ರಾತ್ರಿ 10 ಗಂಟೆ ನಂತರ ಪಟಾಕಿ ಹೊಡಿಬೇಡಿ
ಬೆಂಗಳೂರು, ಅ.21 : ಬೆಳಕಿನ ಹಬ್ಬ ದೀಪಾವಳಿ ಆಚರಿಸಲು ಜನರು ಸಿದ್ಧತೆ ಆರಂಭಿಸಿದ್ದಾರೆ. ಆದರೆ, ದೀಪಾವಳಿ ಜನರ ಬಾಳಲ್ಲಿ ಕತ್ತಲೆ ತರಬಾರದು ಎಂದು ಪಟಾಕಿ ಸಿಡಿಸುವಾಗ ಅಗತ್ಯ ಮುಂಜಾಗ್ರತೆಯನ್ನು ಕೈಗೊಳ್ಳಬೇಕು ಎಂದು ಬೆಂಗಳೂರು ಪೊಲೀಸರು ಮನವಿ ಮಾಡಿದ್ದಾರೆ.
ರಾತ್ರಿ 10 ಗಂಟೆ ನಂತರ ಮತ್ತು ಬೆಳಗ್ಗೆ 6 ಗಂಟೆಯವೊಳಗೆ ಪಟಾಕಿ ಸಿಡಿಸದಂತೆ ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ. ಆಸ್ಪತ್ರೆ, ಚರ್ಚ್, ಮಸೀದಿಗಳ ಬಳಿ ಪಟಾಕಿ ಸಿಡಿಸಿ ಜನರಿಗೆ ತೊಂದರೆ ಉಂಟುಮಾಡಬಾರದು ಎಂದು ಸೂಚನೆ ನೀಡಿದ್ದಾರೆ. [ಸಮೃದ್ಧಿ ಸಂಪ್ರೀತಿ ಸಮಾನತೆಯ ದೀಪಾವಳಿ]

ಪೊಲೀಸರು ನೀಡಿರುವ ಸೂಚನೆಗಳು ಹೀಗಿವೆ
* ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಪಟಾಕಿ ಸಿಡಿಸಬಾರದು.
* ಪಟಾಕಿಗಳನ್ನು ಸಿಡಿಸಿ ಪರಿಸರ ಹಾನಿ ಮಾಡುವುದರ ಬದಲಲು ಹಣತೆಗಳನ್ನು ಹಚ್ಚಿ ಹಬ್ಬವನ್ನುಆಚರಿಸಿ
* ಬೆಳಕಿನ ಹಬ್ಬ ಜೀವನದ ಕತ್ತಲೆಗೆ ನಾಂದಿ ಹಾಡಬಾರದು ಆದ್ದರಿಂದ ಪಟಾಕಿ ಹೊಡೆಯುವಾಗ ಎಚ್ಚರ ವಹಿಸಿ
* ಮಕ್ಕಳಿಗೆ ತಂದೆ-ತಾಯಿಗಳು ಪಟಾಕಿ ಹಚ್ಚುವುದರಿಂದ ಉಂಟಾಗುವ ಮಾಲಿನ್ಯದ ಬಗ್ಗೆ ತಿಳುವಳಿಕೆ ನೀಡುವುದು
Deepavali is festival of joy n happiness. Plz take precautions while bursting crackers and plz stick to 10 pm deadline .
— Addl. CP. L&O BCP (@addlcpLnO) October 21, 2014 * ಪಟಾಕಿ ಸಿಡಿಸುವುದರಿಂದ ಆಗುವ ಹಾನಿಯ ಬಗ್ಗೆ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ
* ಆಸ್ಪತ್ರೆಗಳು, ದೇವಸ್ಥಾನಗಳು, ಚರ್ಚ್‍ಗಳು ಹಾಗೂ ಮಸೀದಿಗಳ ಬಳಿ ಪಟಾಕಿ ಸಿಡಿಸಬಾರದು
* ಅನ್ಯ ಕೋಮಿನ ಜನರು ವಾಸಿಸುವ ಸ್ಥಳಗಳಲ್ಲಿ ಉದ್ದೇಶಪೂರ್ವಕವಾಗಿ ಪಟಾಕಿ ಸಿಡಿಸಬಾರದು
* ಪಟಾಕಿಗೆ ನೀಡುವ ಹಣವನ್ನು ವೃದ್ದಾಶ್ರಮ ಅಥವಾ ಇತರೆ ಸಂಘಸಂಸ್ಥೆಗಳಿಗೆ ನೀಡಿ ಸಹಕರಿಸುವುದು.
* ಹಿರಿಯ ನಾಗರೀಕರರಿಗೆ ತೊಂದರೆ ಆಗುವಂತೆ ಪಟಾಕಿ ಸಿಡಿಸಬಾರದು
* ಸಾರ್ವಜನಿಕರು ಓಡಾಡುವ ಸ್ಧಳದಲ್ಲಿ, ಸಂಚಾರಕ್ಕೆ ಅಡಚಣೆ ಆಗುವಂತೆ ಪಟಾಕಿ ಸಿಡಿಸಬಾರದು
* ಜನದಟ್ಟಣೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಪಟಾಕಿ ಸಿಡಿಸಬಾರದು
* ಅನುಮಾನಾಸ್ಪದ ವ್ಯಕ್ತಿಗಳ ಚಲನವಲನಗಳ ಬಗ್ಗೆ, ವಸ್ತುಗಳ ಬಗ್ಗೆ ತಿಳಿದುಬಂದರೆ ಪೊಲೀಸರಿಗೆ ಮಾಹಿತಿ ನೀಡಿ












Click it and Unblock the Notifications