ಬೆಂಗಳೂರಿನಲ್ಲಿ ಹುಲಿ ಪ್ರತ್ಯಕ್ಷ್ಯ, ಚಿರತೆ ಜೊತೆಗೆ ಹೊಸ ಭಯ ಶುರು?
ಬೆಂಗಳೂರು ನಿವಾಸಿಗಳಿಗೆ ಕೆಲ ದಿನದಿಂದ ಚಿರತೆ ಭಯ ಶುರುವಾಗಿದೆ. ಅದ್ರಲ್ಲೂ ನಗರದ ಹೃದಯ ಭಾಗದಲ್ಲೆ ಚಿರತೆ ಕಂಡುಬಂದು ಆತಂಕ ಹೆಚ್ಚಾಗಿತ್ತು. ಒಂದು ಚಿರತೆಯ ಮೇಲೆ ಗುಂಡು ಹಾರಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಮತ್ತಷ್ಟು ಚಿರತೆಗಳನ್ನು ಹುಡುಕಲು ಶುರು ಮಾಡಿದ್ದಾರೆ. ಬೆಂಗಳೂರಿನ ಹಲವು ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿರುವ ವೇಳೆ ಈಗ ಹುಲಿಯ ಭಯ ಕೂಡ ಬೆಂಗಳೂರಿಗರಿಗೆ ಕಾಡತೊಡಗಿದೆ.
ಬೆಂಗಳೂರು ನಗರ ಬೆಳೆದಿದ್ದರೂ, ಬೆಂಗಳೂರು ಹೊರವಲಯ ಈಗಲೂ ಕಾಡಿನಂತೆ ಇದೆ. ಅದ್ರಲ್ಲೂ ಬೆಂಗಳೂರು ಸುತ್ತಮುತ್ತ ಇರುವ ಹಳ್ಳಿಗಳಲ್ಲಿ ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿ ಜನರು ಪರದಾಡುತ್ತಿದ್ದಾರೆ. ಆನೆ ಕಾಟ ಆಯ್ತು, ಚಿರತೆ ಕಾಟ ಹೆಚ್ಚಾಯ್ತು ಅನ್ನುವಾಗಲೇ ಬೆಂಗಳೂರು ಹೊರವಲಯದಲ್ಲಿ ಈಗ ಹುಲಿ ಕೂಡ ಕಂಡುಬಂದಿದೆ. ಅರೆರೆ ಎಲ್ಲಿ ಮಾರ್ರೆ? ಅಂತಾ ಕೇಳಿದ್ರಾ, ಬನ್ನಿ ಬೆಂಗಳೂರಿನ ಹೊರವಲಯದಲ್ಲಿ ಹುಲಿ ಕಂಡ ಸುದ್ದಿ ಕುರಿತಾಗಿ ಮಾಹಿತಿ ತಿಳಿಯೋಣ. ಹಾಗೇ ಹುಲಿಯ ರಿಯಲ್ ಫೋಟೋ ಕೂಡ ನೋಡೋಣ.

ಬೆಂಗಳೂರಿನಲ್ಲಿ ಹುಲಿ ಪ್ರತ್ಯಕ್ಷ್ಯ!
ಹೌದು.. ಹೌದು.. ಬೆಂಗಳೂರಲ್ಲಿ ಹುಲಿ ಪ್ರತ್ಯಕ್ಷ್ಯವಾಗಿದೆ. ಹೀಗಂತ ನೀವು ಹೆದರಬೇಕಿಲ್ಲ ಬಿಡಿ, ಬದಲಾಗಿ ಖುಷಿಪಡಿ. ಯಾಕೆ ಗೊತ್ತಾ? ಇದೀಗ ಹುಲಿ ಕಂಡುಬಂದಿದ್ದು ರಾಜಧಾನಿ ಬೆಂಗಳೂರಿನಲ್ಲಿ ಅಲ್ಲ ಬೆಂಗಳೂರು ಹೊರವಲಯದಲ್ಲಿ. ಅದೂ ಬನ್ನೇರುಘಟ್ಟದ ಕಾಡಿನ ಅಂಚಿನಲ್ಲಿ. ನಿಮಗೆಲ್ಲಾ ಗೊತ್ತಿರುವಂತೆ, ಬನ್ನೇರುಘಟ್ಟ ಮೃಗಾಲಯ ಹಲವು ಪ್ರಾಣಿಗಳಿಗೆ ತಾಣವಾಗಿದೆ. ಹಗಂತಾ ಇಲ್ಲಿ ಬರೀ ಝೂ ಮಾತ್ರ ಇಲ್ಲ. ಬನ್ನೇರುಘಟ್ಟದ ಮೃಗಾಲಯದ ಸುತ್ತಮುತ್ತಲೂ ಭಾರಿ ಪ್ರಮಾಣದಲ್ಲಿ ಕಾಡು ಹರಡಿದೆ. ಇದೀಗ ಇದೇ ಕಾಡಿನ ಅಂಚಿನಲ್ಲಿ ಹುಲಿ ರಾಜಗಾಂಭೀರ್ಯದಲ್ಲಿ ಹೆಜ್ಜೆ ಹಾಕಿದೆ. ಅದರ ಫೋಟೋ ಈಗ ವೈರಲ್ ಆಗುತ್ತಿದೆ. ಹೀಗೆ ಹುಲಿ ನಡೆದು ಹೋದ ಜಾಗದಲ್ಲಿ ಚಿರತೆ ಕೂಡ ಕಂಡುಬಂದಿದೆ!
