ಉಚಿತ ಬಸ್ ಪಾಸ್ ಎಂದು ಮಹಿಳೆಯರಿಗೆ ಏಪ್ರಿಲ್ ಫೂಲ್ ಮಾಡಿದ್ರಾ ಸಿಎಂ ಬಸವರಾಜ ಬೊಮ್ಮಾಯಿ?

ಬೆಂಗಳೂರು, ಏಪ್ರಿಲ್. 03: ರಾಜ್ಯ ವಿಧಾನಸಭಾ ಚುನಾವನೆಗೆ ಮುಂಚಿತವಾಗಿ ಮಂಡಿಸಲಾಗದ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಬಜೆಟ್‌ನ ಪ್ರಮುಖ ಘೋಷಣೆ ಕಾಗದದ ಮೇಲೆಯೇ ಉಳಿದುಕೊಂಡಿದ್ದು, ಪ್ರತಿಪಕ್ಷಗಳ ಕೆಂಗಣ್ಣಿಗೆ ಬಿಜೆಪಿ ಸರ್ಕಾರ ಗುರಿಯಾಗಿದೆ. ಚುನಾವಣೆಯ ಸಮಯದಲ್ಲಿ ಈ ಘೋಷಣೆ ಸರ್ಕಾರಕ್ಕೆ ಭಾರೀ ಹೊಡೆತ ನೀಡಬಹುದು.

ಹೌದು, ಬಿಜೆಪಿ ನೇತೃತ್ವದ ಬಸವರಾಜ ಬೊಮ್ಮಾಯಿ ಸರ್ಕಾರ ಸಂಘಟಿತ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಬಿಎಂಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕಾಗಿ ಪಾಸ್‌ಗಳನ್ನು ನಿಡಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೊಂದು ಐತಿಹಾಸಿಕ ಘೋಷಣೆ, ಮಹಿಳೆಯರಿಗಾಗಿ ಸರ್ಕಾರ ಈ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ ಎಂದು ಘೋಷಿಸಿದ್ದರು.

Free BMTC Bus Passes to Women Announcement Remained on Paper

ಆದರೆ, ಸರ್ಕಾರದ ಈ ಬಹುನಿರೀಕ್ಷಿತ ಯೋಜನೆ ಕಾಗದದಲ್ಲೇ ಉಳಿದಿದೆ. ಬಸವರಾಜ ಬೊಮ್ಮಾಯಿ ಅವರು ತಮ್ಮ ಬಜೆಟ್ ಭಾಷಣದಲ್ಲಿ ಸಂಘಟಿತ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲು 1,000 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಈ ಯೋಜನೆಯು ಸುಮಾರು 30 ಲಕ್ಷ ಮಹಿಳೆಯರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅಂದಾಜಿಸಲಾಗಿದೆ ಎಂದು ಹೇಳಿದ್ದರು.

ರಾಜ್ಯ ಬಜೆಟ್ ಮಂಡಿಸಿದ ನಂತರ ಸಿಎಂ ಬಸವರಾಜ ಬೊಮ್ಮಾಯಿ ಅವರು ಏಪ್ರಿಲ್ 1 ರಿಂದ ಉಚಿತವಾಗಿ ಪ್ರಯಾಣಿಸಲು ಮಹಿಳೆಯರಿಗೆ ಉಚಿತ ಪಾಸ್ ನೀಡಲು ಕ್ರಮಕೈಗೊಳ್ಳುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗೆ ಸೂಚಿಸಿದರು. ಆದರೆ, ಚುನಾವಣೆಯ ಹಿಂದಿನ ಮಹತ್ವದ ಯೋಜನೆ ಇನ್ನೂ ಜಾರಿಯಾಗಿಲ್ಲ.

"ಪ್ರತಿದಿನ, ನಾನು ಚಾಮರಾಜಪೇಟೆಯ ನನ್ನ ಮನೆಯಿಂದ ಕೋರಮಂಗಲದಲ್ಲಿರುವ ನನ್ನ ಕಚೇರಿಗೆ ಪ್ರಯಾಣಿಸುತ್ತೇನೆ. ಉಚಿತ ಬಸ್ ಪಾಸ್ ಘೋಷಿಸಿದಾಗ, ನನಗೆ ತುಂಬಾ ಖುಷಿಯಾಗಿತ್ತು. ಏಕೆಂದರೆ ನನ್ನಂತಹ ಮಹಿಳೆಯರು ನಮ್ಮ ಸಂಪಾದನೆಯ ದೊಡ್ಡ ಭಾಗವನ್ನು ಕೆಲಸದ ಸ್ಥಳಗಳಿಗೆ ತಲುಪಲಿ ಸಾರಿಗೆಗೆ ಖರ್ಚು ಮಾಡಬೇಕಾಗುತ್ತದೆ" ಎಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರು ತಿಳಿಸಿದ್ದಾರೆ.

