ನಿಖಿಲ್ ಕುಮಾರಸ್ವಾಮಿ: ರಾಜಕೀಯ ಇಚ್ಛೆಗೆ ಆಂಧ್ರ ಕೊಳಕು ರಾಜಕೀಯ ಬೆಂಬಲಿಸಬೇಡಿ ಎಂದ ಕನ್ನಡಿಗರು!

ಆಂಧ್ರಪ್ರದೇಶ ಹಾಗೂ ಕರ್ನಾಟಕದ ನಡುವೆ ಎಐ ಹಬ್ ಹಾಗೂ ಹೂಡಿಕೆ ವಿಚಾರದಲ್ಲಿ ನಡೆದಿರುವ ವಾಕ್ಸಮರದ ನಡುವೆ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಅವರು ಮಾಡಿರುವ ಟ್ವೀಟ್ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ನಿಮ್ಮ ರಾಜಕೀಯ ಹಿತಾಸಕ್ತಿಗಾಗಿ ಬೆಂಗಳೂರಿನ ಪ್ರತಿಷ್ಠೆ ಕಳೆಯ ಬೇಡಿ ಎಂದು ಕನ್ನಡಿಗರು ಕಮೆಂಟ್ ಮೂಲಕ ರಿಯಾಕ್ಟ್‌ ಮಾಡಿದ್ದಾರೆ.

ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್ ಮಾಡಿರುವ ಟ್ವೀಟ್ ಭಾರೀ ಚರ್ಚೆಗೆ ಕಾರಣವಾಗಿದೆ. ಈ ರೀತಿ ಇರುವಾಗ ಜೆಡಿಎಸ್‌ನ ಮುಖಂಡ ನಿಖಿಲ್ ಕುಮಾರಸ್ವಾಮಿ ಅವರು ಆಂಧ್ರ ಸಚಿವರ ಟ್ವೀಟ್ ಸಮರ್ಥನೆ ಮಾಡಿಕೊಂಡು ಅಥವಾ ಬೆಂಬಲಿಸುವ ಮಾದರಿಯಲ್ಲಿ ಮಾಡಿರುವ ಟ್ವೀಟ್ ಭಾರೀ ಚರ್ಚೆಗೆ ಕಾರಣವಾಗಿದೆ. ವೀಣಾ ಜೈನ್ ಎನ್ನುವವರು, ಕರ್ನಾಟಕದ ಜನರು 2028ನೇ ಸಾಲಿನ ವಿಧಾನಸಭೆ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ. ಉಳಿದಿರುವ ಕ್ಷೇತ್ರಗಳಿಗೂ ಪೆಟ್ಟು ಬೀಳಲಿದೆ ಎಂದಿದ್ದಾರೆ.

Don t Fall for Andhra s Tricks Kannadigas Hit Out at Politics Behind Nikhil Kumaraswamy

ಅಮರನಾಥ್‌ ಎನ್ನುವವರು, ನಿಖಿಲ್ - ಒಬ್ಬ ಜವಾಬ್ದಾರಿಯುತ ರಾಜಕಾರಣಿಯಾಗಿ, ದಯವಿಟ್ಟು ಸತ್ಯಗಳನ್ನು ಸಹ ಹೇಳಿ. ಕರ್ನಾಟಕದ ಯೋಜನೆಗಳನ್ನು ಗೆಲ್ಲುವ ಸಾಮರ್ಥ್ಯದೊಂದಿಗೆ ಉತ್ತಮ ಸಾರ್ವಜನಿಕ ಮೂಲಸೌಕರ್ಯದ ಕೊರತೆಯನ್ನು ಬೆರೆಸಬೇಡಿ. 24-25ನೇ ಹಣಕಾಸು ವರ್ಷದಲ್ಲಿ, ನಮಗೆ ಅತ್ಯಧಿಕ ಎಫ್‌ಡಿಐ ಒಳಹರಿವು ಸಿಕ್ಕಿದೆ. ಎಚ್.ಡಿ ದೇವೇಗೌಡ ಹಾಗೂ ಎಚ್.ಡಿ ಕುಮಾರಸ್ವಾಮಿ ಅವರು ಸೇರಿದಂತೆ ಎಲ್ಲಾ ಪಕ್ಷಗಳ ರಾಜಕಾರಣಿಗಳಿಗೆ ಧನ್ಯವಾದಗಳು, ನಾವು ಉತ್ತಮ ಪರಿಸರ ವ್ಯವಸ್ಥೆಯನ್ನು ನಿರ್ಮಿಸಿದ್ದೇವೆ. ಕರ್ನಾಟಕವು ಇನ್ನೂ ಜಿಸಿಸಿ ಮತ್ತು ವ್ಯವಹಾರ ಸಂಸ್ಥೆಗಳಿಗೆ ಅತ್ಯಂತ ಬೇಡಿಕೆಯ ತಾಣವಾಗಿದೆ ಎಂದು ಹೇಳಿದ್ದಾರೆ.

