ರ‍್ಯಾಗಿಂಗ್ ಗೆ ಎಂಜಿನಿಯರಿಂಗ್ ವಿದ್ಯಾರ್ಥಿ ಬಲಿ
ಬೆಂಗಳೂರು, ಫೆಬ್ರವರಿ 07: ರ‍್ಯಾಗಿಂಗ್ ಪೀಡೆಗೆ ನಗರದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬಾಕೆ ಬಲಿಯಾಗಿದ್ದಾಳೆ.
ನಗರದ ಕುಮಾರಸ್ವಾಮಿ ಬಡಾವಣೆ ಬಳಿ ಇರುವ ದಯಾನಂದ ಸಾಗರ ಕಾಲೇಜಿನಲ್ಲಿ ಮೊದಲ ವರ್ಷದ ಸಿವಿಲ್ ಎಂಜಿನಿಯರಿಂಗ್ ಕಲಿಯುತ್ತಿದ್ದ ಯುವತಿ ಮೇಘನಾ (19) ಸಹಪಾಠಿಗಳ ರ್ಯಾಗಿಂಗ್‌ನಿಂದಾಗಿ ಮನನೊಂದು ನೇಣಿಗೆ ಶರಣಾಗಿದ್ದಾಳೆ.
ಕಾಲೇಜಿನಲ್ಲಿ ಕ್ಲಾಸ್ ರೆಪ್ರೆಸೆಂಟೇಟಿವ್ ಎಲೆಕ್ಷನ್ ಸಂಬಂಧ ಎಚ್‌ಒಡಿ ಮತ್ತು ಇತರ ವಿದ್ಯಾರ್ಥಿಗಳು ತರಗತಿಯಲ್ಲಿ ಅವಮಾನ ಮಾಡಿದ್ದಾರೆ, ಸಹಪಾಠಿಗಳು ಮೇಘನಾಳೊಂದಿಗೆ ಅಂತರ ಕಾಯ್ದುಕೊಂಡಿದ್ದಾರೆ ಹೀಗಾಗಿ ಮಾನಸಿಕವಾಗಿ ಕುಗ್ಗಿದ್ದ ಮೇಘನಾ ಕಾಲೇಜಿಗೆ ಹೋಗುವುದನ್ನು ಬಿಟ್ಟು ಮನೆಯಲ್ಲೇ ಇದ್ದರು. ನಂತರ ಪೋಷಕರ ಒತ್ತಾಯಕ್ಕೆ ಮಣಿದು ಕಾಲೇಜಿಗೆ ತೆರಳಿದ್ದರೂ ಆದರೆ ಆಗಲೂ ಸಹಪಾಠಿಗಳು ಇದೇ ವರ್ತನೆ ಮುಂದುವರೆಸಿದ ಕಾರಣ ಮೇಘನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸಹಪಾಠಿಗಳ ವರ್ತನೆ ಹಾಗೂ ಚುಚ್ಚುಮಾತಿನಿಂದ ತೀವ್ರವಾಗಿ ಘಾಸಿಗೊಂಡಿದ್ದ ಮೇಘನಾ ಚನ್ನಸಂದ್ರದ ಶಬರಿ ಅಪಾರ್ಟ್‌ಮೆಂಟ್‌ನ ತಮ್ಮ ಸ್ವಗೃಹದಲ್ಲಿ ನಿನ್ನೆ (ಫೆ.07) ಮಧ್ಯಾಹ್ನ ಯಾರೂ ಇಲ್ಲದ ಸಮಯದಲ್ಲಿ ನೇಣು ಹಾಕಿಕೊಂಡಿದ್ದಾಳೆ.
ಮೇಘನಾ ಪೋಷಕರ ಆಕೃಂದನ ಮುಗಿಲು ಮುಟ್ಟಿದ್ದು, ಕಾಲೇಜಿನ ಆಡಳಿತ ಮಂಡಳಿ ಮತ್ತು ಸಹಪಾಠಿಗಳ ವಿರುದ್ಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.












Click it and Unblock the Notifications