Get Updates
Get notified of breaking news, exclusive insights, and must-see stories!

Idli Cancer: ಇಡ್ಲಿ ಮಾಡುವಾಗ ಪ್ಲಾಸ್ಟಿಕ್ ಬಳಕೆ ನಿಷೇಧ: 2 ದಿನದಲ್ಲಿ ಆದೇಶ: ದಿನೇಶ್ ಗುಂಡೂರಾವ್

ಬೆಂಗಳೂರು, ಫೆಬ್ರವರಿ 27: ದಕ್ಷಿಣ ಭಾರತದ ಪ್ರಮುಖ ಆಹಾರ ಪದಾರ್ಥವಾಗಿರುವ ಹಾಗೂ ಅನಾರೋಗ್ಯ ಪಿಡೀತರಿಗೂ ಇಷ್ಟವಾಗುವ ಇಡ್ಲಿಯಿಂದ (Idli food) ಜನರ ಆರೋಗ್ಯ ಹಾಳಾಗುತ್ತದೆ, ಕ್ಯಾನ್ಸರ್ ಬರಲಿದೆ ಎಂಬ ಅಂಶ ಬಹಿರಂಗವಾಗಿದೆ. ಈ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರವು ಅಧಿಕೃತ ಆದೇಶ ಹೊರಡಿಸಲಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ಖಚಿತಪಡಿಸಿದ್ದಾರೆ.

ಹೌದು, ಇಡ್ಲಿ ತಯಾರಿಕೆ ವೇಳೆ ಬಳಕೆ ಮಾಡುವ ಪ್ಲಾಸ್ಟಿಕ್ ನಿಂದಾಗಿ ಕ್ಯಾನ್ಸರ್ ಕಾರಕ ಅಂಶಗಳು ಹೊರ ಸೂಸುತ್ತವೆ. ಇದನ್ನು ತಿನ್ನುವುದರಿಂದ ಕಾಯಿಲೆಗಳು ಬರುವ ಸಾಧ್ಯತೆ ಇದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಇನ್ನಷ್ಟು ವರದಿಗಳು ಸರ್ಕಾರದ ಕೈ ಸೇರಲಿವೆ. ಇದಕ್ಕೆ ಎರಡು ದಿನ ಬೇಕಾಗಬಹುದು.

Dinesh Gundu Rao Reaction Over Plastic Use in Idli Making He says Government Ban Order Soon

ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ''ಆಹಾರ ತಯಾರಿಕೆಯಲ್ಲಿ ಅದರಲ್ಲೂ ಇತ್ತೀಚೆಗೆ ಹೆಚ್ಚಾಗಿ ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದ್ದು, ಇದು ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹೀಗಾಗಿ ಹೋಟೆಲ್, ಉಪಹಾರ ಕೇಂದ್ರಗಳಲ್ಲಿ ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಈ ಕುರಿತು ಅಧಿಕೃತವಾಗಿ ಸುತ್ತೋಲೆ ಹೊರಡಿಸಲಾಗುವುದು'' ಎಂದು ಮಾಹಿತಿ ನೀಡಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ರಸ್ತೆ ಬದಿ ಅಂಗಡಿ, ತಳ್ಳುಗಾಡಿ, ದೊಡ್ಡ ಹೋಟೆಲ್‌ಗಳಲ್ಲಿ ಇಡ್ಲಿ ತಯಾರಿಕೆಯಲ್ಲಿ, ಪಾರ್ಸೆಲ್, ಬಡಿಸುವಾಗಿ ಪ್ಲಾಸ್ಟಿಕ್ ಬಳಕೆ ಬ್ಯಾನ್ ಮಾಡಬೇಕು ಎಂಬುದರ ಕುರಿತು ರಾಜ್ಯ ಸರ್ಕಾರ ಶೀಘ್ರವೇ ಅಧಿಕೃತ ಆದೇಶ ಹೊರಡಿಸಲಿದೆ. ಸುತ್ತೋಲೆಯಲ್ಲಿ ಇಡ್ಲಿ ತಯಾರಕರಿಗೆ ಒಂದಷ್ಟು ಸಲಹೆ-ಸೂಚನೆ ನೀಡುವ ಸಾಧ್ಯತೆಯೂ ಇದೆ.

