E-Khata: ಬೆಂಗಳೂರಿನ 23 ಲಕ್ಷ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್, ಬಿಬಿಎಂಪಿಯಿಂದ ಹೊಸ ಅಪ್ಡೇಟ್ಸ್
ಬೆಂಗಳೂರು, ಫೆಬ್ರವರಿ 19: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬೆಂಗಳೂರಿನ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ ನೀಡಿದೆ. ಮುಂದಿನ ವಾರದಿಂದ ಬೃಹತ್ ಅಭಿಯಾನ ಆರಂಭಿಸಲಿರುವ ಬಿಬಿಎಂಪಿಯು ಖಾತಾಗಳ ಕರಡು ಪ್ರತಿಗಳನ್ನು ತಲುಪಿಸಲು ಸಜ್ಜಾಗಿದೆ. 23 ಲಕ್ಷ ಆಸ್ತಿ ಮಾಲೀಕರು ಕಚೇರಿ ಬರುವುದು ತಪ್ಪಲಿದೆ. ಈ ಪ್ರಕ್ರಿಯೆಯಿಂದ ಇ-ಖಾತಾ ವಿತರಣೆಯು ಮತ್ತಷ್ಟು ಸರಳಗೊಳ್ಳಲಿದೆ.
ಇದು ಕರಡು ಆಸ್ತಿ ಪ್ರಮಾಣಪತ್ರವಾಗಿದೆ. ಇ-ಖಾತಾ ಅನ್ನು ನೀವು ಆನ್‌ಲೈನ್‌ನಲ್ಲೇ ಪಡೆದುಕೊಳ್ಳಬಹುದಾಗಿದೆ. ಬಿಬಿಎಂಪಿ ಅಧಿಕೃತ ವೆಬ್‌ಸೈಟ್‌ನಿಂದ ಆಸ್ತಿ ಡೌನ್‌ಲೋಡ್ ಮಾಡಿಕೊಳ್ಳಲ ಲಕ್ಷಾಂತರ ಆಸ್ತಿ ಮಾಲೀಕರಿಗೆ ಈ ಕರಡು ಖಾತಾ ಪತ್ರ ವಿತರಣೆ ಮಾಡಲಾಗುವುದು. ಆಸ್ತಿ ಮಾಲೀಕರಿಗೆ ಕರಡು ಖಾತಾ ಪ್ರಮಾಣಪತ್ರಗಳ ಡೌನ್‌ಲೋಡ್ ಮಾಡಿಕೊಳ್ಳಲು ಯಾರಿಗೆಲ್ಲ ಮಾಹಿತಿ ಇಲ್ಲ ಅಂತವರಿಗೆ ಬಿಬಿಎಂಪಿಯ ಈ ಕ್ರಮ ಉಪಯೋಗಕ್ಕೆ ಬರಲಿದೆ.

ಬಿಬಿಎಂಪಿ ಮುಂದಿನ ವಾರದಿಂದ ಕರಡು ಖಾತೆ ವಿತರಣೆಗೆ ಕ್ರಮ ವಹಿಸಲಿದೆ. ಡಿಜಿಟಲ್ ಪೋರ್ಟಲ್ ಮುಖೇನಕರಡು ಇ-ಖಾತಾ ಪಡೆಯುವ ಆಸ್ತಿ ಮಾಲೀಕರ ಈ ಉಪ್ರಕಮಕ್ಕೆ ಒಳಪಡುವುದಿಲ್ಲ. ಆಸ್ತಿ ಮಾಲೀಕರಿಗೆ ಕರಡು ಪ್ರತಿ ನೀಡಲಾಗುತ್ತದೆ. ಇದೊಂದು ಕೈಯಲ್ಲಿದ್ದರೆ ಸಾಕು ಆಸ್ತಿ-ಸಂಬಂಧಿತ ವಿವರ ಸಲ್ಲಿಸಿ ಬೆಂಗಳೂರು ಒನ್, ಬಿಬಿಎಂಪಿ ಕಚೇರಿಗಳಲ್ಲಿ ನೀವು ಅಂತಿಮ ಇ-ಖಾತಾಗೆ ಅರ್ಜಿ ಸಲ್ಲಿಸಬಹುದು. ಇದು ಡಿಜಿಟಲೀಕರಣಕ್ಕೆ ಸಹಾಯ ಮಾಡುತ್ತದೆ. ಖಾತಾ ವಿತರಣೆಯನ್ನು ಸರಳೀಕರಣಗೊಳಿಸುತ್ತದೆ ಎಂಬುದು ಬಿಬಿಎಂಪಿ ಪ್ಲಾನ್ ಆಗಿದೆ.
ಅಂತಿಮ ಖಾತಾ ವಿತರಣೆಗೆ ಪ್ರಮುಖ ಸಮಸ್ಯೆ ಎಂದರೆ, ಕಂದಾಯ ಇಲಾಖೆ ಸಹಾಯಕ ಅಧಿಕಾರಿಗಳ (ARO) ಅದಕ್ಕೆ ಅನುಮೋದನೆ ನೀಡಬೇಕು. ಅದಾಗದಿದ್ದರೆ ನೀವು ಯಾವ ವೆಬ್‌ಸೈಟ್‌ನಲ್ಲೂ ಡೌನ್‌ಲೋಡ್ ಮಾಡಿಕೊಳ್ಳಲು ಬರಲ್ಲ. ಇದರೊಂದು ಪ್ರಾಥಮಿಕ ಅಡಚಣೆ ಎನ್ನಲಾಗುತ್ತಿದೆ.

