ವಾಹನಗಳ ನಂಬರ್ ಪ್ಲೇಟ್ ಮಾರಾಟ ಮಾಡಿ ಲಕ್ಷ ಲಕ್ಷ ರೂಪಾಯಿ ಗಳಿಸಿದ ಸರ್ಕಾರ!

ಕಾರು, ಬೈಕ್ ಅಂದ್ರೆ ಕೆಲವರಿಗೆ ಕ್ರೇಜ್ ಆದರೆ ಬಡವರಿಗೆ ಇವು ಅನಿವಾರ್ಯ ಆಗಿರುತ್ತವೆ. ಅದ್ರಲ್ಲೂ ಕೈತುಂಬಾ ದುಡ್ಡು ಇರುವ ಜನರು ತಮ್ಮ ಗಾಡಿಗೆ ಇಂತಹದ್ದೇ ನಂಬರ್ ಬೇಕು ಅಂತಾ ಹಠ ಹಿಡಿಯುತ್ತಾರೆ. ಹಾಗೇ ತಮಗೆ ಈ ನಂಬರ್ ಲಕ್ಕಿ ಅಂತಾ ಅದೇ ನಂಬರ್‌ನ ನಂಬರ್ ಪ್ಲೇಟ್ ಹುಡುಕಿ ತರಿಸುತ್ತಾರೆ. ಹೀಗೆ ಫ್ಯಾನ್ಸಿ ನಂಬರ್ ಪ್ಲೇಟ್ ಮಾರಾಟ ಮಾಡಿ ಸರ್ಕಾರ ಲಕ್ಷ ಲಕ್ಷ ರೂಪಾಯಿ ಗಳಿಸುತ್ತಿದೆ.

ಹೌದು, ಫ್ಯಾನ್ಸಿ ನಂಬರ್ ಪಡೆಯುವುದು ದುಡ್ಡು ಇರುವ ಶ್ರೀಮಂತರಿಗೆ ಒಂದು ರೀತಿಯ ಚಟ ಇದ್ದಂತೆ. ಹೀಗಾಗಿಯೇ ಸಾರಿಗೆ ಇಲಾಖೆ ಫ್ಯಾನ್ಸಿ ನಂಬರ್ ಹರಾಜು ಹಾಕುವಾಗೆಲ್ಲಾ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿ ಅದನ್ನ ಖರೀದಿ ಮಾಡುತ್ತಾರೆ. ಅದೇ ರೀತಿ ಇದೀಗ, ಕರ್ನಾಟಕ ಸಾರಿಗೆ ಇಲಾಖೆ ಕೂಡ ಫ್ಯಾನ್ಸಿ ನಂಬರ್ ಪ್ಲೇಟ್ ಮಾರಾಟ ಮಾಡಿ ಲಕ್ಷ, ಲಕ್ಷ ರೂಪಾಯಿ ಹಣ ಗಳಿಸಿದೆ. ಹಾಗಾದರೆ ಇದೀಗ ಸರ್ಕಾರಕ್ಕೆ ಹೀಗೆ ಫ್ಯಾನ್ಸಿ ನಂಬರ್ ಪ್ಲೇಟ್ ಮಾರಾಟದ ಮೂಲಕ ಸಿಕ್ಕಿರುವ ಲಾಭ ಎಷ್ಟು ಗೊತ್ತಾ? ಬನ್ನಿ ತಿಳಿಯೋಣ.

Explore The Vehicle Number Plate Auction Price

ನಂಬರ್ ಪ್ಲೇಟ್‌ನಿಂದ ಲಕ್ಷ ಲಕ್ಷ ಲಾಭ!

ಅಂದಹಾಗೆ ಪ್ರಾದೇಶಿಕ ಸಾರಿಗೆ ಆಯುಕ್ತರ ಕಚೇರಿಯಲ್ಲಿ ಫೆಬ್ರವರಿ 8 ರಂದು ಕೆಎ-03 / ಎನ್ ಟಿ (KA-03/NT) ಮುಂಗಡ ನೋಂದಣಿ ಶ್ರೇಣಿ ಪ್ರಾರಂಭಿಸಲು ಆಕರ್ಷಕ ನೊಂದಣಿ ಸಂಖ್ಯೆಗಳ ಸಾರ್ವಜನಿಕ ಹರಾಜು ಮಾಡಲಾಗಿದೆ. ಹೀಗೆ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 17 ನೋಂದಣಿ ಸಂಖ್ಯೆಗಳಿಂದ ಸರ್ಕಾರಕ್ಕೆ ಸುಮಾರು 27,55,000 ರೂಪಾಯಿ ಲಾಭ ಬಂದಿದೆ ಎನ್ನಲಾಗಿದೆ. ಈ ಮೂಲಕ ಸರ್ಕಾರಕ್ಕೆ ಭರ್ಜರಿ ತೆರಿಗೆ ಸಂಗ್ರಹ ಆಗಿದೆ. ಹಾಗಾದರೆ ಯಾವ ಯಾವ ಫ್ಯಾನ್ಸಿ ನಂಬರ್ ಮಾರಾಟ ಮಾಡಿ ಎಷ್ಟು ಲಕ್ಷ ಲಾಭ ಬಂದಿದೆ? ಮುಂದೆ ಓದಿ.

ಯಾವ ನಂಬರ್‌ಗೆ ಹೆಚ್ಚು ಬಿಡ್?

