L.R Shivarame Gowda: ಶಿವರಾಮೇಗೌಡ ಈ ವಾರ ಬಿಜೆಪಿ ಸೇರ್ಪಡೆ: ಮಂಡ್ಯದಲ್ಲಿ ಬಿಜೆಪಿಗೆ ಜಯ?, ಜೆಡಿಎಸ್‌ಗೆ ಸವಾಲು
ಮಂಡ್ಯದಲ್ಲಿ ನನ್ನದೇ ಆದ ಮತಗಳು ಇವೆ ಎನ್ನುತ್ತಿರುವ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ತಾವು ಈ ವಾರ ಬಿಜೆಪಿ ಸೇರುವುದಾಗಿ ಪ್ರಕಟಿಸಿದ್ದಾರೆ. ಜೊತೆಗೆ ಎಚ್.ಡಿ ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ್ದಾರೆ.
ಬೆಂಗಳೂರು, ಮಾರ್ಚ್ 20: ಮಂಡ್ಯದಲ್ಲಿ ನನ್ನದೇ ಆದ ಮತಗಳು ಇವೆ ಎನ್ನುತ್ತಿರುವ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ತಾವು ಈ ವಾರ ಬಿಜೆಪಿ ಸೇರುವುದಾಗಿ ಪ್ರಕಟಿಸಿದ್ದಾರೆ. ಅಲ್ಲದೇ ಮಂಡ್ಯ ಕ್ಷೇತ್ರದಲ್ಲಿ ಈ ಸಲ ಕಾಂಗ್ರೆಸ್ ಮತ್ತು ಜೆಡಿಎಸ್ ಮುಟ್ಟಿನೋಡಿಕೊಳ್ಳುವಂತೆ ಬಿಜೆಪಿಯು ಗೆದ್ದು ಬರುತ್ತದೆ ಎಂದು ಅವರು ವಿಪಕ್ಷಗಳಿಗೆ ಟಾಂಗ್ ನೀಡಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಇನ್ನೇನು ಎರರಿಂದ-ಮೂರು ದಿನಗಳಲ್ಲಿ ನಾನು ಬಿಜೆಪಿ (BJP) ಸೇರುತ್ತೇನೆ. ನನಗೆ ರಾಷ್ಟ್ರೀಯ ಪಕ್ಷದ ಶಕ್ತಿಯೊಂದು ಬೇಕಿದೆ ಎಂದು ಖುದ್ದು ಮಂಡ್ಯದ ಮಾಜಿ ಸಂಸದ ಎಲ್. ಆರ್. ಶಿವರಾಮೇಗೌಡ ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಇಬ್ಬರು ಅಭ್ಯರ್ಥಿಗಳನ್ನು ಸೋಲಿಸುವ ಅವಕಾಶ ಇರುವುದು ನನಗೆ ಮಾತ್ರ. ಕಾರಣ ಇಲ್ಲಿ ನನಗೇ ಆದಂತಹ ಒಂದಷ್ಟು ಜನರ/ಮತಗಳ ಬೆಂಬಲ ಇದೆ. ಮಂಡ್ಯ ಜಿಲ್ಲೆ ವ್ಯಾಪ್ತಿಯ ಎಲ್ಲ ಕ್ಷೇತ್ರದಲ್ಲೂ ಸ್ಥಾನ ಗೆಲ್ಲಲು ನಾನು ಪಣತೊಟ್ಟಿದ್ದೇನೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನನಗೆ ರಾಷ್ಟ್ರೀಯ ಪಕ್ಷದ ಬೆಂಬಲ, ಶಕ್ತಿ ಅಗತ್ಯವಿದ್ದ ಕಾರಣ ನಾನು ಬಿಜೆಪಿ ಸೇರುವ ಬಗ್ಗೆ ನಾಯಕರನ್ನು ಭೇಟಿ ಮಾಡಿದ್ದ ಚರ್ಚಿಸಿದ್ದೇನೆ. ಹಳೇ ಮೈಸೂರು ಭಾಗದಲ್ಲಿ ಕೇಸರಿ ಪಕ್ಷದ ಶಕ್ತಿ ಸ್ವಲ್ಪ ಕಡಿಮೆ ಇದೆ. ಆದರೆ ಈ ಭಾಗದಲ್ಲಿ ಪಕ್ಷ ಸಂಘಟನೆ, ಅಧಿಕಾರ ಹಿಡಿಯಲು ಬಿಜೆಪಿಯ ರಾಷ್ಟ್ರೀಯ ನಾಯಕರು ಇಚ್ಛಿಸಿದ್ದಾರೆ. ಬಿಜೆಪಿ ಸೇರಿದ ಬಳಿಕ ಮಂಡ್ಯದಲ್ಲಿ ಏಳಕ್ಕೆ ಏಳು ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್, ಜೆಡಿಎಸ್ ಗೆ ಸೂಕ್ತ ಉತ್ತರ ನೀಡುತ್ತೇವೆ ಎಂದು ಅವರು ಹೇಳಿದರು.
