ಕನ್ನಡ.. ಕನ್ನಡ ಅಂತಾ ಕನ್ನಡಿಗರು ಕಿರುಕುಳ ಕೊಡಬೇಡಿ: ಕಾಂಗ್ರೆಸ್‌ನ ನಾಯಕ, ಇಲ್ಲಿದೆ ವೈರಲ್ ವಿಡಿಯೋ!
ಬೆಂಗಳೂರು ಹಾಗೂ ಕನ್ನಡಿಗರ ಬಗ್ಗೆ ಹೊರಗಿನವರು ಮಾತನಾಡುವುದು ವೈರಲ್ ಆಗುತ್ತಿದೆ ನಿಜ. ಆದರೆ ಇದೀಗ ಕನ್ನಡದ ಬಗ್ಗೆ ಮತ್ತು ಕನ್ನಡಿಗರ ಸ್ವಾಭಿಮಾನದ ಬಗ್ಗೆ ಕಾಂಗ್ರೆಸ್‌ನ ಪ್ರಭಾವಿ ನಾಯಕ, ವಲಸಿಗರ ಪರ ವಹಿಸಿಕೊಂಡು ಅಥವಾ ವಲಸಿಗರನ್ನು ಓಲೈಕೆ ಮಾಡುವಂತೆ ಮಾತನಾಡಿರುವು ಭಾರೀ ವಿರೋಧಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಈಗಾಗಲೇ ವಲಸಿಗರ ಹಾವಳಿ ಹೆಚ್ಚಾಗಿದೆ. ಕಾಂಗ್ರೆಸ್ ನಾಯಕನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಕನ್ನಡಿಗರಿಂದ ವಿರೋಧ ವ್ಯಕ್ತವಾಗುತ್ತಿದೆ. ಇಷ್ಟಕ್ಕೂ ಏನಿದು ವೈರಲ್ ವಿಡಿಯೋ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು ಹಾಗೂ ಕನ್ನಡದ ಬಗ್ಗೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಮಾತನಾಡುತ್ತಿರುವುದು ಹಾಗೂ ವೈರಲ್ ಆಗುತ್ತಿರುವುದನ್ನು ನೀವು ನೋಡಿರುತ್ತೀರಿ. ಆದರೆ, ಇದೀಗ ಕರ್ನಾಟಕದ ರಾಜಕಾರಣಿಯೇ ನಾವು ಕನ್ನಡ.. ಕನ್ನಡ ಅಂತಾ ಹೇರಿಕೆ ಮಾಡುವುದನ್ನು ಬಿಡಬೇಕು ಎಂದು ಹೇಳಿರುವುದು ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ. ಆ ವೈರಲ್ ವಿಡಿಯೋದ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಾಂಗ್ರೆಸ್ ನಾಯಕ ಮೊಹಮ್ಮದ್ ಹಾರಿಸ್ ನಲಪಾಡ್ ಅವರು ಕನ್ನಡದ ಬಗ್ಗೆ ಮಾತನಾಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ರೇಡಿಯೋ ಜಾಕಿ, ನಟಿ ರಾಪಿಡ್ ರಶ್ಮಿ ಅವರ ಪಾಡ್‌ಕಾಸ್ಟ್‌ನಲ್ಲಿ ನಲಪಾಡ್ ಅವರು ಮಾತನಾಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಬೆಂಗಳೂರನ್ನು ಯುವಜನ ಸ್ನೇಹಿಯನ್ನಾಗಿ ಮಾಡುವುದಕ್ಕೆ ನೀವು ಕೊಡುವ ಐದು ಸಲಹೆಗಳು ಏನು ಎಂದು ರಶ್ಮಿ ಅವರು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ನಲಪಾಡ್ ಅವರು, ನಮ್ಮಲ್ಲಿ ಕೆಲವರು ಮೊದಲಿಗೆ ಕನ್ನಡ ಮಾತನಾಡಿ ಕನ್ನಡ ಮಾತನಾಡಿ ಅಂತಾ ನಾರ್ಥ್ ಇಂಡಿಯನ್ಸ್‌ನ ತೊಂದರೆ ಮಾಡುತ್ತಿದ್ದಾರೆ. ಇದು ನಿಲ್ಲಬೇಕಿದೆ ಎಂದು ಹೇಳಿದ್ದಾರೆ.
