ದೀಪಾವಳಿː ಬೆಂಗಳೂರಲ್ಲಿ ಎಲ್ಲೆಲ್ಲಿ ಪಟಾಕಿ ಸಿಗುತ್ತೆ?


ಬೆಂಗಳೂರು, ಅ. 21: ದೀಪಗಳ ಹಬ್ಬ ದೀಪಾವಳಿ ಈಗ ಪಟಾಕಿ ಹಬ್ಬವಾಗಿ ಬದಲಾಗಿದೆ. ಮಹಾನಗರದ ಪ್ರತಿಯೊಂದು ಕುಟುಂಬಗಳು ಪಟಾಕಿಗೆ ಅಂತ ಒಂದಿಷ್ಟು ವ್ಯಯಿಸಿಯೇ ಇರುತ್ತವೆ. ಆದರೆ ಪಟಾಕಿಗಳನ್ನು ಎಲ್ಲೆಂದರೆ ಅಲ್ಲಿ ಮಾರುವಂತಿಲ್ಲ. ಅದಕ್ಕೆ ಬಿಬಿಎಂಪಿ ಮತ್ತು ಬೆಂಗಳೂರು ಮಹಾನಗರ ಪೊಲೀಸರು ಒಂದಿಷ್ಟು ನಿಯಮಾವಳಿಗಳನ್ನು ತಿಳಿಸಿವೆ.

ಹಾಗಾದರೆ ಮಹಾನಗರದಲ್ಲಿ ಎಲ್ಲೆಲ್ಲಿ ಪಟಾಕಿಗಳು ಲಭ್ಯವಿವೆ? ಎಂಬುದಕ್ಕೆ ಇಲ್ಲಿದೆ ಉತ್ತರ. ನಗರದ ವಿದ್ಯಾಪೀಠ ಸಮೀಪದ ಶಂಕರ್ ನಾಗ್ ವೃತ್ತದ ಕೆಳಗಿನ ಮೈದಾನ, ಯಡಿಯೂರು ಕೆರೆ ಸಮೀಪದ ಮೈದಾನ, ಚಂದ್ರಾಲೇಔಟ್, ಮಲ್ಲೇಶ್ವರಂ, ಪದ್ಮನಾಭ ನಗರ, ನಾಗರಬಾವಿ, ಉಮಾ ಥೀಯೇಟರ್ ಸಮೀಪದ ಮೈದಾನಗಳಲ್ಲಿ ಪಟಾಕಿಗಳು ಲಭ್ಯವಿವೆ.

cracrers

ಕಳೆದ ಸಾರಿಗೆ ಹೋಲಿಸರಿದರೆ ಈ ಬಾರಿ ಪಟಾಕಿ ವ್ಯಾಪಾರ ಇಳಿಕೆಯಾಗಿದೆ ಎಂಬುದು ವ್ಯಾಪಾರಿಗಳ ಮಾತು. ಕಳೆದ ಬಾರಿಗಿಂತ ದರ ಕಡಿಮೆಯಿದ್ದರೂ ಜನ ಪಟಾಕಿ ಅಂಗಡಿಗಳತ್ತ ತಲೆ ಹಾಕುತ್ತಿಲ್ಲ. ಅಲ್ಲದೇ ಡಿಸ್ಕೌಂಟ್ ಸೇಲ್ ಸಹ ಇದೆ ಎಂಬ ಜಾಹೀರಾತುಗಳಿಗೂ ಬೆಲೆ ನೀಡುತ್ತಿಲ್ಲ.[ರಾತ್ರಿ 10 ಗಂಟೆ ನಂತರ ಪಟಾಕಿ ಹೊಡಿಬೇಡಿ]

ರಕ್ಷಣಾ ಕ್ರಮಗಳಿವೆಯೇ?
ಪಟಾಕಿ ಅಂಗಡಿಗಳ ಬಳಿ ಧೂಮಪಾನ ಮಾಡುವಂತಿಲ್ಲ. ಬೆಂಕಿ ಉತ್ಪನ್ನ ಮಾಡುವ ಯಾವುದೇ ವಸ್ತುಗಳನ್ನು ಹತ್ತಿರ ತರುವಂತಿಲ್ಲ ಎಂದು ಬಿಬಿಎಂಪಿ ಸೂಚನೆ ನೀಡಿದೆ. ವಿದ್ಯಾಪೀಠದ ಬಳಿಯ ಮೈದಾನದಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದು ಕಂಡುಬಂತು. ಅಲ್ಲದೇ ಸೀಸ್ ಫೈರ್ ಗಳನ್ನು ಸಹ ಅಂಗಡಿಯವರು ಇಟ್ಟುಕೊಂಡಿದ್ದರು.