ಲಕ್ಷ್ಮೀಶ್ ಎನ್ನುವವರು, ಹಲವು ಮುಖ್ಯ ಅಂಶಗಳಿವೆ. ಅದೇ ಸಮಯದಲ್ಲಿ ಜೆಡಿಎಸ್ ಎನ್‌ಡಿಎ ಸರ್ಕಾರದ ಭಾಗವಾಗಿರುವುದರಿಂದ ಕರ್ನಾಟಕಕ್ಕಾಗುವ ಪ್ರಯೋಜನಗಳ ಬಗ್ಗೆ ದಯವಿಟ್ಟು ಟ್ವೀಟ್ ಮಾಡಿ ಎಂದು ಸವಾಲು ಹಾಕಿದ್ದಾರೆ. ಕನ್ನಡದವರು ಕನ್ನಡದವರಿಗೆ ವಿರೋಧಿ ಕಾರಣ ಅಧಿಕಾರ ದಾಹದ ರಾಜಕಾರಣ ಎಂದು ನೆಟ್ಟಿಗರೊಬ್ಬರು ರಿಯಾಕ್ಟ್‌ ಮಾಡಿದ್ದಾರೆ.

ನಾಗಭೂಷಣ್‌ ಎನ್ನುವವರು, ನಿಖಿಲ್ ಕುಮಾರಸ್ವಾಮಿ ಅವರೇ ಆಂಧ್ರಪ್ರದೇಶದ ಕೊಳಕು ರಾಜಕೀಯಕ್ಕೆ ಬೀಳಬೇಡಿ ಮತ್ತು ಕೇವಲ ರಾಜಕೀಯಕ್ಕಾಗಿ ಬೆಂಗಳೂರು ಬ್ರ್ಯಾಂಡ್ ಅನ್ನು ಮುರಿಯಬೇಡಿ ಎಂದು ಮನವಿ ಮಾಡಿದ್ದಾರೆ. ಕನಿಷ್ಠ ಇನ್ಮುಂದಾದರೂ ನಾವು ಆಂಧ್ರದಿಂದ ಬೆಂಗಳೂರು ಹಾಗೂ ಕರ್ನಾಟಕಕ್ಕೆ ಜನ ವಲಸೆ ಬರುವುದನ್ನು ಕಡಿಮೆ ಆಗಲಿದೆ ಎಂದು ನಿರೀಕ್ಷೆ ಮಾಡಬಹುದೇ ಎಂದು ಕನ್ನಡಿಗರೊಬ್ಬರು ಪ್ರಶ್ನೆ ಮಾಡಿದ್ದಾರೆ. ಒಟ್ಟಾರೆ ಆಂಧ್ರಪ್ರದೇಶ ಹಾಗೂ ಕರ್ನಾಟಕದ ಸಚಿವರ ನಡುವೆ ನಡೆಯುತ್ತಿದ್ದ ವಾಕ್ಸಮರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಆಂಧ್ರ ಸಚಿವರ ಪರವಾಗಿ ನಿಂತು ಕರ್ನಾಟಕ ಸಚಿವರನ್ನು ಹಾಗೂ ಸರ್ಕಾರವನ್ನು ಕೆಣಕಿರುವುದು ಕನ್ನಡಿಗರನ್ನು ಕೆರಳಿಸಿದೆ.

ಈ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಪರ - ವಿರೋಧ ಚರ್ಚೆ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+