ಮಂಡ್ಯದ ಸ್ವಾಭಿಮಾನ ಅಮಿತ್ ಶಾ ಕಾಲು ಕೆಳಗೆ ಹೋಗಿದೆ ಎಂಬ ಕುಮಾರಸ್ವಾಮಿ ಹೇಳಿದ್ದಾರೆ. ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿಯವರು ಅಮಿತ್ ಶಾ ಜೊತೆ ಹೋದಾಗ ಅವರಿಗೆ ಅವರ ಪಾದದ ನೆನಪು ಆಗಲಿಲ್ಲವೇ? ಎಂದು ಅವರು ಕಿಡಿ ಕಾರಿದ್ದಾರೆ.

ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ
ಇನ್ನೂ ಪ್ರಧಾನಿ ನರೇಂದ್ರ ಮೋದಿಯವರು ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್ ಡಿ. ದೇವೇಗೌಡರನ್ನು ಗೌರವಯುತವಾಗಿ ಕಾಣುತ್ತಾರೆ. ದೇವೇಗೌಡರು ಸಹ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಅವರ ಮೇಲೆ ಪ್ರೀತಿ ಇಟ್ಕೊಂಡಿದ್ದಾರೆ. ಅಂತಹವರ ಕಾಲು ಕೆಳಗೆ ಬಿದ್ದಿದ್ದಾರೆ ಎಂದು ಯಾಕೆ ಅವರು ಹೇಳುತ್ತಿದ್ದಾರೆಯೋ ಗೊತ್ತಿಲ್ಲ ಎಂದು ಶಿವರಾಮೇಗೌಡ ಬೇಸರ ವ್ಯಕ್ತಪಡಿಸಿದರು.
ಎಚ್. ಡಿ. ಕುಮಾರಸ್ವಾಮಿ ಅವರು ತಾವು ತೆಗೆದುಕೊಳ್ಳುವ ನಿರ್ಧಾರಕ್ಕೆ ಯಾವುದೇ ಸಂದರ್ಭದಲ್ಲೂ ಮಂಡ್ಯ ಕ್ಷೇತ್ರ ಜನರು ಜೊತೆಗೆ ಇರುತ್ತಾರೆ ಎಂಬುದನ್ನು ಅವರು ಮೊದಲು ಬಿಡಬೇಕು. ಪ್ರಸಕ್ತ ಚುನಾಣೆಯಲ್ಲಿ ಮಂಡ್ಯದಲ್ಲಿ ಎಲ್ಲ 7 ಸ್ಥಾನ ಗೆದ್ದು ತೋರಿಸಿ ನೀವು ಎಂದು ಅವರು ಜೆಡಿಎಸ್‌ಗೆ ಸವಾಲು ಹಾಕಿದರು.
ಮಂಡ್ಯದಲ್ಲಿ ಎನ್.ಚಲುವರಾಯಸ್ವಾಮಿ ಅವರನ್ನು ಸೋಲಿಸಲು ನನ್ನನ್ನು ಜೆಡಿಎಸ್‍ಗೆ ಕರೆದುಕೊಂಡು ಬಂದರು. ಆ ಮೇಲೆ 5 ತಿಂಗಳಿಗೆ ನನ್ನ ಸಂಸದನನ್ನಾಗಿ ಮಾಡಿ ಸಾಲಗಾರನನ್ನಾಗಿ ಮಾಡಿದರು. ಅದಾದ ನಂತರ ಜೆಡಿಎಸ್ ಪಕ್ಷದಲ್ಲಿ ನನನ್ನೂ ಏನು ಅಂತಲೂ ನೋಡದೇ ಕಡೆಗಣಿಸಲಾಯಿತು. ಪಾರ್ಟಿಯಿಂದ ಹೊರಗೆ ಹಾಕಿ ಆಮೇಲೆ ನನ್ನ ಬೆನ್ನಿಗೆ ಚೂರಿ ಹಾಕಿದರು ಎಂದು ಕುಮಾರಸ್ವಾಮಿ ವಿರುದ್ಧ ಅವರು ಗುಡುಗಿದರು.












Click it and Unblock the Notifications