Free BMTC Bus Passes to Women Announcement Remained on Paper

" ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದ ಉಚಿತ ಬಸ್ ಪಾಸ್ ನನಗೆ ಮತ್ತು ನನ್ನಂತಹ ಇತರ ಮಹಿಳೆಯರಿಗೆ ಗಣನೀಯ ಉಳಿತಾಯ ಮಾಡಲು ಸಹಾಯ ಮಾಡುತ್ತಿತ್ತು. ಆದರೆ, ಈ ಉಚಿತ ಬಸ್ ಪಾಸ್‌ಗಳಿಗೆ ಎಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ಕಾರ್ಯವಿಧಾನ ಏನು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ' ಎಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಮತ್ತೊಬ್ಬ ಮಹಿಳೆಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ, ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನದಂದು ಬಿಎಂಟಿಸಿ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸಿತ್ತು. ಇದು ಬೆಂಗಳೂರಿನಲ್ಲಿ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ಕೂಡ ಪಡೆಯಿತು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಂಕಿಅಂಶಗಳ ಪ್ರಕಾರ, ಮಾರ್ಚ್ 8 ರಂದು 21.97 ಲಕ್ಷ ಮಹಿಳೆಯರು ಉಚಿತ ಪ್ರಯಾಣವನ್ನು ಮಾಡಿದ್ದಾರೆ.

ಆದರೆ, ಬಿಎಂಟಿಸಿಯ 20 ಲಕ್ಷ ಜನ ಮಹಿಳೆಯರು ಉಚಿತ ಪ್ರಯಾಣ ಮಾಡಬಹುದು ಎಂಬ ನಿರೀಕ್ಷೆಯಲ್ಲಿತ್ತು. ಈ ಸಂಖ್ಯೆ ಬಿಎಂಟಿಸಿ ನಿರೀಕ್ಷೆಯನ್ನು ಮೀರಿತ್ತು. ಉಚಿತ ಪ್ರಯಾಣಕ್ಕಾಗಿ ಸರ್ಕಾರ ಮಾಡಿದ ಒಟ್ಟು ವೆಚ್ಚ ಸುಮಾರು 8 ಕೋಟಿ ರೂಪಾಯಿ ಎಂದು ಬಿಎಂಟಿಸಿ ಅಂಕಿಅಂಶಗಳು ತಿಳಿಸಿವೆ. ಆದರೆ, ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದ ಉಚಿತ ಬಸ್‌ ಪಾಸ್ ಮಾತ್ರ ಇನ್ನು ಜಾರಿಯಾಗಿಲ್ಲ.

ಸಂಘಟಿತ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಬಿಎಂಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕಾಗಿ ಪಾಸ್‌ಗಳ ಯೋಜನೆಯ ಸ್ಥಿತಿಗತಿ ಕುರಿತ ಪ್ರಶ್ನೆಗಳಿಗೆ ಬಿಎಂಟಿಸಿ ಅಧಿಕಾರಿಗಳು ಪ್ರತಿಕ್ರಿಯಿಸಿಲ್ಲ. ಆದರೆ, ಬಿಎಂಟಿಸಿಯ ಅಧಿಕಾರಿಯೊಬ್ಬರು ಚುನಾವಣೆ ಮುಗಿದ ನಂತರವೇ ಉಚಿತ ಬಸ್ ಪಾಸ್‌ಗಳನ್ನು ನೀಡಬಹುದು ಎಂದು ಸಮರ್ಥಿಸಿಕೊಂಡಿದ್ದಾರೆ.

ಇನ್ನು, ಸರ್ಕಾರದ ಕ್ರಮಕ್ಕೆ ಕಾಂಗ್ರೆಸ್ ಕೂಡ ವ್ಯಂಗ್ಯವಾಡಿದ್ದು, "ಏಪ್ರಿಲ್ ಒಂದರಿಂದ ಎಲ್ಲಾ ದುಡಿಯುವ ಮಹಿಳೆಯರಿಗೆ, ವಿದ್ಯಾರ್ಥಿನೀಯರಿಗೆ ಉಚಿತ ಬಸ್ ಪಾಸ್ ಎಂಬ ಹೂವನ್ನು ಕಿವಿ ಮೇಲಿಟ್ಟಿದ್ದರು ಬಸವರಾಜ ಬೊಮ್ಮಾಯಿ, "ಏಪ್ರಿಲ್ 1ರಿಂದ" ಎಂದಿದ್ದೇ ಮಹಿಳೆಯರನ್ನು ಮೂರ್ಖರಾಗಿಸುವ ಸಲುವಾಗಿಯೇ ಬಿಜೆಪಿ ಕರ್ನಾಟಕ..? ಏಪ್ರಿಲ್ 1ರಂದೇ ಬಸ್ ಪಾಸ್ ನೀಡದೆ ಮಹಿಳೆಯರಿಗೆ ಏಪ್ರಿಲ್ ಫೂಲ್ ಮಾಡಿದೆ ಸರ್ಕಾರ" ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+