Google Ananta: ಬೆಂಗಳೂರಿನಲ್ಲಿ ಗೂಗಲ್ ಕಂಪನಿಯ ಅತೀ ದೊಡ್ಡ ಕಚೇರಿ ಆರಂಭ: ವಿಶೇಷತೆಗಳು
ಬೆಂಗಳೂರು, ಫೆಬ್ರವರಿ 20: ವಿಶ್ವದ ಬೃಹತ್ ಕಂಪನಿಗಳಲ್ಲಿ ಒಂದಾಗಿರುವ ಗೂಗಲ್ ಕಂಪನಿಯು (Google company) ಕ್ಯಾಲಿಫೋರ್ನಿಯಾದ ನಂತರ ಕರ್ನಾಟಕ ರಾಜಧಾನಿ ಬೆಂಗಳೂರಿನ ಮಹಾದೇವಪುರದಲ್ಲಿ ಬೃಹತ್ ಕ್ಯಾಂಪಸ್ (Google Ananta) ಅನ್ನು ತೆರೆದಿದೆ. ಇದು ದೇಶದ ಡಿಜಿಟಲ್, ತಂತ್ರಜ್ಞಾನ ವಿಚಾರದಲ್ಲಿ ಭಾರತಕ್ಕೆ ಅಪಾರ ಕೊಡುಗೆ ನೀಡುವ ವಿಶ್ವಾಸವಿದೆ. ಗೂಗಲ್ ಈ ಕ್ಯಾಂಪಸ್‌ಗೆ 'ಅನಂತ್' ಎಂದು ಹೆಸರಿಟ್ಟಿದೆ. (ಅನಂತ್ ಎಂದರೆ ಸಂಸ್ಕೃತದಲ್ಲಿ ಅಪರಿಮಿತ), ಹಾಗಾದರೆ ಈ ವಿಶಾಲ ಕ್ಯಾಂಪಸ್ ನಲ್ಲಿ ಏನೆಲ್ಲ ಇರಲಿದೆ?, ವೈಶಿಷ್ಟ್ಯತೆಗಳೇನು? ಇಲ್ಲಿದೆ ವಿವರ.
ಗೂಗಲ್‌ಗೆ ಕ್ಯಾಲಿಫೋರ್ನಿಯಾದಲ್ಲಿ ಪ್ರಧಾನ ಕಚೇರಿ ಇದೆ. ಅದರ ನಂತರ ಬೆಂಗಳೂರಿನ ಹೊರವಲಯದಲ್ಲಿ ದೊಡ್ಡ ಕಚೇರಿ ಆರಂಭಿಸಿದೆ. ಇದು ಗೂಗಲ್‌ನ ಎರಡನೇ ಅತಿ ದೊಡ್ಡ ಕ್ಯಾಂಪಸ್ (ಅನಂತ್) ಎಂದು ಹೇಳಲಾಗುತ್ತಿದೆ. ಇದನ್ನು ನಿರ್ಮಿಸಲು ಬಾಗ್ಮನೆ ಟೆಕ್ ಪಾರ್ಕ್ ಗೆ 6 ವರ್ಷ ಸಮಯ ಹಿಡಿದಿದೆ. ಇದರ ಅಂತಿಮ ವಿನ್ಯಾಸಕ್ಕೆ 11 ತಿಂಗಳು ಹಿಡಿದಿದೆ.

ವಿಶಾಲ ಕಚೇರಿ, ಸಾವಿರಾರು ತಜ್ಞರ ನೆಲೆ
ಒಟ್ಟು 1.6 ಮಿಲಿಯನ್ ಚದರ ಅಡಿ ವಿಸ್ತೀರ್ಣ ಕಟ್ಟಡದಲ್ಲಿ 'ಗೂಗಲ್ ಅನಂತ್' ತಲೆ ಎತ್ತಿದೆ. ಇದರಲ್ಲಿ 5,000 ಕ್ಕೂ ಹೆಚ್ಚು ತಂತ್ರಜ್ಞರಿಗೆ ಸ್ಥಳಾವಕಾಶ ಇದೆ. ಸದ್ಯ ಗೂಗಲ್ ಕಂಪನಿ ಅಂದಾಜು 10,000 ಭಾರತೀಯ ಉದ್ಯೋಗಿಗಳನ್ನು ಹೊಂದಿದೆ. ಕ್ಯಾಲಿಫೋರ್ನಿಯಾ ಬಿಟ್ಟು ಭಾರತದಲ್ಲಿ ಇಂಥದ್ದೊಂದು ದೊಡ್ಡ ಕ್ಯಾಂಪಸ್ ಹೊಂದಿರುವುದು ವಿಶೇಷವಾಗಿದೆ.
