ಮಹದೇವಪುರ ಠಾಣೆಯಲ್ಲಿ ಪೊಲೀಸರ ಜಟಾಪಟಿ, ಇಬ್ಬರು ಅಮಾನತು

ಬೆಂಗಳೂರು, ನವೆಂಬರ್ 5 : ಎಎಸ್‌ಐ ಮತ್ತು ಹೆಡ್ ಕಾನ್ಸ್‌ಟೇಬಲ್ ಹೊಡೆದಾಡಿಕೊಂಡ ಘಟನೆ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಇಬ್ಬರನ್ನು ಅಮಾನತು ಮಾಡಲಾಗಿದ್ದು, ಮಾರತ್ತಹಳ್ಳಿ ಎಸಿಪಿ ನೇತೃತ್ವದಲ್ಲಿ ಇಲಾಖಾ ತನಿಖೆಗೆ ಆದೇಶಿಸಲಾಗಿದೆ.

ಮಹದೇವಪುರ ಠಾಣೆ ಎಎಸ್‌ಐ ಅಮೃತೇಶ್, ಹೆಡ್‌ಕಾನ್ಸ್‌ಟೇಬಲ್ ಜಯಕಿರಣ್ ಮತ್ತು ಸಬ್ ಇನ್ಸ್‌ಪೆಕ್ಟರ್ ಅಶ್ವಥ್ ನಡುವೆ ಗಲಾಟೆ ನಡೆದಿದೆ. ಏಕಚನದಲ್ಲಿ ಬೈದಾಡಿಕೊಂಡು, ಠಾಣೆಯಲ್ಲಿ ಎಲ್ಲಾ ಸಿಬ್ಬಂದಿಗಳ ಸಮ್ಮುಖದಲ್ಲಿಯೇ ಕೈ ಕೈ ಮೀಲಾಯಿಸಿದ್ದಾರೆ. ನಂತರ ಸ್ಟೇಷನ್ ಡೈರಿಯಲ್ಲಿ ಈ ಬಗ್ಗೆ ಬರೆದು, ಡಿಸಿಪಿಗೆ ಅಶ್ವಥ್ ಮಾಹಿತಿ ನೀಡಿದ್ದಾರೆ.

Fight in police station : SI, head constable suspended

ಡಿಸಿಪಿ ಅಬ್ದುಲ್ ಅಹಮದ್ ಕರ್ತವ್ಯಲೋಪದ ಹಿನ್ನಲೆಯಲ್ಲಿ ಎಎಸ್ಐ ಅಮೃತೇಶ್, ಹೆಡ್‌ಕಾನ್ಸ್‌ಟೇಬಲ್ ಜಯಕಿರಣ್ ಅವರನ್ನು ಅಮಾನತು ಮಾಡಿದ್ದಾರೆ. ಮಾರತ್ತಹಳ್ಳಿ ಎಸಿಪಿ ನೇತೃತ್ವದಲ್ಲಿ ಇಲಾಖಾ ತನಿಖೆಗೆ ಆದೇಶ ನೀಡಿದ್ದಾರೆ.

ಜಗಳವಾಡಿದ್ದು ಏಕೆ? : ಶನಿವಾರ ಸಂಜೆ ಇಸ್ಪಿಟ್ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದರು. 10 ಜನರನ್ನು ಬಂಧಿಸಿ, 42 ಸಾವಿರ ರೂ. ಹಣವನ್ನು ವಶಕ್ಕೆ ಪಡೆದುಕೊಂಡಿದ್ದರು. ಎಲ್ಲಾ ಆರೋಪಿಗಳನ್ನು ಠಾಣೆಗೆ ಕರೆದುಕೊಂಡು ಬರಲಾಗಿತ್ತು. ಆದರೆ, 8 ಗಂಟೆ ವೇಳೆಗೆ ಅವರನ್ನು ಬಿಟ್ಟು ಕಳಿಸಲಾಗಿದೆ.

ಪ್ರಕರಣದ ದಾಖಲು ಮಾಡದೇ ಎಲ್ಲರನ್ನು ಬಿಟ್ಟು ಕಳಿಸಿದ ಕಾರಣಕ್ಕೆ ಎಎಸ್‌ಐ ಅಮೃತೇಶ್, ಹೆಡ್‌ಕಾನ್ಸ್‌ಟೇಬಲ್ ಜಯಕಿರಣ್ ಮತ್ತು ಸಬ್ ಇನ್ಸ್‌ಪೆಕ್ಟರ್ ಅಶ್ವಥ್ ನಡುವೆ ಗಲಾಟೆ ನಡೆದಿದೆ. ಜಯಕಿರಣ್ ನಿನ್ನಂಥ ಎಎಸ್‌ಐಗಳನ್ನು ನೂರಾರು ಜನರನ್ನು ನೋಡಿದ್ದೇನೆ ಎಂದು ಹೇಳಿದ್ದು, ಇಬ್ಬರ ನಡುವೆ ಠಾಣೆಯಲ್ಲಿಯೇ ಜಟಾಪಟಿ ನಡೆಸಿದೆ.

ಎಸ್ಐ ಅಶ್ವಥ್ ಈ ಘಟನೆಯನ್ನು ಸ್ಟೇಷನ್ ಡೈರಿಯಲ್ಲಿ ಉಲ್ಲೇಖಿಸಿದ್ದು, ಡಿಸಿಪಿಗೆ ಘಟನೆ ಕುರಿತು ಮಾಹಿತಿ ನೀಡಿದ್ದರು. ಡಿಸಿಪಿ ಅಬ್ದುಲ್ ಅಹಮದ್ ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಇಬ್ಬರನ್ನು ಅಮಾನತು ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+