ಬೆಂಗಳೂರು: ವಂಚಕ ಗುರುಮೂರ್ತಿ ಸೃಷ್ಟಿ ಕಚೇರಿಗೆ ಬೀಗ

ಬೆಂಗಳೂರು, ಮಾ, 28: ಬಂಜೆತನ ನಿವಾರಣೆ ಹೆಸರಿನಲ್ಲಿ ಮಹಿಳೆಯರನ್ನು ವಂಚಿಸಿದ್ದ ಕೆ.ಟಿ.ಗುರುಮೂರ್ತಿಯ ಸೃಷ್ಟಿ ಗ್ಲೋಬಲ್ ಸಂಸ್ಥೆಗೆ ಸರ್ಕಾರದ ಆದೇಶದಂತೆ ಶನಿವಾರ ಬೀಗ ಹಾಕಲಾಗಿದೆ.

ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಜನಿ ನೇತೃತ್ವದಲ್ಲಿ ರಾಜ್ಯ ಸರ್ಕಾರದ ಆದೇಶವನ್ನು ಪಾಲಿಸಲಾಗಿದ್ದು ಬಸವೇಶ್ವರ ನಗರದಲ್ಲಿರುವ ಸೃಷ್ಟಿ ಕಚೇರಿಗೆ ಬೀಗ ಶನಿವಾರ ಬೆಳಗ್ಗೆ ಬೀಗ ಹಾಕಲಾಯಿತು.[ಜಡ್ಜ್ ಮುಂದೆ ತಪ್ಪೊಪ್ಪಿಕೊಂಡ 'ಸೃಷ್ಟಿ' ಗುರುಮೂರ್ತಿ]

bengaluru

ಬೆಂಗಳೂರು ನಗರದ ವಿವಿಧ ಬಡಾವಣೆಗಳಲ್ಲಿ ಮೆಡಿಕೆರ್ ಸೆಂಟರ್ ತೆರೆದು ನಕಲಿ ದಾಖಲೆಗಳನ್ನು ಇಟ್ಟುಕೊಂಡು ಮಹಿಳೆಯರಲ್ಲಿನ ಬಂಜೆತನ ನಿವಾರಿಸುವ ನೆಪದಲ್ಲಿ 2 ರಿಂದ 12 ಲಕ್ಷ ರೂ.ಗಳ ವರೆಗೆ ವಸೂಲಿ ಮಾಡಿದ ಎಂಬ ಆರೋಪದಲ್ಲಿ ಗುರುಮೂರ್ತಿ ಮೇಲೆ ದೂರು ದಾಖಲಾಗಿತ್ತು.[ಬಂಜೆತನ ನಿವಾರಕ 'ನಕಲಿ' ವೈದ್ಯ ಗುರುಮೂರ್ತಿ ಸೆರೆ?]

ಡಾಕ್ಟರ್ ಪದವಿ ಪಡೆಯದೆ ನಕಲಿ ದಾಖಲಾತಿಗಳನ್ನು ಇಟ್ಟುಕೊಂಡು ಸ್ತ್ರೀ ರೋಗ ತಜ್ಞ ಎಂದು ಮಹಿಳೆಯರಿಗೆ ಚಿಕಿತ್ಸೆ ನೀಡುತ್ತಿದ್ದಮ ಗುರುಮೂರ್ತಿ ವಿರುದ್ಧ ಕಾಮಾಕ್ಷಿಪಾಳ್ಯ, ನಂದಿನಿ ಲೇಔಟ್, ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಗುರುಮೂರ್ತಿಯನ್ನು ಜನವರಿ ತಿಂಗಳಲ್ಲಿ ಬಂಧಿಸಿದ ಪೊಲೀಸರು ನಿರಂತರ ವಿಚಾರಣೆ ನಡೆಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+