ಬೆಂಗಳೂರಲ್ಲಿ ಶೀಘ್ರವೇ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್ ಸಂಚಾರ: ಬಿಎಂಟಿಸಿ

ಬೆಂಗಳೂರು, ಡಿಸೆಂಬರ್ 22: ಸುಮಾರು 40 ವರ್ಷಗಳ ಹಿಂದೆ (1970-80) ಬೆಂಗಳೂರಿಗರಿಗೆ ಸೇವೆ ನೀಡಿದ್ದ ಡಬಲ್ ಡೆಕ್ಕರ್ ಬಸ್‌​ಗಳು ಇದೀಗ ಮತ್ತೆ ಬೆಂಗಳೂರಿನಲ್ಲಿ ಸಂಚಾರ ಆರಂಭಿಸಲಿವೆ. ಕೇವಲ ಸಿನಿಮಾಗಳಲ್ಲಿ ಮಾತ್ರವೇ ನೋಡಿದ್ದ ಡಬಲ್ ಡೆಕ್ಕರ್ ಬಸ್‌​ಗಳಲ್ಲಿ ಇಂದಿನ ಪೀಳಿಗೆ ಓಡಾಬಹುದಾಗಿದೆ.

ಸಿಲಿಕಾನ್ ಸಿಟಿಯ ರಸ್ತೆಗಳನ್ನು ಆಳಿದ್ದ ಡಬಲ್ ಡೆಕ್ಕರ್ ಬಸ್‌ಗಳನ್ನು ಕೆಲವು ಕಾರಣಾಂತರಗಳಿಂದ 1997ರಲ್ಲಿ ಹಂತಹಂತವಾಗಿ ಸ್ಥಗಿತಗೊಳಿಸಿತ್ತು. ಕರ್ನಾಟಕ ಸರ್ಕಾರ ಇದೀಗ ಮತ್ತೆ ಆ ಬಸ್ ಗಳನ್ನು ರಸ್ತೆಗಿಳಿಸಲು ಸಿದ್ಥತೆಗಳನ್ನು ಮಾಡಿಕೊಂಡಿದೆ.

ಈ ಸಂಬಂಧ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕಳೆದ ನವೆಂಬರ್ ತಿಂಗಳಿನಲ್ಲಿ ಪ್ರಕಟಣೆ ಹೊರಡಿಸಿತ್ತು. ಬಿಎಂಟಿಸಿ ಡಬಲ್ ಡೆಕ್ಕರ್ ಬಸ್ ಗಳ ಖರೀದಿಗೆ ಆಸಕ್ತಿ ವ್ಯಕ್ತಪಡಿಸಿತ್ತು. ಜೊತೆಗೆ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ (ಬಿಡ್ಡಿಂಗ್) ಕಂಪನಿಯು ಕನಿಷ್ಠ 100 ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಬಸ್‌ಗಳನ್ನು ತಯಾರಿಸುವ ಮತ್ತು ಪೂರೈಸುವ ಅನುಭವವನ್ನು ಹೊಂದಿರಬೇಕು ಎಂದು ಷರತ್ತು ವಿಧಿಸಿತ್ತು. ಇದರೊಂದಿಗೆ ಮೋಟಾರು ವಾಹನ ಕಾಯಿದೆಯ ಶಾಸನಬದ್ಧ ಅವಶ್ಯಕತೆಗಳನ್ನು ತಿಳಿಸಿತ್ತು.

Electric Double Decker Bus Run in Bengaluru very soon BMTC Officer Said

ಸಿಲಿಕಾನ್ ಸಿಟಿಯಲ್ಲಿ ಮತ್ತೆ ಡಬಲ್‌ ಡೆಕ್ಕರ್ ಬಸ್ ಆರಂಭ ವಿಚಾರವಾಗಿ ಬಿಎಂಟಿಸಿ ನಿರ್ದೇಶಕ (ಐಟಿ) ಎ.ವಿ.ಸೂರ್ಯ ಸೇನ್ ಮಾತನಾಡಿ, ಡಬ್ಬಲ್ ಡೆಕ್ಕರ್ ಬಸ್‌ಗಳನ್ನು ತಯಾರಿಸುತ್ತಿರುವ ಸಂಸ್ಥೆಗಳು ಬಹಳ ಕಡಿಮೆಯಿದೆ. ನಾವು ತಯಾರಕರ ಬಳಿ ಅಗತ್ಯತೆ ತಿಳಿಸಿದ್ದೇವೆ. ಐದು ಎಲೆಕ್ಟ್ರಿಕ್ ಎಸಿ ಡಬಲ್ ಡೆಕ್ಕರ್ ಬಸ್‌ಗಳಿಗೆ ಶೀಘ್ರದಲ್ಲೇ ಟೆಂಡರ್ ಕರೆಯಲು ನಿರ್ಧರಿಸಿದ್ದೇವೆ. ಮೊದಲು ಐದು ಬಸ್ ಗಳನ್ನು ಪಡೆದು ಅನುಮೋದನೆ ಪಡೆದುಕೊಂಡ ಬಳಿಕ ಮತ್ತೆ ಐದು ಬಸ್ ಗಳಿಗೆ ಟೆಂಡರ್ ಕರೆಯುತ್ತೇವೆಂದು ಎಂದು ಅವರು ಹೇಳಿದರು.