ಭಾರತವು ಪ್ರಪಂಚದೊಂದಿಗೆ ಮತ್ತಷ್ಟು ಪರಿಣಾಮಕಾರಿಯಾಗಿ ತೆರೆದುಕೊಳ್ಳುವ ಪ್ರಯತ್ನಗಳಿಗೆ ಈ ಕ್ಯಾಪಂಸ್ ಮಹತ್ವದ ಪಾತ್ರವಹಿಸಲಿದೆ. ಬಹುದಿನಗಳಿಂದ ಭಾರತದಲ್ಲಿ ಕ್ಯಾಂಪಸ್ ಆರಂಭಿಸುವ ಇಚ್ಚೆ ಇತ್ತು. ತಂತ್ರಜ್ಞಾನಗಳನ್ನು ಬಹುಬೇಗ ಅಳವಡಿಸಿಕೊಳ್ಳುವ ಭಾರತದಲ್ಲಿ ಮೇಲೆ ಗೂಗಲ್ ಹೆಚ್ಚು ಗಮನ ಕೇಂದ್ರೀಕರಿಸಿದೆ ಎಂಧು ಗೂಗಲ್ ಡೀಪ್‌ಮೈಂಡ್‌ನ ಉತ್ಪನ್ನ ಉಪಾಧ್ಯಕ್ಷ ಆನಂದ್ ರಂಗರಾಜನ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಲಕ್ಷಾಂತರ ಬಳಕೆದಾರರನ್ನು ತಲುಪುವ ಉದ್ದೇಶ
ಇಂದು ತಂತ್ರಜ್ಞಾನ ಬೆಳವಣಿಗೆ ಅತೀ ವೇಗವಾಗಿದೆ. ಸಂಶೋಧನೆ, ಅಭಿವೃದ್ಧಿ, ಪಾಲುದಾರಿಕೆ ಇನ್ನಿತರ ರಂಗದಲ್ಲಿ ಮುಂಚೂಣಿಯಲ್ಲಿದೆ. ತಂತ್ರಜ್ಞಾನ ಪ್ರಗತಿ ಭಾಗವಾಗಿ, ಉತ್ತಮ ಪಾಲುದಾರಿಗೆ ಭಾಗವಾಗಿ ಇಲ್ಲಿ ಕ್ಯಾಂಪಸ್ ತೆರೆಯಲಾಗಿದೆ. ಗೂಗಲ್ ಉತ್ಪನ್ನಗಳು, ಅವಕಾಶಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರನ್ನು ತಲುಪುವ ಉದ್ದೇಶ ಹೊಂದಲಾಗಿದೆ ಎಂದರು.
ಬೆಂಗಳೂರು ಕ್ಯಾಂಪಸ್‌ನಲ್ಲಿ ಏನೆಲ್ಲ ಇರಲಿದೆ?
ಭಾರತ ಸೇರಿದಂತೆ ಪ್ರಪಂಚದಲ್ಲಿ ಎದುರಿಸುತ್ತಿರುವ ಒಂದಷ್ಟು ಸಮಸ್ಯೆಗಳಿಗೆ 'ಅನಂತ್' ಪರಿಹಾರ ಒದಗಿಸಲಿದೆ. ಈ ನಿಟ್ಟಿನಲ್ಲಿ ವಿಶ್ವದ ಲಕ್ಷಾಂತರ ಬಳಕೆದಾರರು, ವ್ಯವಹಾರ, ವಲಯ, ಸ್ಟಾರ್ಟ್‌ಅಪ್‌ಗಳನ್ನು ತಲುಪಲಿದೆ. ಪರಿಹಾರ ಒದಗಿಸಲಿದೆ. ಆಂಡ್ರಾಯ್ಡ್, ಸರ್ಚ್, ಪ್ಲೇ, ಪೇ, ಕ್ಲೌಡ್, ನಕ್ಷೆಗಳು ಮತ್ತು ಗೂಗಲ್ ಡೀಪ್‌ಮೈಂಡ್ ಮುಂತಾದ ವಿವಿಧ ಗೂಗಲ್ ಘಟಕಗಳ ತಂಡಗಳು ಈ ಬೆಂಗಳೂರು ಕ್ಯಾಂಪಸ್‌ನಲ್ಲಿ ಇರಲಿವೆ ಎಂದು ತಿಳಿಸಿದ್ದಾರೆ.
ಭಾರತದಲ್ಲಿ AI-ಚಾಲಿತ ತಂತ್ರಜ್ಞಾನ ಅಳವಡಿಕೆ, ವಿಶೇಷ AI ಮಾದರಿ ಪರಿಚಯ, Google Pay ನಂತಹ ಆರ್ಥಿಕ ಡಿಜಿಟಲ್ ವಿಧಾನಗಳಲ್ಲೂ ಸಹಾಯ ಮಾಡಲು ಕಂಪನಿ ಮಹತ್ವದ ಪಾತ್ರ ವಹಿಸುವ ಭರವಸೆ ಇದೆ.












Click it and Unblock the Notifications