ನಂಬರ್ ಪ್ಲೇಟ್ ಮಾರಾಟದ ಮೂಲಕ ಬಂದಿರುವ ಲಾಭ ನೋಡುವುದಾದರೆ, ಪ್ರತಿಯೊಂದು ನೋಂದಣಿ ಸಂಖ್ಯೆಗೆ ಅರ್ಜಿ ಶುಲ್ಕ ರೂಪಾಯಿ 75,000 ಸೇರಿ, KA-03/NT-9999 ಸಂಖ್ಯೆಗಾಗಿ 4,30,000 ರೂಪಾಯಿ KA-03/NT-0001 ಸಂಖ್ಯೆಗೆ 3,25,000 ರೂಪಾಯಿ, KA-03/NT-0001 ಸಂಖ್ಯೆಗೆ 2,75,000 ರೂಪಾಯಿ, KA-03/NT-0999 ಮತ್ತು KA-03/NT-6666 ಸಂಖ್ಯೆಗೆ ರೂ 2,25,000 KA-03/NT-0099 ಸಂಖ್ಯೆಗೆ 1,30,000 ರೂಪಾಯಿ ಬಿಡ್ ಮಾಡಲಾಗಿತ್ತು. ಈ ಮೂಲಕ ಇತರೆ 45 ಸಂಖ್ಯೆಗಳಿಗೆ ತಲಾ 75,000 ರೂಪಾಯಿ ರೀತಿ 33,75,000 ಲಕ್ಷವು ಸೇರಿ ಸರ್ಕಾರಕ್ಕೆ ಒಟ್ಟು 61,30,000 ರೂಪಾಯಿ ರಾಜಸ್ವ ಸಂಗ್ರಹಿಸಲಾಗಿದೆ.

Explore The Vehicle Number Plate Auction Price

ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್

ಕರ್ನಾಟಕದಲ್ಲಿ 2019ರ ಏಪ್ರಿಲ್ 1ಕ್ಕೂ ಮೊದಲು ನೋಂದಣಿಯಾಗಿರುವ ವಾಹನಗಳ ಸಂಖ್ಯೆ ಸುಮಾರು 2 ಕೋಟಿಯಷ್ಟಿದೆ. ಇದೀಗ ಇವರೆಲ್ಲಾ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಪಡೆದು ಅದನ್ನ ಅಳವಡಿಸಿಕೊಳ್ಳಬೇಕಿದೆ. ಆದರೆ ಗಡುವು ವಿಸ್ತರಿಸಿದರೂ, ಈವರೆಗೆ ಕೇವಲ 12 ಲಕ್ಷ ವಾಹನಕ್ಕೆ ಮಾತ್ರ ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡಿದ್ದಾರೆ. ಬಾಕಿ 1.88 ಕೋಟಿ ವಾಹನಕ್ಕೆ, ಎಚ್‌ಎಸ್‌ಆರ್‌ಪಿ ಅಳವಡಿಸಬೇಕಿದೆ. ಈ ಹಿನ್ನೆಲೆ ಸಾರಿಗೆ ಇಲಾಖೆ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸಲು ಜನರು ಏನು ಮಾಡಬೇಕು ಎನ್ನುವ ಕುರಿತು ಪ್ರಕಟಣೆ ಹೊರಡಿಸಿದೆ.

ಕರ್ನಾಟಕ ರಾಜ್ಯ ಸರ್ಕಾರದ ಅಧಿಸೂಚನೆ ಸಂಖ್ಯೆ : ಟಿಡಿ 193 ಟಿಡಿಒ 2021, ದಿನಾಂಕ : 17-08-2023 ಹಾಗೂ ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ, ಬೆಂಗಳೂರು ರವರ ಸುತ್ತೋಲೆ ಸಂಖ್ಯೆ: ಸಾಆ/ನೋಂ- 1/30-434/2022-23, ದಿನಾಂಕ : 18-08-2023 ಪ್ರಕಾರ, ಕರ್ನಾಟಕ ರಾಜ್ಯದಲ್ಲಿ 1ನೇ ಏಪ್ರಿಲ್ 2019ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಹಳೆಯ ಎಲ್ಲಾ (ಹಳೆಯ / ಅಸ್ತಿತ್ವದಲ್ಲಿರುವ ವಾಹನಗಳು) (ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನಗಳು, ಪ್ರಯಾಣಿಕ ಕಾರುಗಳು, ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು, ಟ್ರೈಲರ್, ಟ್ರ್ಯಾಕ್ಟರ್ ಇತ್ಯಾದಿ) ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು (ಹೆಚ್‌ಎಸ್‌ಆರ್‌ಪಿ) ಅಳವಡಿಸುವುದು ಕಡ್ಡಾಯವಾಗಿದೆ.

ಒಟ್ನಲ್ಲಿ ಸಾರಿಗೆ ಇಲಾಖೆ ಆದೇಶದಂತೆ ವಾಹನಗಳಿಗೆ ಹಳೆಯ ನಂಬರ್ ಪ್ಲೇಟ್ ಬದಲಿಸಿ ಎಚ್‌ಎಸ್‌ಆರ್‌ಪಿ ಅಳವಡಿಸಲು 2024ರ ಫೆಬ್ರವರಿ 17ರ ತನಕ ಗಡುವು ನೀಡಲಾಗಿದೆ. ಫೆಬ್ರವರಿ 17ಕ್ಕೆ ಈ ಗಡುವು ಮುಗಿದ ನಂತರ ಎಚ್‌ಎಸ್‌ಆರ್‌ಪಿ ಫಲಕ ಇಲ್ಲದ ವಾಹನಗಳ ಮಾಲೀಕರಿಗೆ ಭಾರಿ ದೊಡ್ಡ ಮೊತ್ತದ ದಂಡ ಕೂಡ ವಿಧಿಸುವುದಾಗಿ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ ಜನರು ಕೂಡ ಈಗ ಚಿಂತಿತರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+