ಕೇವಲ ಪಟಾಕಿ ಮಾತ್ರವಲ್ಲದೇ ವಿವಿಧ ಗಿಫ್ಟ್ ಸಾಮಗ್ರಿಗಳು, ಹಣತೆ, ಅಲಂಕಾರಿಕ ವಸ್ತುಗಳು ಲಭ್ಯವಿವೆ.

ಪಟಾಕಿಯಿಂದ ದೂರ ಸರಿದ ಜನ
ಪರಿಸರ ಜಾಗೃತಿಯ ಪರಿಣಾಮವೂ ಒಂದರ್ಥದಲ್ಲಿ ಜನ ಪಟಾಕಿ ಸುಡುವುದರಿಂದ ದೂರ ಇರಲು ಕಾರಣವಾಗಿದೆ. ಹಿಂದೆ ಗಣೇಶ ಹಬ್ಬದ ಸಮಯದಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣಪನ್ನು ಪ್ರತಿಷ್ಠಾಪಿಸಿದ್ದ ಜನ ಈ ಬಾರಿ ಪಟಾಕಿ ಬೇಡ ಎನ್ನುತ್ತಿದ್ದಾರೆ. ಪ್ರತಿವರ್ಷದಷ್ಟೂ ಈ ಬಾರಿ ಖರೀದಿ ಮಾಡುತ್ತಿಲ್ಲ. ಮಕ್ಕಳ ಒತ್ತಾಯಕ್ಕೆ ಅಪಾಯಕಾರಿಯಲ್ಲದ ಪಟಾಕಿ ಖರೀದಿಸುತ್ತಿದ್ದೇವೆ. ಪಕ್ಕದ ಮನೆಯವರು ಪಟಾಕಿ ತಂದರು ಅಂಥ ನಾವು ತರುತ್ತಿದ್ದ ದಿನಗಳಿದ್ದವು ಆದರೆ ಈಗ ವಾತಾವರಣ ಬದಲಾಗುತ್ತಿದೆ ಎನ್ನುತ್ತಾರೆ ಹನುಮಂತನಗರದ ಗೃಹಿಣಿ ಸರೋಜಾ.

ಒಂದು ಕ್ಷಣದ ಪಟಾಕಿ ಸಂಭ್ರಮ ಅದೆಷ್ಟೋ ಮಕ್ಕಳ ಜೀವ, ಕಣ್ಣು, ಕಿವಿಗಳನ್ನು ಬಲಿ ತೆಗೆದುಕೊಂಡಿದೆ. ಸ್ವಯಂ ಸೇವಾ ಸಂಸ್ಥೆಗಳು, ಬಿಬಿಎಂಪಿ ಜಾಗೃತಿ ಮೂಡಿಸುವ ಕೆಲಸ ಮಾಡಿವೆ. ಆದರೆ ಜನರ ಪಟಾಕಿ ಕ್ರೇಜ್ ಒಮ್ಮೆಲೇ ಕಡಿಮೆಯಾಗುವಂಥದ್ದಲ್ಲ. ಈ ಉದ್ಯಮವನ್ನೇ ನಂಬಿಕೊಂಡು ಅನೇಕ ಕುಟುಂಬಗಳು ಜೀವಿಸುತ್ತಿವೆ. ಆದರೆ ಅವುಗಳಿಗೆ ಸರ್ಕಾರ ಪರ್ಯಾಯ ಮಾರ್ಗ ಕಲ್ಪಿಸಿದರೆ ಪಟಾಕಿ 'ಹುಚ್ಚಾಟ' ಇನ್ನಷ್ಟು ಕಡಿಮೆಯಾಗಬಹುದೆನೋ.


ಕಣ್ಣಿಗೆ ಸಮಸ್ಯೆಯಾದರೆ ಸಹಾಯವಾಣಿ

* ಮಿಂಟೊ ಕಣ್ಣಿನ ಆಸ್ಪತ್ರೆ: 26707176
*ನಾರಾಯಣ ನೇತ್ರಾಲಯ: 66121300
* ಸಂಕರ ನೇತ್ರಾಲಯ: 99169777250

cracres
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+