ಕನ್ನಡವನ್ನು ಪ್ರೀತಿಸಿ, ಬೆಳೆಸಿ ಹಾಗೂ ಕನ್ನಡವನ್ನು ಉಳಿಸಿ. ಅದನ್ನು ಆಯುಧವನ್ನಾಗಿ ಮಾಡಿಕೊಳ್ಳಬೇಡಿ. ಮೊನ್ನೆ ಯಾವುದೋ ಪಾರ್ಲರ್‌ಗೆ ಹೋಗಿದ್ದೆ ಅಲ್ಲಿನ ಮಹಿಳೆ ನೀವು ಬೇರೆ ಪೊಲಿಟಿಕಲ್ ತರ ನೀವೂ ಕನ್ನಡ.. ಕನ್ನಡ ಅಂತಾ ಬೇರೆಯವರ ಮೇಲೆ ಹಲ್ಲೆ ಮಾಡುತ್ತೀರಾ ಎಂದು ಎಂದು ಪ್ರಶ್ನೆ ಮಾಡಿದರು. ಇದನ್ನು ಕೇಳಿ ತುಂಬಾ ಬೇಸರವಾಯಿತು. ನಾವು ನಮ್ಮ ಭಾಷೆಯನ್ನು ಪ್ರೀತಿಸುವುದು ಬೇರೆಯವರ ಮೇಲೆ ಹೇರಿಕೆ ಮಾಡಿಯಲ್ಲ. ಬೇರೆ ಅವರು ನಮ್ಮ ಮೇಲೆ ದಬ್ಬಾಳಿಕೆ ಮಾಡುವವರೂ ಇದ್ದಾರೆ. ಕೆಲವು ನಾರ್ಥಿಗಳು ಬೆಂಗಳೂರು ಅಭಿವೃದ್ಧಿ ಮಾಡಿದ್ದೇವೆ ಅಂತಾ ಹೇಳುವವರೂ ಇದ್ದಾರೆ.
ನಾನು ಕನ್ನಡದ ಪರ. ನಮ್ಮ ಭಾಷೆ, ನಮ್ಮ ನುಡಿ ಆದರೆ ಅದನ್ನು ಬೇರೆಯವರ ಮೇಲೆ ಹೇರುವುದು ಬೇಡ. ಅವರ ನಮ್ಮ ಅತಿಥಿಗಳು ಅವರನ್ನು ಗೌರವಿಸೋಣ. ಈ ಅಭಿಮಾನ ನಮ್ಮ ಬೆಂಗಳೂರಿಗೆ ಕೆಟ್ಟ ಹೆಸರು ಬರುವುದಕ್ಕೆ ಕಾರಣವಾಗಬಾರದು. ಬೆಂಗಳೂರಿನ ಹೆಸರು ಕೆಡುತ್ತಿದ್ದಂತೆಯೇ ಬೇರೆ ನಗರಗಳು ಇದರ ಲಾಭವನ್ನು ಪಡೆದುಕೊಳ್ಳುವುದಕ್ಕೆ ನೋಡುತ್ತಿವೆ ಎಂದೂ ಅವರು ಹೇಳಿದ್ದಾರೆ.
ಇವ್ನು ಯಾವನ್ನು ಕನ್ನಡದವರು ಹೇಗೆ ಇರ್ಬೇಕು ಅಂತ ಹೇಳೋಕ್ಕೆ?
— ಸಜಿತ್ (@SajithGowda) July 26, 2025
pic.twitter.com/5cu4SmR1sR
ನಲಪಾಡ್ ಅವರ ಹೇಳಿಕೆಗೆ ಪರ - ವಿರೋಧವೂ ವ್ಯಕ್ತವಾಗುತ್ತಿದೆ. ಕನ್ನಡಿಗರ ಮೇಲೆಯೇ ದಬ್ಬಾಳಿಕೆ, ಹಲ್ಲೆ ಹಾಗೂ ಕನ್ನಡದ ಬಗ್ಗೆ ಬೇರೆಯವರು ಕೀಳಾಗಿ ಮಾತನಾಡುವಾಗ ಈ ರೀತಿ ಕನ್ನಡಿಗರೇ ಹೇಳುವುದು ತಪ್ಪು ಎಂದಿದ್ದಾರೆ.












Click it and Unblock the Notifications