಪರಿಶೀಲಿಸಿದರು. ನಂತರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಶನಿವಾರ ಶಾಟ್‌ ಸರ್ಕೀಟ್‌ನಿಂದ ಬೆಂಕಿ ಅವಘಡ ಸಂಭವಿಸಿ ಅಪಾರ ನಷ್ಟವಾಗಿದೆ. ಅದರ ತನಿಖೆಗೆ ಸಮಿತಿ ರಚನೆ ಮಾಡಲಾಗಿದೆ ಎಂದು ತಿಳಿಸಿರು.

haj-bhavan-fire-accident

ಬೆಂಕಿಗೆ ಹಜ್‌ ಭವನದಲ್ಲಿ ಸಭಾಂಗಣಕ್ಕೆ ಹೊಂದಿಕೊಂಡಿರುವ ಗ್ರಂಥಾಲಯದ ಮೇಲ್ಛಾವಣಿಯ ಪಕ್ಕದಲ್ಲಿರುವ 900 ಆಸನ ಸಾಮರ್ಥ್ಯದ ಸಭಾಂಗಣ ಸುಟ್ಟು ಹೋಗಿದೆ. ಈಗಾಗಲೇ ಪ್ರಾಥಮಿಕ ತನಿಖೆಯಿಂದ 3.5-4 ಕೋಟಿ ರೂಪಾಯಿಯಷ್ಟು ನಷ್ವವಾಗಿದೆ ಎಂದು ಅಂದಾಜಿಸಲಾಗಿದೆ ಎಂದರು.

ಕೊತ್ತನೂರು ಠಾಣೆಯಲ್ಲಿ ದೂರು ದಾಖಲು, ತನಿಖೆ

ಇಡೀ ಘಟನೆಯ ಬಗ್ಗೆ ವಿವರವಾಗಿ ತನಿಖಾ ವರದಿಯನ್ನು ಸಲ್ಲಿಸಲು ನಾನು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಘಟನೆಗೆ ಸಂಬಂಧಿಸಿದಂತೆ ಹಜ್ ಸಮಿತಿಯ ಅಧಿಕಾರಿಗಳು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರು ಸಹ ತನಿಖೆ ಕೈಗೊಂಡಿದ್ದಾರೆ.

haj-bhavan-fire-accident

ರಾಜ್ಯ ವಸತಿ ಮಂಡಳಿಯ (KHB) ಎಂಜಿನಿಯರ್ ಗಳು, ಅಗ್ನಿಶಾಮಕ ದಳದವರು ಹಾಗೂ ಬೆಸ್ಕಾಂ ಎಂಜಿನಿಯರ್ ಗಳು ಪ್ರತ್ಯೇಕವಾಗಿ ಪರಿಶೀಲಿಸಲಿದ್ದಾರೆ. ಮುಂದಿನ ಮೂರು ದಿನಗಳಲ್ಲಿ ತನಿಖಾ ವರದಿ ಸಲ್ಲಿಕೆ ಆಗಲಿದೆ. ಅದರ ಆಧರಿಸಿಯೇ ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸಲಾಗುವುದು ಎಂದರು.

ಅದೃಷ್ಟವಶಾತ್ ಅಗ್ನಿ ದುರಂತದಲ್ಲಿ ಯಾವುದೇ ಸಾವು, ನೋವು ಸಂಭವಿಸಲಿಲ್ಲ. ಐಎಎಸ್, ಕೆಎಎಸ್ ಪರೀಕ್ಷೆಯ ತರಬೇತಿಗೆ ಮಕ್ಕಳು ಇಲ್ಲಿಗೆ ಬರುವವರಿದ್ದಾರೆ. ಅವರಿಗೆ ಯಾವುದೆ ರೀತಿಯ ತೊಂದರೆ ಆಗಬಾರದೆಂದು ಹಜ್‍ಭವನದ ಹಿಂಭಾಗದಲ್ಲಿರುವ ಮತ್ತೊಂದು ಕಟ್ಟಡದಲ್ಲಿ ತರಬೇತಿ ತರಗತಿಗಳನ್ನು ನಡೆಸಲಾಗುವುದು ಎಂದು ಸಚಿವರುವಿವರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+