ಎಟಿಎಂ ಕಾರ್ಡ್ ಮೂಲಕ ಬಿಎಂಟಿಸಿ ಬಸ್ ಪಾಸ್ ಪಡೆಯಿರಿ

ನೋಟು ನಿಷೇಧ ಸಮಸ್ಯೆಯಿಂದಾಗಿ ನಗದು ಸಮಸ್ಯೆ ಹೆಚ್ಚಾಗಿರುವುದರಿಂದ ಮಾಸಿಕ ಬಸ್ ಗಳನ್ನು ಸ್ವೈಪಿಂಗ್ ಯಂತ್ರದ ಮೂಲಕ ವಿತರಿಸಲು ಬಿಎಂಟಿಸಿ ನಿರ್ಧರಿಸದೆ. ನಗರದ 10 ಟಿಟಿಎಂಸಿ ಕೇಂದ್ರ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ಸ್ವೈಪಿಂಗ್ ಯಂತ್ರಅಳವಡಿಸಿದೆ

ಬೆಂಗಳೂರು, ನವೆಂಬರ್,28: ಅಧಿಕ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ನಂತರ ನಗದು ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಈ ಸಮಸ್ಯೆ ನಿವಾರಣೆಗಾಗಿ ಹಾಗು ಪಾರದರ್ಶಕತೆ ಕಾಯ್ದುಕೊಳ್ಳಲು ನಗದು ರಹಿತ ವ್ಯವಹಾರದತ್ತ ಬಿಎಂಟಿಸಿ ಹೆಜ್ಜೆ ಇಟ್ಟಿದೆ.

ಇನ್ನು ಮುಂದೆ ಮಾಸಿಕ ಬಸ್ ಪಾಸ್ ಪಡೆಯುವವರು ಎಟಿಎಂ ಕಾರ್ಡ್ ಮೂಲಕವೇ ಪಡೆಯಬಹುದು ಎಂದು ತಿಳಿಸಿದೆ. ಎಟಿಎಂ ಮುಂದೆ ಕ್ಯೂ ನಿಂತು ಹಣ ಡ್ರಾ ಮಾಡಿ ಪಾಸ್ ಖರೀದಿಸಬೇಕಾದ ಅಗತ್ಯವನ್ನು ಸಂಸ್ಥೆ ತಪ್ಪಿಸಿದೆ.

Get BMTC monthly bus pass through swiping machine

ಲಕ್ಷಾಂತರ ಜನರ ಪ್ರಯಾಣಿಕರು ಪ್ರತಿ ನಿತ್ಯ ಬಿಎಂಟಿಸಿಯನ್ನೇ ನೆಚ್ಚಿಕೊಂಡು ಸಂಚರಿಸುತ್ತಿದ್ದಾರೆ. ಸುಮಾರು 6 ಕೋಟಿ ರೂ. ಮೊತ್ತದ ಮಾಸಿಕ್ ಪಾಸ್ ಗಳು ವಿತರಣೆಯಾಗುತ್ತಿವೆ.

ಸಾಮಾನ್ಯ ದಿನಗಳಲ್ಲೇ ಚಿಲ್ಲರೆ ಸಮಸ್ಯೆ ಎದುರಿಸುತ್ತಿದ್ದ ಬಿಎಂಟಿಸಿ ಸಿಬ್ಬಂದಿ ನೋಟು ನಿಷೇಧದ ನಂತರ ಮತ್ತಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕಾರಣಕ್ಕಾಗಿಯೇ ರೂ.500 ನೋಟಿಗೆ 10 ದಿನದ ಬಾಸ್ ಅನ್ನು ಸಹ ಬಿಎಂಟಿಸಿ ವಿತರಿಸಿತ್ತು.

ಇದೀಗ ಚಿಲ್ಲರೆ ಸಮಸ್ಯೆ ಮತ್ತು ನೋಟು ನಿಷೇಧ ಸಮಸ್ಯೆ ನಾಗರಿಕಕರನ್ನು ಕಾಡದಂತೆ ನಗರದ 10 ಟಿಟಿಎಂಸಿ ಸೇರಿ 56 ಪ್ರಮುಖ ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿ ಡೆಬಿಟ್ ಹಾಗು ಕ್ರೆಡಿಟ್ ಕಾರ್ಡ್ ಸ್ವೈಪಿಂಗ್ ಯಂತ್ರಗಳನ್ನು ಸ್ಥಾಪಿಸಿದೆ.

ನೋಟು ನಿಷೇಧದಿಂದಾಗಿ ಚಿಲ್ಲರೆ ಸಮಸ್ಯೆ ಖಂಡಿತ ಕಾಡುತ್ತದೆ ಆದ್ದರಿಂದ ಡೆಬಿಟ್ ಹಾಗು ಕ್ರೆಡಿಟ್ ಸ್ವೈಪ್ ಯಂತ್ರಗಳನ್ನು ಬಿಎಂಟಿಸಿಯ ಹಲವು ಕೇಂದ್ರಗಳಲ್ಲಿ ಅಳವಡಿಸಲಾಗಿದೆ. ಇದು ಶಾಶ್ವತವಾಗಿ ನಿಲ್ದಾಣಗಳಲ್ಲಿ ಲಭ್ಯವಿರಲಿದೆ ಎಂದು ಬಿಎಂಟಿಸಿ ತಿಳಿಸಿದೆ.

ಯಾವ ಯಾವ ನಿಲ್ದಾಣಗಳಲ್ಲಿ ಸ್ವೈಪಿಂಗ್ ಯಂತ್ರವಿದೆ?

ಶಿವಾಜಿನಗರ ಬಸ್ ನಿಲ್ದಾಣ, ದೇವನಹಳ್ಳಿ, ಹೆಸರಘಟ್ಟ, ಕೆ.ಆರ್.ಮಾರ್ಕೆಟ್, ನೆಲಮಂಗಲ, ಸರ್ಜಾಪುರ, ಕುಮಾರಸ್ವಾಮಿ ಲೇಔಟ್, ಜಾಲಹಳ್ಳಿ ಕ್ರಾಸ್, ಜೈ ಭೀಮಾನಗರ, ಪೀಣ್ಯ 2ನೇ ಹಂತ, ಕೆ.ಆರ್.ಪುರಂ, ಯಲಹಂಕ, ವಿದ್ಯಾರಣ್ಯಪುರ, ಬಸವೇಶ್ವನಗರ ಸೇರಿ 10 ಟಿಟಿಎಂಸಿ ಕೇಂದ್ರಗಳಲ್ಲಿ ಸ್ವೈಪಿಂಗ್ ಯಂತ್ರ ಲಭ್ಯವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+