ಡಾಮಿನಿಕ್ ಪತ್ನಿ ಪೊಲೀಸರಿಗೆ ಶರಣಾಗತಿ, 79.8 ಲಕ್ಷ ವಶಕ್ಕೆ!

ಡಾಮಿನಿಕ್ ರಾಯ್ 1.37 ಕೋಟಿ ರುಪಾಯಿಯೊಂದಿಗೆ ವಾಹನದಲ್ಲಿ ಪರಾರಿಯಾಗಿದ್ದ. ಮರುದಿನ ಮೌಂಟ್ ಕಾರ್ಮಲ್ ಕಾಲೇಜಿನ ಬಳಿ ದುಡ್ಡು ಇದ್ದ ವಾಹನ, ನಲವತ್ತೈದು ಲಕ್ಷ ರುಪಾಯಿ ನಗದು ಹಾಗೂ ಗನ್ ಪತ್ತೆಯಾಗಿತ್ತು.

ಬೆಂಗಳೂರು, ನವೆಂಬರ್ 28: ನವೆಂಬರ್ 23ರಂದು ಎಟಿಎಂಗೆ ಹಾಕಬೇಕಿದ್ದ ಹಣದೊಂದಿಗೆ ಪರಾರಿಯಾಗಿದ್ದ ಲಾಜಿಕ್ಯಾಶ್ ವಾಹನ ಚಾಲಕ ಡಾಮಿನಿಕ್ ರಾಯ್ ನ ಪತ್ನಿ ಎಲ್ವಿನ್ ನನ್ನು ಸೋಮವಾರ ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದು, 79.8 ಲಕ್ಷ ರುಪಾಯಿ ವಶಪಡಿಸಿಕೊಂಡಿದ್ದಾರೆ.

ಡಾಮಿನಿಕ್ ರಾಯ್ 1.37 ಕೋಟಿ ರುಪಾಯಿಯೊಂದಿಗೆ ವಾಹನದಲ್ಲಿ ಪರಾರಿಯಾಗಿದ್ದ. ಮರುದಿನ ಮೌಂಟ್ ಕಾರ್ಮಲ್ ಕಾಲೇಜಿನ ಬಳಿ ದುಡ್ಡು ಇದ್ದ ವಾಹನ, ನಲವತ್ತೈದು ಲಕ್ಷ ರುಪಾಯಿ ನಗದು ಹಾಗೂ ಗನ್ ಪತ್ತೆಯಾಗಿತ್ತು. ಆ ನಂತರ ಬೆಂಗಳೂರು ಪೊಲೀಸರು ಆರೋಪಿ ಹಾಗೂ ಆತನ ಪತ್ನಿ, ಮಗುವಿನ ಪತ್ತೆಗಾಗಿ ಬಲೆ ಬೀಸಿದ್ದರು.[ತಲೆಮರೆಸಿಕೊಂಡಿರುವ ಡೊಮಿನಿಕ್ ಬಂಧನಕ್ಕೆ ಪೊಲೀಸ್ ಬಲೆ]

Dominic wife

ರ್ರೈಲು, ಬಸ್ ಹಾಗೂ ವಿಮಾನ ನಿಲ್ದಾಣದಲ್ಲಿ ಹದ್ದಿನ ಕಣ್ಣಿಡಲಾಗಿತ್ತು. ಎಲ್ಲೂ ಡಾಮಿನಿಕ್ ರಾಯ್ ಮತ್ತು ಕುಟುಂಬ ಪತ್ತೆಯಾಗಿರಲಿಲ್ಲ ಆದ್ದರಿಂದ ಬೆಂಗಳೂರಲ್ಲೇ ಇರಬಹುದು ಎಂದು ಪೊಲೀಸರು ಶಂಕಿಸಿದ್ದರು. ಅದೀಗ ನಿಜವಾಗಿದೆ. ಬೆಂಗಳೂರಿನ ಬಾಣಸವಾಡಿಯ ಮನೆಯಲ್ಲಿ ಆರೋಪಿಯ ಪತ್ನಿಯನ್ನು ಪೊಲೀಸರು ಬಂಧಿಸಿ, 79.8 ಲಕ್ಷ ರುಪಾಯಿಯನ್ನು ವಶಪಡಿಸಿಕೊಂಡಿದ್ದರು.[ಬೆಂಗಳೂರು ATM ಧನವಾಹನ ಪತ್ತೆ, ಆದ್ರೆ 92 ಲಕ್ಷ ನಾಪತ್ತೆ]

ಆದರೆ, ಮೂಲಗಳ ಪ್ರಕಾರ ಆರೋಪಿಯ ಪತ್ನಿಯೇ ಭಾನುವಾರ ರಾತ್ರಿ ಪೊಲೀಸರಿಗೆ ಶರಣಾಗಿದ್ದಾರೆ. ಆದರೆ ಡಾಮಿನಿಕ್ ನಾಪತ್ತೆಯಾಗಿದ್ದಾನೆ. ಪೊಲೀಸರು ವಿಚಾರಣೆ ಮುಂದುವರಿಸಿದ್ದು, ಆರೋಪಿ ಚಾಲಕ ಡಾಮಿನಿಕ್ ರಾಯ್ ಪತ್ತೆಗಾಗಿ ಶೋಧ ಮುಂದುವರಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+