ಮೋದಿ, ಬ್ರಾಹ್ಮಣರ ಕಂಡರೆ ಉರಿದುಬೀಳುತ್ತಿದ್ದ ಗೌರಿ
Recommended Video

ಬೆಂಗಳೂರು, ಸೆಪ್ಟೆಂಬರ್ 03 : ನರೇಂದ್ರ ಮೋದಿ, ಬಿಜೆಪಿ ಮತ್ತು ಬ್ರಾಹ್ಮಣರ ಕಟು ಟೀಕಾವಾದಿಯಾಗಿದ್ದ 55 ವರ್ಷಗಳ ಪತ್ರಕರ್ತೆ ಗೌರಿ ಲಂಕೇಶ್, 'ಖಾಕಿ ಚಡ್ಡಿ'ಗಳ ವಿಷಯಕ್ಕೆ ಬಂದರೆ ಉರಿದು ಬೀಳುತ್ತಿದ್ದರು. ತಮ್ಮ ವಿಚಾರಲಹರಿಯನ್ನು ಅವರು ತಮ್ಮ 'ಲಂಕೇಶ್' ವಾರಪತ್ರಿಕೆಯಲ್ಲಿ ಪುಂಖಾನುಪುಂಖವಾಗಿ ಹರಿಯಬಿಡುತ್ತಿದ್ದರು.
ನರೇಂದ್ರ ಮೋದಿಯವರು ಸಂಪುಟ ವಿಸ್ತರಣೆ ಮಾಡಿ, ಎಲ್ಲರಿಗೂ ಅಚ್ಚರಿ ಮೂಡಿಸುವಂತೆ ನಿರ್ಮಲಾ ಸೀತಾರಾಮನ್ ಅವರನ್ನು ಕೇಂದ್ರ ರಕ್ಷಣಾ ಸಚಿವೆಯನ್ನಾಗಿ ಮಾಡಿದ್ದಾಗ, ಫೇಸ್ ಬುಕ್ಕಿನಲ್ಲಿ, ಕೆಲ ಬ್ರಾಹ್ಮಣರು/ಭಕ್ತರು (ಮೋದಿ) ನಿರ್ಮಲಾ ಅವರಿಗೆ ಅಭಿನಂದಿಸಬೇಕೆಂದು ಕೇಳಿಕೊಳ್ಳುತ್ತಿದ್ದಾರೆ. ನೆನಪಿರಲಿ ನಿರ್ಮಲಾ ಮೊದಲ ಬಾರಿ ಎಂಪಿಯಾಗಿದ್ದಾರೆ, ಅವರಿಗೆ ಯಾವುದೇ ಅನುಭವವಿಲ್ಲ ಎಂದು ಮುಗುಮ್ಮಾಗಿಯೇ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದರು.
ಓಣಂ ಹಬ್ಬದ ಸಂದರ್ಭದಲ್ಲಿ ಕೇರಳಿಗರನ್ನು ಅಭಿನಂದಿಸಿದ್ದ ಗೌರಿ ಲಂಕೇಶ್, ಕೇರಳಿಗರು ಎಲ್ಲ ಧರ್ಮವನ್ನು ಬದಿಗಿಟ್ಟು ಓಣಂ ಆಚರಿಸುತ್ತಾರೆ. ಕೇರಳಿಗರೆ ನಿಮ್ಮೀ 'ದೇಶ'ದಲ್ಲಿ ಜಾತ್ಯತೀತ ಮನೋಭಾವವನ್ನು ಹೀಗೆಯೇ ಮುಂದುವರಿಸಿ, ಮುಂದಿನ ಬಾರಿ ಯಾರಾದರೂ ಕೇರಳದಿಂದ ರುಚಿಕಟ್ಟಾದ ಗೋಮಾಂಸ ತಂದುಕೊಡಿ, ಚೆಡ್ಡಿಗಳು ಬೇಕಿದ್ದರೆ ಉರಿದುಬೀಳಲಿ ಎಂದು ಸೋಮವಾರ ತಾನೆ ತಮ್ಮ ಮನದಾಳದ ಮಾತನ್ನು ಹೊರಹಾಕಿದ್ದರು.

ಗೋಹತ್ಯೆಯ ವಿರುದ್ಧ ಬಿಜೆಪಿ ದನಿಯೆತ್ತಿದಾಗ ಬಹಿರಂಗವಾಗಿಯೇ ಗೋಮಾಂಸ ಪ್ರಿಯರನ್ನು ಬೆಂಬಲಿಸಿದ್ದ ಗೌರಿ ಲಂಕೇಶ್ ಅವರು, ಟೌನ್ ಹಾಲ್ ಬಳಿ ನಡೆಸಲಾಗಿದ್ದ ಗೋಮಾಂಸಪ್ರಿಯರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅವರು ಎಷ್ಟರ ಮಟ್ಟಿಗೆ ದಲಿತರ ಪರವಾಗಿ ನಿಲ್ಲುತ್ತಿದ್ದರೆಂದರೆ, ತಮ್ಮ ಫೇಸ್ ಬುಕ್ ಪುಟದಲ್ಲಿ ರೋಹಿತ್ ವೇಮುಲ ಚಿತ್ರವನ್ನು ತಮ್ಮ ಪ್ರೊಫೈಲ್ ಚಿತ್ರವನ್ನಾಗಿ ಮಾಡಿಕೊಂಡಿದ್ದರು.
ನರೇಂದ್ರ ಮೋದಿ ವಿರುದ್ಧ ಯಾರೇ ಟ್ವೀಟ್ ಮಾಡಿದ್ದರೂ ಅದನ್ನು ತಂದು ಗೌರಿಯವರು ತಮ್ಮ ಫೇಸ್ ಬುಕ್ ಪುಟದಲ್ಲಿ ಹಾಕುತ್ತಿದ್ದರು. ಜಿಡಿಪಿ ಡುಮ್ಕಿ ಹೊಡೆದಾಗ, ಮೋದಿ ವಿದೇಶ ಪ್ರವಾಸ ಕೈಗೊಂಡಾಗ, ರೈತರು ಆತ್ಮಹತ್ಯೆ ಮಾಡಿಕೊಂಡಾಗ, ಜೆಎನ್‌ಯುದಲ್ಲಿ ದೇಶವಿರೋಧಿ ಕೂಗು ಎದ್ದಾಗ ಗೌರಿಯವರು ನರೇಂದ್ರ ಮೋದಿಯನ್ನು ಟೀಕಿಸದೆ ಬಿಡುತ್ತಿರಲಿಲ್ಲ.












Click it and Unblock the Notifications