Breaking; ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಪ್ಪಿದ ದುರಂತ

ಬೆಂಗಳೂರು, ಏಪ್ರಿಲ್ 28; ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೊಡ್ಡ ದುರಂತವೊಂದು ತಪ್ಪಿದೆ. ವಿಮಾನದಲ್ಲಿದ್ದ 150 ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ.

ಥಾಯ್ ವಿಮಾನಯಾನ ಸಂಸ್ಥೆಗೆ ಸೇರಿದ ವಿಮಾನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಮೊದಲೇ ಟೈರ್ ಸ್ಪೋಟಗೊಂಡಿದೆ. ಪೈಲೆಟ್ ವಿಮಾನವನ್ನು ಯಶಸ್ವಿಯಾಗಿ ಲ್ಯಾಂಡ್ ಮಾಡುವಲ್ಲಿ ಸಫಲರಾಗಿದ್ದಾರೆ.

ಟಿಜಿ 325 ಬೋಯಿಂಗ್ 787-8 ಡ್ರೀಮ್ ಲೈನರ್ ವಿಮಾನ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಆಗಮಿಸಿತ್ತು. ಏಪ್ರಿಲ್ 26ರಂದು 11.32ರ ಸುಮಾರಿಗೆ ಲ್ಯಾಂಡ್ ಆಗುವಾಗ ಟೈರ್ ಸ್ಫೋಟಗೊಂಡಿದೆ. ವಿಮಾನ ನಿಲ್ದಾಣದ ಸಿಬ್ಭಂದಿ ತಕ್ಷಣ ವಿಮಾನವನ್ನು ಸುರಕ್ಷಿತ ಪ್ರದೇಶಕ್ಕೆ ತೆಗೆದುಕೊಂಡು ಹೋದರು.

Flight Tyre Burst In Bengaluru Airport All Passengers Safe

ವಿಮಾನಯಾನ ಸಂಸ್ಥೆಯ ತಾಂತ್ರಿಕ ತಂಡ ಬುಧವಾರ ಸಂಜೆ ಹೊಸ ಟೈರ್‌ ಜೊತೆ ಬೆಂಗಳೂರಿಗೆ ಆಗಮಿಸಿತು. ವಿಮಾನವನ್ನು ಪರಿಶೀಲನೆ ನಡೆಸಿತು. ಏಪ್ರಿಲ್ 28ರಂದು ಈ ವಿಮಾನ ಬೆಂಗಳೂರಿನಿಂದ ಬ್ಯಾಂಕಾಕ್‌ಗೆ ಹಾರಾಟ ನಡೆಸಿದೆ.

ವಿಮಾನದ ಹಿಂಬದಿಯ ಒಂದು ಟೈರ್ ಸ್ಫೋಟಗೊಂಡರೂ ಸಹ ಪೈಲೆಟ್ ಸುರಕ್ಷಿತವಾಗಿ ಲ್ಯಾಂಡ್ ಮಾಡಿಸಿದ್ದಾರೆ. ಇದರಿಂದಾಗಿ 150 ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ವಿಮಾನ ಬುಧವಾರ ಬೆಳಗ್ಗೆ ಬೆಂಗಳೂರಿನಿಂದ ಬ್ಯಾಂಕಾಕ್‌ಗೆ ಹೊರಡಬೇಕಿತ್ತು. ಟೈರ್ ಸ್ಫೋಟಗೊಂಡ ಕಾರಣ ವಿಮಾನ ರದ್ದುಗೊಂಡಿತು. ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿಯೇ ಕಾಯುವಂತಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+