ಮುಂದಿನ ವಾರವೇ ಮನೆ ಮನೆ ವಿತರಣೆ ಶುರು
ಬಿಬಿಎಂಪಿ ಎಂಟು ವಲಯಗಳಲ್ಲಿ ಮುಂದಿನ ವಾರದಿಂದ ಮನೆ ಮನೆಗೆ ಕರಡು ಖಾತಾ ವಿತರಣೆ ಮಾಡಲು ಖಾಸಗಿ ಏಜೆನ್ಸಿಗಳೊಂದಿಗೆ ಕೈ ಜೊಡಿಸಿದೆ. ನಿಮ್ಮ ಮನೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಲೆಟರ್ ಕವರ್ ಇರುವ ಕರಡು ಖಾತೆ ಬರಲಿದೆ. ಇದು ಬಣ್ಣದ ಲಕೋಟೆಯಾಗಿದೆ. ಇ-ಖಾತಾದ ಮಹತ್ವ ತಿಳಿಸಲಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
ಬಿಬಿಎಂಪಿಯು ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಆಸ್ತಿ ನೋಂದಣಿ, ಅಡಮಾನ ಮತ್ತು ಇತರ ವಹಿವಾಟುಗಳಿಗೆ ಇ-ಖಾತಾ ಕಡ್ಡಾಯ ಮಾಡಿತು. 64 ಸಹಾಯಕ ಕಂದಾಯ ಕಚೇರಿಗಳಲ್ಲಿ ಹಸ್ತಚಾಲಿತ ನೋಂದಣಿ ಪ್ರಮಾಣ ಪತ್ರಗಳು ಡಿಜಿಟಲೀಕರಣಗೊಳಿಸಲಾಯಿತು. ಈ ಡಿಜಿಟಲೀಕರಣದಿಂದ ಆಸ್ತಿ ಖಾತೆಗೆ ಸಂಬಂಧಿಸಿದಂತೆ ಮಾಲೀಕರು ಕಚೇರಿಗೆ ಅಲೆದಾಡುವುದು ತಪ್ಪಿತು.
ಇ-ಖಾತಾ ಮಾಹಿತಿಗೆ ಸಂಪರ್ಕಿಸಿ
ಈ ಇ-ಖಾತಾ ಜಾರಿಗೆ ಬಂದಾಗಿನಿಂದ ಬಿಬಿಎಂಪಿ ಸುಮಾರು 1.4 ಲಕ್ಷ ಅಂತಿಮ ಇ-ಖಾತಾ ವಿತರಣೆ ಮಾಡಿದೆ. ಡಿಜಿಟಲೀಕರಣಗೊಂಡ ಎಲ್ಲ ಇ-ಖಾತಾ ವಿತರಣೆ ಮಾಡುತ್ತಿದೆ. ಅದಕ್ಕಾಗಿ ಅಭಿಯಾನ, ಹೊಸ ಹೊಸ ಕ್ರಮ ಕೈಗೊಳ್ಳಲಾಗಿದೆ. ಇ-ಖಾತಾ ಸಂಬಂಧಿ ಹೆಚ್ಚಿನ ಮಾಹಿತಿಗೆ, ವಿಚಾರಣೆಗಾಗಿ 9480683695 ಸಂಪರ್ಕಿಸಬಹುದು.












Click it and Unblock the Notifications