ಬೆಂಗಳೂರಲ್ಲಿ ದೊಡ್ಡ ವ್ಯತ್ಯಾಸವೇನು ಆಗಿಲ್ಲ: ಮಾಜಿ ಐಪಿಎಸ್ ಅಧಿಕಾರಿ ಟ್ವೀಟ್ ವೈರಲ್
ಬೆಂಗಳೂರು: ಬೆಂಗಳೂರಿನ ಅವ್ಯವಸ್ಥೆಯ ಬಗ್ಗೆ ಧ್ವನಿ ಎತ್ತುವವರ ಸಂಖ್ಯೆ ಹೆಚ್ಚಳವಾಗಿದೆ. ಬೆಂಗಳೂರಿನ ಆಡಳಿತವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಬದಲಾದರೂ ಬೆಂಗಳೂರಿನ ಅವ್ಯವಸ್ಥೆ ಕಡಿಮೆ ಆಗಿಲ್ಲ ಎಂದು ಮಾಜಿ ಐಪಿಎಸ್ ಅಧಿಕಾರಿ ಹಾಗೂ ಬೆಂಗಳೂರಿನ ಮಾಜಿ ಪೊಲೀಸ್ ಕಮಿಷನರ್ ದೂರಿದ್ದಾರೆ. ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿರುವ ಟ್ವೀಟ್ ಇದೀಗ ವೈರಲ್ ಆಗುತ್ತಿದೆ.
ಬೆಂಗಳೂರಿನ ಆಡಳಿತದಲ್ಲಿ ಮಹತ್ವದ ಬದಲಾವಣೆಗಳು ಆಗಿವೆ. ಬೆಂಗಳೂರಿನ ಆಡಳಿತವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನಾಗಿ ಬದಲಾವಣೆ ಮಾಡಲಾಗಿದ್ದು, ಹಲವು ಮಹತ್ವದ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಇದರಲ್ಲಿ ಮುಖ್ಯವಾಗಿ ಬೆಂಗಳೂರಿನ ಸುಗಮ ಆಡಳಿತಕ್ಕಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಐದು ಪಾಲಿಕೆಗಳನ್ನೂ ರಚನೆ ಮಾಡಲಾಗಿದೆ. ಆದರೆ ವ್ಯವಸ್ಥೆ ಮಾತ್ರ ಬದಲಾಗಿಲ್ಲ ಎಂದು ಹಲವರು ದೂರಿದ್ದಾರೆ.

ಇದೀಗ ಬಿಜೆಪಿ ನಾಯಕ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿರುವ ಟ್ವೀಟ್ ವೈರಲ್ ಆಗುತ್ತಿದೆ. ಬಿಬಿಎಂಪಿಯಿಂದ ಜಿಬಿಎಗೆ ಪರಿವರ್ತನೆ ಪೂರ್ಣಗೊಂಡಿದೆ.
ಒಬ್ಬರು ಮುಖ್ಯ ಆಯುಕ್ತರು + 5 ಸ್ಥಳೀಯ ಆಯುಕ್ತರು + ಅಪಾರ ಅಧಿಕಾರಿ ವರ್ಗ + ಕಚೇರಿಗಳು + ಸಿಬ್ಬಂದಿ ಮತ್ತು ವಾಹನ ವ್ಯವಸ್ಥೆ ಇದೆ. ಬೆಂಗಳೂರಿಗನಾಗಿ, ನನಗೆ ಯಾವುದೇ ಬದಲಾವಣೆಗಳು ಇದರಲ್ಲಿ ಕಾಣಿಸಲೇ ಇಲ್ಲ
1.) ಚಾಮರಾಜಪೇಟೆ ಕ್ಷೇತ್ರದ ರಸ್ತೆಗಳು ಕೊಳಕಾಗಿವೆ, ರಸ್ತೆಗಳಲ್ಲಿ ಕಸ ಬರುತ್ತಿದೆ.
2.) ಉದ್ಯಾನವನಗಳು ಕೊಳಕಾಗಿವೆ, ಮುರಿದ ಪೀಠೋಪಕರಣಗಳಿಂದ ತುಂಬಿವೆ ಮತ್ತು ಬೀದಿ ದೀಪಗಳಿಲ್ಲ.
3.) ರಸ್ತೆಗಳು ಗುಂಡಿಗಳಿಂದ ಕೂಡಿವೆ
4.) ಜಿಬಿಎ ಹೆರಿಗೆ ಆಸ್ಪತ್ರೆಗಳು ಯಥಾಸ್ಥಿತಿಯಲ್ಲಿವೆ.
5.) ಜಿಬಿಎ ಶಾಲೆಗಳು ಹಾಗೆಯೇ ಇವೆ.
6.) ಸ್ಮಶಾನವು ಇದ್ದಂತೆಯೇ ಕೊಳಕಾಗಿದೆ.
7.) ಪಾದಚಾರಿ ಮಾರ್ಗಗಳು ಆಕ್ರಮಿಸಲ್ಪಟ್ಟಿವೆ
8.) ಅನಧಿಕೃತ ರಸ್ತೆ ಕಡಿತ ಇನ್ನೂ ನಡೆಯುತ್ತಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ಅಥವಾ ಯಾರಾದರೂ ನಮಗೆ ಯಾವ ಉತ್ತಮ ಕೆಲಸ ನಡೆದಿದೆ ಎಂದು ಹೇಳಬಹುದೇ. ಅಧಿಕಾರಿಗಳು ಸಭೆಗಳಲ್ಲಿ ಅಥವಾ ತಮ್ಮ ಸಚಿವರಿಗೆ ಅಥವಾ ಸಂಬಂಧಪಟ್ಟವರಿಗೆ ಮಾಹಿತಿ ನೀಡುವಲ್ಲಿ ತುಂಬಾ ಕಾರ್ಯನಿರತರಾಗಿದ್ದಾರೆ. ನಗರದಾದ್ಯಂತ ಇದೇ ಪರಿಸ್ಥಿತಿ ಇದೆಯೇ ಅಥವಾ ನಾನು ತುಂಬಾ ನಿರೀಕ್ಷಿಸುತ್ತಿದ್ದೇನೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಈ ಟ್ವೀಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರಿಗೆ ಭಾಸ್ಕರ್ ರಾವ್ ಅವರು ಟ್ಯಾಗ್ ಮಾಡಿದ್ದಾರೆ.
The transition from BBMP to GBA is complete.
— Bhaskar Rao (@Nimmabhaskar22) January 4, 2026
One BIG Commissioner + 5 Local Commissioners+ Huge Behemoth of Officers + Offices+Staff and Vehicles.
As a Bengalurean, I have NOT felt any Change.
1.)Chamrajpete Constituency Roads are as Dirty, Strewn with Garbage coming on Roads.…
ಭಾಸ್ಕರ್ ರಾವ್ ಅವರು ಟ್ವೀಟ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಜನ ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಹಲವರು ಹೌದು ಬೆಂಗಳೂರಿನಲ್ಲಿ ನಮಗೆ ಹೇಳಿಕೊಳ್ಳುವಂತಹ ಬದಲಾವಣೆಗಳು ಕಾಣಿಸುತ್ತಿಲ್ಲ ಎಂದೇ ಹೇಳಿದ್ದಾರೆ.
ಇನ್ನು ಭಾಸ್ಕರ್ ರಾವ್ ಅವರು ಮಾಡಿರುವ ಟ್ವೀಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.












Click it and Unblock the Notifications