'ಕೆಲಸವಿಲ್ಲದಿರುವವರು ಮಾತ್ರ ರಾಜೀನಾಮೆ ಕೊಡ್ತೀವಿ ಅಂತಾರೆ'

ಬೆಂಗಳೂರು, ಜುಲೈ 04: ಶಾಸಕರ ರಾಜೀನಾಮೆ ವಿಚಾರವಾಗಿ ತೀವ್ರ ಅಸಮಾಧಾನಗೊಂಡಿರುವ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು, ಕೆಲಸವಿಲ್ಲದವರು ಮಾತ್ರ ರಾಜೀನಾಮೆ ಕೊಡ್ತಾರೆ ಎಂದು ಖಾರವಾಗಿ ಹೇಳಿಕೆ ನೀಡಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ ಇಬ್ಬರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದರು. ಅದರಲ್ಲಿ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ಪತ್ರ ರಮೇಶ್ ಕುಮಾರ್ ಅವರನ್ನು ತಲುಪಿರಲೇ ಇಲ್ಲ, ಇದರ ನಡುವೆ ನಡೆದ ಬೆಳವಣಿಗೆಗಳು ರಮೇಶ್ ಕುಮಾರ್ ಅವರ ಸಿಟ್ಟಿಗೆ ಕಾರಣವಾಗಿತ್ತು.

'ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಕುಮಾರ್, ಜನರಿಂದ ಆಯ್ಕೆಯಾದವರು ಹೀಗೆ ರಾಜೀನಾಮೆ ನೀಡುವುದು ಸರಿಯಲ್ಲ, ಗೌರವಾನ್ವಿತರು ಯಾರೂ ಹೀಗೆ ಮಾಡುವುದಿಲ್ಲ, ಮಾಡಲು ಕೆಲಸ ಇಲ್ಲದವರು ಮಾತ್ರ ರಾಜೀನಾಮೆ ನೀಡುತ್ತಾರೆ', ಎಂದು ರಾಜೀನಾಮೆ ಹುಮ್ಮಸ್ಸಿನಲ್ಲಿರುವ ಶಾಸಕರಿಗೆ ರಮೇಶ್ ಕುಮಾರ್ ಚಾಟಿ ಬೀಸಿದ್ದಾರೆ.

Fools and unemloyed MLAs only give resignation: Ramesh Kumar

ಶಾಸಕರ ರಾಜೀನಾಮೆ ಎನ್ನುವುದು ವದಂತಿ ಮಾತ್ರ, ಯಾರಾದರೂ ಬರುತ್ತಾರೆನೋ ಎಂದು ನಾನು ಪ್ರತಿದಿನ ನೂರು ಕಿ.ಮೀ ದೂರದಿಂದ ಬಂದು ಕಚೇರಿ ತೆರೆಯುತ್ತೇನೆ ಆದರೆ ಯಾರೂ ಬರುತ್ತಿಲ್ಲ, ಕೇವಲ ಮಾಧ್ಯಮದವರು ಮಾತ್ರ ಬರುತ್ತಿದ್ದಾರೆ ಎಂದು ಹೇಳಿದರು.

ರಾಜಕಾರಣದಲ್ಲಿ ವ್ಯಾಪಾರ ಮಾಡಬಾರದು, ಗುಟ್ಟಾಗಿ ಗುಮಾನಿಯಾಗಿ ಏನೇ ಮಾಡಿದರೂ ಅದು ವ್ಯಾಪಾರ ಆಗುತ್ತೆ. ನಾನು ಪ್ರಜಾತಾಂತ್ರಿಕ ವ್ಯವಸ್ಥೆಯನ್ವಯ ಕೆಲಸ ಮಾಡ್ತೀನಿ. ಮಾಡೋಕೆ ಕೆಲಸ ಇಲ್ಲದವರು ಮಾತ್ರ ಶಾಸಕ ಸ್ಥಾನಕ್ಕೆ ಕೆಲಸ ಕೊಡ್ತೀನಿ ಅಂತಾರೆ. ಅಲ್ಲಿ ಇಲ್ಲಿ ರಾಜೀನಾಮೆ ಕೊಡ್ತೀನಿ ಅಂತ ದಾರಿ ತಪ್ಪಿರೋರಿರಿಗೆ ನನ್ ಬಳಿ ಕರ್ಕೊಂಡ್ ಬನ್ನಿ ಅವರಿಗೆ ನಾನು ಬುದ್ದಿಮಾತು ಹೇಳಿ ಕಳಿಸ್ತೀನಿ" ಎಂದು ರಮೇಶ್ ಕುಮಾರ್ ಬಗ್ಗೆ ಪರೋಕ್ಷವಾಗಿ ವ್ಯಂಗ್ಯ ಮಾಡಿದರು.

ರಮೇಶ್ ಕುಮಾರ್ ಅವರು ರಾಜೀನಾಮೆ ಪತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ರಾಜೀನಾಮೆ ನೀಡಿದ್ದಾಗಿ ಗಾಳಿ ಸುದ್ದಿ ಹಬ್ಬಿಸಿದ್ದರು ಇದು ರಮೇಶ್ ಕುಮಾರ್ ಅವರನ್ನು ಕೆರಳಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+