Get Updates
Get notified of breaking news, exclusive insights, and must-see stories!

Election: ಮತದಾರರ ಪಟ್ಟಿಯಲ್ಲಿ ಉದ್ದೇಶಪೂರ್ವಕ ತಪ್ಪು: ಮ್ಯಾಪಿಂಗ್ ಮಾಡಿ ಸರಿಪಡಿಸಲು ಡಿಕೆ ಶಿವಕುಮಾರ್ ಮನವಿ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ನಡೆಸಲು ನಾಲ್ಕು ತಿಂಗಳು ಬಾಕಿ ಇದ್ದು, ಈಗಾಗಲೇ ಚುನಾವಣೆ ಆಯೋಗದಿಂದ ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಲಾಗಿದೆ. ನಿರಂತರ ಸಭೆಯಗಳ ಮೂಲಕ ಚುನಾವಣೆಗೆ ಅಗತ್ಯ ತಯಾರಿ ನಡೆಸಲಾಗುತ್ತಿದೆ. ಈ ಮಧ್ಯ ಪಟ್ಟಿಯಲ್ಲಿ ಒಂದಷ್ಟು ಉದ್ದೇಶಪೂರ್ವಕವಾಗಿ ತಪ್ಪುಗಳಾಗಿವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಆರೋಪಿಸಿದ್ದಾರೆ. ಪಟ್ಟಿ ಸಿದ್ಧಪಡಿಸುವಾಗ ತಪ್ಪುಗಳಾಗಿದ್ದು, ತಿದ್ದುಪಡಿ ಮಾಡಬೇಕು. ಮ್ಯಾಪಿಂಗ್ ಮಾಡುವಂತೆ ರಾಜ್ಯ ಚುನಾವಣೆ ಆಯೋಗಕ್ಕೆ ಅವರು ಪತ್ರ ಬರೆದಿದ್ದಾರೆ.

ಮಂಗಳವಾರ ರಾಜ್ಯ ಚುನಾವಣೆ ಆಯೋಗದ ಆಯುಕ್ತ ಜಿ.ಎಸ್. ಸಂಗ್ರೀಶಿ ಅವರನ್ನು ಅವರ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಶಾಸಕರು ಮತ್ತು ಸಚಿವ ತಂಡ ಭೇಟಿ ಮಾಡಿ ಮನವಿ ಸಲ್ಲಿಸಿತು. ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಡಿಕೆ ಶಿವಕುಮಾರ್ ಮನವಿ ಪತ್ರದಲ್ಲಿನ ಅಂಶಗಳನ್ನು ಉಲ್ಲೇಖಿಸಿದ್ದರು. ಮತದಾರರ ಪಟ್ಟಿಯಲ್ಲಿ ಅಲ್ಪಸಂಖ್ಯಾತರ ಇರುವ ಕಡೆಗಳಲ್ಲಿ ಹೆಸರುಗಳನ್ನು ಕೈ ಬಿಟ್ಟಿರುವ ಬಗ್ಗೆ, ಪಟ್ಟಿಯಲ್ಲಿ ಕಂಡು ಬಂದ ತಪ್ಪುಗಳನ್ನು ವಿವರಿಸಿದರು. ಅಗತ್ಯ ಮ್ಯಾಪಿಂಗ್ ಮಾಡುವಂತೆ ಮನವಿ ಮಾಡಿದ್ದಾರೆ. ತಪ್ಪುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಮನವಿ ಪತ್ರದೊಂದಿಗೆ ನೀಡಿದ್ದಾರೆ.

GBA Election 2026

ಮತದಾರರ ಪಟ್ಟಿಯಲ್ಲಿವೆ ಈ ತಪ್ಪುಗಳು

ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಅನೇಕ ಕಡೆಗಳಲ್ಲಿ ಚುನಾವಣಾ ಮತದಾರರ ಪಟ್ಟಿಯಲ್ಲಿ ಲೋಪದೋಷಗಳು ಕಂಡು ಬಂದಿವೆ. ಇದೆಲ್ಲವನ್ನು ಸರಿಪಡಿಸಲು ಬೀದಿವಾರು, ಮನೆವಾರು ಮ್ಯಾಪಿಂಗ್ ಮಾಡಬೇಕು. ಒಂದೇ ಕುಟುಂಬದ ಮತದಾರರನ್ನು ಬೇರೆ ಬೇರೆ ಮತಗಟ್ಟೆಗಳು ಹಾಗೂ ಬೇರೆ ವಾರ್ಡ್ ಗಳಿಗೆ ವಿಂಗಡಿಸಲಾಗಿದೆ. ಮತದಾರರ ವಿಳಾಸದಲ್ಲಿ ಮನೆ ಸಂಖ್ಯೆ ತಪ್ಪಾಗಿದೆ. ರಸ್ತೆ ಸಂಖ್ಯೆಗಳನ್ನು ತಪ್ಪಾಗಿ ನಮೂದಿಸಲಾಗಿದೆ.

