ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳೆಯಲ್ಲಿ ತೋಯಲಿದೆ ಉದ್ಯಾನನಗರಿ ಬೆಂಗಳೂರು

ಇನ್ನೆರಡು ದಿನ ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂಬ ರಾಜ್ಯ ಹವಾಮಾನ ಇಲಾಖೆಯ ವರದಿಯಿಂದ ಐಟಿ ನಗರಿಯ ಜನರು ಕೊಂಚ ನಿಟ್ಟುಸಿರಿಟ್ಟಿದ್ದಾರೆ.

|
Google Oneindia Kannada News

ಬೆಂಗಳೂರು, ಮಾರ್ಚ್ 6: ಈಗಿನ್ನೂ ಮಾರ್ಚ್ ತಿಂಗಳು ಆರಂಭವಾಗುತ್ತಿರುವಾಗಲೇ ಜನರು ಉಸ್ಸಪ್ಪಾ ಎಂದು ಬೆವರು ಒರೆಸಿಕೊಳ್ಳಬೇಕಾದ ಪರಿಸ್ಥಿತಿ ಉದ್ಯಾನನಗರಿಯಲ್ಲಿ ಸೃಷ್ಟಿಯಾಗಿದೆ.

ಹೀಗಿರುವಾಗ ಇನ್ನೆರಡು ದಿನ ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂಬ ರಾಜ್ಯ ಹವಾಮಾನ ಇಲಾಖೆಯ ವರದಿಯಿಂದ ಐಟಿ ನಗರಿಯ ಜನರು ಕೊಂಚ ನಿಟ್ಟುಸಿರಿಟ್ಟಿದ್ದಾರೆ.

Garden city will get drench by rain

ಇದರೊಂದಿಗೆ ಅರಮನೆ ನಗರಿ ಮೈಸೂರು, ಚಿನ್ನದ ನಾಡು ಕೋಲಾರ ಸಹ ಮಳೆಯಿಂದ ತಂಪಾಗಲಿವೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 35 ರಿಂದ 31 ಕ್ಕೆ ಇಳಿದಿದ್ದು ತೇವಾಂಶ ಹೆಚ್ಚುವುದಕ್ಕೆ ಕಾರಣವಾಗಿದೆ. ಈಗಾಗಲೇ ನೆರೆ ರಾಜ್ಯಗಳಾದ ಕೇರಳ ಮತ್ತು ತಮಿಳು ನಾಡಿನ ಕೆಲ ಪ್ರದೇಶಗಳಲ್ಲಿ ಮಳೆಯಾಗಿದ್ದು, ರಾಜ್ಯದಲ್ಲೂ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಯಿದೆ.

English summary
Garden city may get drench in rain, weather forecastreport says.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X