ಹುಲಿ ಜೊತೆಗೆ ಚಿರತೆ ಪ್ರತ್ಯಕ್ಷ್ಯ!
ಅಷ್ಟಕ್ಕೂ ಈಗ ಬನ್ನೇರುಘಟ್ಟ ಜೈವಿಕ ಉದ್ಯಾನವನದ, ಕಾರ್ಯನಿರ್ವಾಹಕ ನಿರ್ದೇಶಕರು (Executive Director) ಹುಲಿ, ಚಿರತೆ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ಕುತೂಹಲ ಹೆಚ್ಚಿಸಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ, ಸ್ವಚ್ಛಂದವಾಗಿ ಓಡಾಡುವ ಚಿರತೆ ಮತ್ತು ಹುಲಿಯ ಫೋಟೋ ಕ್ಯಾಮೆರಾದಲ್ಲಿ ಲಾಕ್ ಆಗಿದೆ. ಹಾಗೆ ಬೆಂಗಳೂರಿನಲ್ಲಿ ಜೀವ ವೈವಿಧ್ಯತೆಯ ಘನತೆ ಹೆಚ್ಚಿಸಿದೆ. ಬನ್ನೇರುಘಟ್ಟ ಕಾಡಿನಲ್ಲಿ ಸಾಕಷ್ಟು ಪ್ರಾಣಿಗಳಿದ್ದು ಇದುವರೆಗೆ, ಮೃಗಾಲಯ ಬಿಟ್ಟು ಕಾಡಿನಲ್ಲಿ ಹುಲಿಗಳು ಕಾಣಿಸಿದ್ದು ತುಂಬಾ ಅಪರೂಪ. ಈಗ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿರುವಂತೆ ಹುಲಿಯೊಂದು ಈ ಕಾಡಿನಲ್ಲಿ ಆರಾಮವಾಗಿ ಓಡಾಡಿಕೊಂಡು ಇದೆ. ಜೊತೆಗೆ ಅದೇ ಜಾಗದಲ್ಲಿ, ಕೆಲ ಗಂಟೆ ವ್ಯತ್ಯಾಸದಲ್ಲಿ ಚಿರತೆಯೂ ಹಾದು ಹೋಗಿದೆ.
ಒಟ್ನಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನ ಬೆಂಗಳೂರಿಗೆ ಮಾತ್ರವಲ್ಲ, ಕನ್ನಡಿಗರಿಗೂ ಹೆಮ್ಮೆ. ಬೆಂಗಳೂರು ನಗರದಿಂದ ಕೆಲವೇ ಕಿಲೋಮೀಟರ್ ಅಂತರದಲ್ಲಿ ಇದ್ದರೂ, ಇದು ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಬನ್ನೇರುಘಟ್ಟ ಮೃಗಾಲಯ ಕೂಡ ಜಾಗತಿಕ ಮಟ್ಟದಲ್ಲಿ ತನ್ನ ಗೌರವ ಹೆಚ್ಚಿಸಿಕೊಂಡಿದ್ದು, ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಬಂದು ಮೃಗಾಲಯದ ಸುತ್ತಮುತ್ತ ಸುತ್ತಾಡಿ ಖುಷಿಪಡುತ್ತಾರೆ. ಹಾಗೆ ಇಲ್ಲಿನ ಸಫಾರಿ ಕೂಡ ಪದೇ ಪದೆ ಜನರನ್ನ ತನ್ನತ್ತ ಕೈಬೀಸಿ ಕರೆಯುತ್ತದೆ.












Click it and Unblock the Notifications