ಇನ್ನೂ ಮತದಾರರ ಹೆಸರು ಎರಡು ಹಾಗೂ ಹೆಚ್ಚು ಬಾರಿ ಸೇರ್ಪಡೆ ಆಗಿದ್ದು ಪತ್ತೆ ಆಗಿದೆ. ಕೆಲವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದು ಗಮನಕ್ಕೆ ಬಂದಿದೆ. ಒಂದಷ್ಟು ಬೀದಿಗಳಲ್ಲಿರುವ ಮತದಾರರು ಹೆಸರುಗಳೇ ಪಟ್ಟಿಯಲ್ಲಿ ಕಾಣುತ್ತಿಲ್ಲ. ಮಾತ್ರವಲ್ಲದೇ ಕೆಲವು ಮತದಾರರ ವಿಳಾಸ ಸರಿಯಾಗಿದೆ ಆದರೆ ಅವರನ್ನು ಬೇರೆ ವಾರ್ಡ್ ಗಳಿಗೆ ಹಾಕಲಾಗಿದೆ.

ಕಣ್ತಪ್ಪಿನಿಂದ ಆದ ತಪ್ಪುಗಳಲ್ಲ: ಡಿಕೆಶಿ

ಇದೆಲ್ಲ ತಪ್ಪುಗಳು ಕಣ್ತಪ್ಪಿನಿಂದ ಆಗಿರುವಂಥದ್ದಲ್ಲ ಎಂದು ಮೇಲ್ನೋಟಕ್ಕೆ ಕಾಣಿಸುತ್ತದೆ. ಉದ್ದೇಶಪೂರ್ವಕವಾಗಿ ನಡೆದಂತೆ ಕಾಣಿಸುತ್ತದೆ. ಇದು ವ್ಯವಸ್ಥಿತವಾಗಿ ನಡೆದಂತಿದ್ದು, ಇದರಿಂದ ಮತದಾರರು ಹಾಗೂ ಬಿಎಲ್ಒಗಳು, ರಾಜಕೀಯ ಪಕ್ಷಗಳಲ್ಲಿ ಗೊಂದಲ ಉಂಟಾಗಿದೆ. ಮುಖ್ಯವಾಗಿ ಈ ತಪ್ಪುಗಳು ಸರಿಯಾಗದಿದ್ದರೆ ಮತದಾರರ ಪಟ್ಟಿಯ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗುತ್ತದೆ. ಮತದಾರರ ಪಟ್ಟಿಯಲ್ಲಿನ ಲೋಪದೋಷಗಳನ್ನು ಶಾಸ್ವತವಾಗಿ ಸರಿಪಡಿಸಬೇಕಾದ ಅಗತ್ಯವಿದೆ ಎಂದು ಡಿಕೆ ಶಿವಕುಮಾರ್ ಅವರು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ರಾಜ್ಯ ಚುನಾವಣೆ ಅಧಿಕಾರಿಗಳು, ಸಿಬ್ಬಂದಿ ಬೀದಿವಾರು ಹಾಗೂ ಮನೆವಾರು ಮ್ಯಾಪಿಂಗ್ ಮಾಡುವ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕು. ಈ ವೇಳೆ ರಾಜಕೀಯ ಪಕ್ಷಗಳ ಬಿಎಲ್‌ಒಗಳು ಅಧಿಕಾರಿಗಳ ಜೊತೆಗಿದ್ದರೆ ತಪ್ಪುಗಳನ್ನು ಸುಲಭವಾಗಿ ಸರಿಪಡಿಸಲು ಸಹಾಯವಾಗುತ್ತದೆ.

ಆದ್ದರಿಂದ ಎಲ್ಲ ಮತಗಟ್ಟೆಗಳ ವ್ಯಾಪ್ತಿಯ ಮನೆ ಮನೆಯ, ಬೀದಿಗಳು, ಮತದಾರರ ಮ್ಯಾಪಿಂಗ್ ಮಾಡಬೇಕು. ಇದರಿಂದ ನಿಖರತೆ ಹೆಚ್ಚಾಗುತ್ತದೆ. ಪಾರದರ್ಶಕ ಕರಡು ಮತದಾರರ ಪಟ್ಟಿ ಸಿದ್ಧವಾಗುತ್ತಿದೆ. ಚುನಾವಣೆಯು ಪಾರದರ್ಶಕವಾಗಿ ನಡೆಸಲು, ಚುನಾವಣಾ ಅಕ್ರಮ ತಡೆಯಲು ಸಾಧ್ಯವಾಗುತ್ತದೆ. ಮ್ಯಾಪಿಂಗ್ ವೇಳೆ ನಕಲಿ ಮತದಾರರನ್ನು ಕೈ ಬಿಡಬಹುದು, ಅರ್ಹರನ್ನು ಪಟ್ಟಿಗೆ ಸೇರಿಸಲು ಸಹಾಯವಾಗುತ್ತದೆ ಎಂದು ಅವರು ಒತ್ತಾಯಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+