200 ಕಿ.ಮೀ. ಸಂಚರಿಸುವ ಸಾಮರ್ಥ್ಯ

ಈ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್‌ಗಳು ಒಟ್ಟು ಒಂಬತ್ತು ಮೀಟರ್ ಉದ್ದವಿರಲಿವೆ. ಒಂದೇ ಚಾರ್ಜ್‌ನಲ್ಲಿ 200 ಕಿಲೋಮೀಟರ್ ಸಂಚರಿಸುವಷ್ಟು ಸಾಮರ್ಥ್ಯ ಹೊಂದಿರಲಿವೆ. ಸದ್ಯ ಟೆಂಡರ್ ಕರೆಯುವ ಹಂತದಲ್ಲಿರುವ ನಾವು ಇನ್ನೂ ಮಾರ್ಗಗಳನ್ನು ನಿರ್ಧರಿಸಿಲ್ಲ. ಮೊದಲ ಹಂತದಲ್ಲಿ ಐದು ಬಸ್‌ಗಳು ದೊರೆತ ಬಳಿಕ ಮಾರ್ಗದ ಕುರಿತು ನಿರ್ಧರಿಸುತ್ತೇವೆ ಎಂದರು.

ಈ ಹಿಂದೆ ಕೆ.ಆರ್.ಮಾರುಕಟ್ಟೆ ಮತ್ತು ಮೆಜೆಸ್ಟಿಕ್‌ನಿಂದ ಶಿವಾಜಿನಗರ, ದೂಪನಹಳ್ಳಿ, ಜಯನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಈ ಡಬಲ್‌ ಡೆಕ್ಕರ್‌ ಬಸ್‌ಗಳು ಸಂಚರಿಸಿದ್ದವು. ಸದ್ಯ ಬಿಎಂಟಿಸಿ ಬಳಿ ಒಂದು ಡಬಲ್ ಡೆಕ್ಕರ್ ಬಸ್ ಇದೆ. ಆ ಬಸ್‌ಗೆ ಕಾವೇರಿ ಎಂದು ಹೆಸರಿಸಲಾಗಿದ್ದು, ಅದನ್ನು ಸಿನಿಮಾ ಚಿತ್ರೀಕರಣಕ್ಕಾಗಿ ಬಾಡಿಗೆಗೆ ನೀಡಲಾಗಿದೆ.

Electric Double Decker Bus Run in Bengaluru very soon BMTC Officer Said

ಸದ್ಯ ಬೆಂಗಳೂರು ಅಭಿವೃದ್ಧಿ ಕಂಡಿದ್ದು, ಅಲ್ಲಲ್ಲಿ ಮೇಲ್ಸೇತುವೆಗಳು ನಿರ್ಮಾಣಗೊಂಡಿವೆ. ಎಲ್ಲೆಂದರಲ್ಲಿ ಮರದ ಕೊಂಬೆಗಳು ಮತ್ತು ನೇತಾಡುವ ಕೇಬಲ್‌ಗಳನ್ನು ಕಾಣಬಹುದಾಗಿದೆ. ರಸ್ತೆ ಅಂಡರ್‌ಪಾಸ್‌ಗಳು ಇದ್ದು, ಇಂತಹ ಸ್ಥಿತಿಯಲ್ಲಿ ಈ ಡಬಲ್ ಡೆಕ್ಕರ್ ಬಸ್ ನಿರ್ವಹಣೆ ಕಷ್ಟವಾಗಲಿದೆ. ಈ ಕಾರಣಕ್ಕೆ ಬಸ್‌ಗಳು ತಯಾರಾಗಿ ದೊರೆತ ಮೇಲೆ ಮಾರ್ಗಗಳನ್ನು ಆಯ್ಕೆ ಮಾಡಲು ಸಮೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+