ಫುಡ್ ಡೆಲಿವರಿಗಾಗಿ ಜಗಳ; ಬೆಂಗಳೂರಿನಲ್ಲಿ ಸ್ನೇಹಿತನನ್ನೇ ಕೊಂದರು
ಬೆಂಗಳೂರು, ಮಾರ್ಚ್ 6: ಬೆಂಗಳೂರಿನ ಬಿಟಿಎಂ ಲೇಔಟ್ 2 ನೇ ಹಂತದ ಮನೆಯೊಂದರಲ್ಲಿ ಫೆಬ್ರವರಿ 28 ರ ಬೆಳಗಿನ ಜಾವ ನಡೆದಿದ್ದ ಪುಡ್ ಡೆಲಿವರಿ ಕೆಲಸ ಮಾಡುತ್ತಿದ್ದ ಸುನೀಲ್(28) ಎಂಬವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಮೈಕೋ ಲೇಔಟ್ ಪೊಲೀಸರಿಂದ ಪ್ರವೀಣ್ ಹಾಗೂ ತೇಜಸ್ ಎಂಬುವರನ್ನು ಶುಕ್ರವಾರ ಬಂಧಿಸಲಾಗಿದೆ. ಘಟನೆ ನಡೆದ ನಂತರ ತುಮಕೂರಿಗೆ ತೆರಳಿ ಆರೋಪಿಗಳು ತಲೆಮರೆಸಿಕೊಂಡಿದ್ದರು.
ಬಿಟಿಎಂ ಲೇಔಟ್ 2 ನೇ ಹಂತದ 16 ನೇ ಮುಖ್ಯರಸ್ತೆಯ ಮನೆಯೊಂದರಲ್ಲಿ ಸುನೀಲ್ ಮೇಲೆ ಆರೋಪಿಗಳು ಚಾಕುವಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದರು. ಬಳಿಕ ಸ್ಥಳೀಯರು ಗಾಯಾಳು ಸುನೀಲ್‌ರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 4 ರಂದು ಸುನೀಲ್ ಕೊನೆಯುಸಿರೆಳೆದಿದ್ದ.

ಮೃತ ಸುನೀಲ್, ಆರೋಪಿಗಳಾದ ಪ್ರವೀಣ್ ಮತ್ತು ತೇಜಸ್ ಖಾಸಗಿ ಫುಡ್ ಡೆಲಿವರಿ ಸಂಸ್ಥೆ ಪಾಸೋಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಫುಡ್ ಆರ್ಡರ್ ಪಡೆದುಕೊಳ್ಳುವ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದ ಮೂವರು ಸ್ನೇಹಿತನನ್ನೇ ಕೊಲೆ ಮಾಡಿದ್ದರು. ಈ ಕುರಿತು ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.












Click it and Unblock the Notifications