ಹೊಸಗುಡ್ಡದಳ್ಳಿ ಪ್ರಕರಣ : ನ್ಯಾಯಾಧೀಶರ ಎದುರು ಬಾಲಕಿ ಹೇಳಿಕೆ
ಬೆಂಗಳೂರು, ಜ. 10: ದೈಹಿಕ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾಳೆ ಎನ್ನಲಾದ ಬ್ಯಾಟರಾಯನಪುರದ ಹೊಸಗುಡ್ಡದಳ್ಳಿ ಖಾಸಗಿ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿ ಎಸಿಎಂಎಂ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಎದುರು ಹೇಳಿಕೆ ನೀಡಿದ್ದಾಳೆ.

ಶಾಲೆಯಲ್ಲಿ ಗಲಾಟೆ ನಡೆದಾಗ ಬಂಧಿಸಿರುವ 20 ಜನರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಗಲಭೆಯ ದೃಶ್ಯಗಳನ್ನು ಮಾಧ್ಯಮದವರಿಂದ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. [ಲೈಂಗಿಕ ದೌರ್ಜನ್ಯ ನಡೆದದ್ದು ಊಟದ ಸಂದರ್ಭ]
ದೈಹಿಕ ಶಿಕ್ಷಕ ತಮ್ಮ ಮಗಳನ್ನು ದಾಸ್ತಾನು ಕೊಠಡಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಆರೋಪಿಸಿ ವಿದ್ಯಾರ್ಥಿನಿ ಹಾಗೂ ಪೋಷಕರು ದೂರು ನೀಡಿದ್ದರು. ನಂತರ ವಿದ್ಯಾರ್ಥಿನಿಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದರು. [ಲೈಂಗಿಕ ದೌರ್ಜನ್ಯ : ನಿಜವಾಗಿ ನಡೆದದ್ದೇನು?]












Click it and Unblock the Notifications