ಕರಾವಳಿಯಲ್ಲಿ ಪ್ರವಾಹ: ಬೆಂಗಳೂರಲ್ಲಿ ಪೆಟ್ರೋಲ್‌ ಅಭಾವ

ಬೆಂಗಳೂರು, ಆಗಸ್ಟ್ 20: ಕೊಡಗು, ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ, ಪ್ರವಾಹ ಹಿನ್ನೆಲೆ ಬೆಂಗಳೂರಲ್ಲಿ ಡೀಸೆಲ್‌ ಮತ್ತು ಪೆಟ್ರೋಲ್‌ ಅಭಾವ ಉಂಟಾಗಿದೆ. ಇದರಿಂದ ನಗರದ ಬಹುತೇಕ ಎಸ್ಸಾರ್‌ ಬಂಕ್‌ಗಳಲ್ಲಿ ನೋ ಸ್ಟಾಕ್‌ ಫಲಕ ಹಾಕಲಾಗಿದೆ.

ಬೆಂಗಳೂರಲ್ಲಿ ಎಸ್ಸಾರ್‌ ಕಂಪನಿಯ 130ಕ್ಕೂ ಹೆಚ್ಚು ಪೆಟ್ರೋಲ್‌ ಬಂಕ್‌ಗಳಿವೆ.ಸಾಕಷ್ಟು ಬಂಕ್‌ಗಳಲ್ಲಿ ಸ್ಟಾಕ್‌ ಇಲ್ಲ ಎಂದು ಹೇಳಿ ಹಿಂದೆ ಕಳುಹಿಸುತ್ತಿದ್ದಾರೆ. ಎಸ್ಸಾರ್‌ ಕಂಪನಿಗಳು ಟ್ಯಾಂಕರ್‌ ಮೂಲಕ ಮಂಗಳೂರಿನಿಂದ ಬೆಂಗಳೂರಿಗೆ ಪೆಟ್ರೋಲ್‌-ಡೀಸೆಲ್‌ ಪಡೆಯುತ್ತಿವೆ, ಕೆಲ ಪೆಟ್ರೋಲ್‌ ಬಂಕ್‌ಗಳಿಗೆ ಕೇರಳ, ಕೊಚ್ಚಿಯಿಂದ ತೈಲ ಸರಬರಾಜು ಆಗುತ್ತಿತ್ತು ಎಂದು ತಿಳಿದುಬಂದಿದೆ.

ಈ ಎರಡೂ ಮಾರ್ಗಗಳ ಮೂಲಕ ತೈಲ ಟ್ಯಾಂಕರ್‌ಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಇದರಿಂದ ನಗರದ ಬಂಕ್‌ಗಳಲ್ಲಿ ಪೆಟ್ರೋಲ್‌-ಡೀಸೆಲ್‌ ಅಭಾವ ಉಂಟಾಗಿದೆ. ತೈಲ ಅಭಾವ ಸಮಸ್ಯೆಯು ಕೇವಲ ಎಸ್ಸಾರ್‌ ಕಂಪನಿಯ ಬಂಕ್‌ಗಳಲ್ಲಿ ಮಾತ್ರ ಕಾಣಿಡಿಕೊಂಡಿದೆ. ಸರ್ಕಾರಿ ಸ್ವಾಮ್ಯದ ಹಾಗೂ ಇತರೆ ಬಂಕ್‌ಗಳಲ್ಲಿ ಪೆಟ್ರೋಲ್‌-ಡೀಸೆಲ್‌ ಅಭಾವ ಎದುರಾಗಿಲ್ಲ.

Flood in coastal: Fuel scarcity in Bengaluru

ಎಚ್‌ಪಿಸಿಎಲ್‌, ಬಿಪಿಸಿಎಲ್‌ ಸಹಿತ ಇತರೆ ಕಂಪನಿಗಳು ಕೊಳವೆ ಮಾರ್ಗ ಹಾಗೂ ಚೆನ್ನೈನಿಂದ ತೈಲ ಪೂರೈಕೆ ಜಾಲವನ್ನು ಹೊಂದಿದ್ದು, ಬಂಕ್‌ಗಳಿಗೆ ಅಗತ್ಯವಾದ ತೈಲ ಪೂರೈಕೆಯಾಗುತ್ತಿದೆ. ಕೆಲ ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದು ಬಂಕ್‌ ಮಾಲೀಕರು ಉತ್ತರಿಸುತ್ತಿದ್ದಾರೆ ಆದರೆ ಯಾರಿಂದಲೂ ಸಮರ್ಪಕ ಉತ್ತರ ದೊರೆಯುತ್ತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+