Dinesh Gundu Rao Reaction Over Plastic Use in Idli Making He says Government Ban Order Soon

ನಿತ್ಯವು ಎಷ್ಟು ತಿಂದರೂ ಬೇಜಾರಾಗದ, ಎಂತಹ ಪರಿಸ್ಥಿತಿಯಲ್ಲೂ ಆರೋಗ್ಯಕ್ಕೆ ಉತ್ತಮವಾದ ಆಹಾರ ಎಂದು ಇಡ್ಲಿಯನ್ನು ಪರಿಗಣಿಸಲಾಗಿತ್ತು. ಇದೀಗ ಇಡ್ಲಿಯೇ ಜೀವಕ್ಕೆ ಕುತ್ತು ತರುತ್ತದೆ ಎಂದರೆ ಇದು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ನೂರಾರು ಇಡ್ಲಿ ಸ್ಯಾಂಪರ್ ಪರೀಕ್ಷೆ: ಹಾನಿಕಾರ ಅಂಶ ಪತ್ತೆ

ರಾಜ್ಯ ಆರೋಗ್ಯ ಇಲಾಖೆಯು ಇತ್ತೀಚೆಗೆ ವಿವಿಧ ಕಡೆಯಿಂದ ಇಡ್ಲಿಯಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವ ಸ್ಥಳಗಳಿಂದ 500 ಸ್ಯಾಂಪಲ್‌ಗಳ ಮಾದರಿಯನ್ನು ಪರಿಶೀಲಿಸಿದ್ದಾರೆ. ಇದರಲ್ಲಿ 35 ವರದಿಗಳು ನಾರ್ಮಲ್ ಎಂದು ಬಂದರೆ, ಹಲವು ವರದಿಯಲ್ಲಿ ಕಟು ಸತ್ಯ ಬಯಲಾಗಿದೆ.

ರೆಡ್ ಕಲರ್ ಬ್ಯಾನ್ ಬಳಿಕ ಇಡ್ಲಿ ಪ್ಲಾಸ್ಟಿಕ್ ಬಳಕೆ ಬ್ಯಾನ್!

ಇಡ್ಲಿ ಹಿಟ್ಟು ಪಾತ್ರೆಗೆ ಹಾಕಿ ಬಿಸಿ ಮಾಡಲು ಇಡುತ್ತೇವೆ. ಈ ವೇಳೆ ಅದರೊಂದಿಗೆ ಬಳಕೆ ಆಗುವ ಪ್ಲಾಸ್ಟಿಕ್ ಬೀಸಿಯಾದಾಗ ಹಾನಿಕಾರಕ ಅಂಶ ಹೊರ ಸೂಸುತ್ತದೆ. ಇದರಿಂದ ಕ್ಯಾನ್ಸರ್, ಹೃದಯಾಘಾತ, ಬಂಜೆತನದಂತ ಸಮಸ್ಯೆ ಬರುತ್ತದೆ' ಹೇಳಲಾಗಿದೆ. ಇಡ್ಲಿ ಮಾಡುವ, ಬಡಿಸಿ ತಿನ್ನುವ ಯಾವ ಹಂತದಲ್ಲೂ ಸಹ ಪ್ಲಾಸ್ಟಿಕ್ ಬಳಕೆ ಮಾಡದಂತೆ, ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗುತ್ತದೆ. ಈ ಹಿಂದೆ ಗೋಬಿ ಮಂಚೂರಿ ರೆಡ್ ಕಲರ್ ಮೇಲೆ ಬ್ಯಾನ್ ಮಾಡಿದ್ದ ಸರ್ಕಾರ ಎರಡು ದಿನದಲ್ಲಿ ಇಡ್ಲಿಗೆ ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+