'ನಮ್ಮ ನಗರ, ನಮ್ಮದೇ ಜವಾಬ್ದಾರಿ' ಸ್ವಚ್ಛತೆಗೆ ಕರೆಕೊಟ್ಟ ಡಿಸಿಎಂ

ಬೆಂಗಳೂರು, ಜನವರಿ.30: ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಸಿಲಿಕಾನ್ ಸಿಟಿ ಜನರೆಲ್ಲ ಕೈ ಜೋಡಿಸಬೇಕೆಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ಕರೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಮ್ಮ ನಗರದ ಸ್ವಚ್ಛತೆ ನಮ್ಮದೇ ಜವಾಬ್ದಾರಿ ಎಂದಿದ್ದಾರೆ.

'ಸ್ವಚ್ಛ್ ಸರ್ವೇಕ್ಷಣಾ 2020' ರಲ್ಲಿ ಬೆಂಗಳೂರಿನ ಪ್ರಜೆಗಳೆಲ್ಲ ಭಾಗವಹಿಸಬೇಕು. ಆ ಮೂಲಕ ಸ್ವಚ್ಛತೆ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಟ್ವೀಟ್ ಮಾಡಿದ್ದಾರೆ.

ವಿಶ್ವದ ಅತ್ಯಂತ ದೊಡ್ಡದಾದ ಸ್ವಚ್ಛತಾ ಸಮೀಕ್ಷೆಯಲ್ಲಿ ರಾಜ್ಯದ ಎಲ್ಲ ಜನರು ತೊಡಗಿಸಿಕೊಳ್ಳಬೇಕು. ಅತಿದೊಡ್ಡ ಸಮೀಕ್ಷೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯವು ಆಗಬೇಕಿದೆ ಎಂದು ಟ್ವಿಟ್ಟರ್ ನ ಮೂಲಕ ಮನವಿ ಮಾಡಿಕೊಂಡಿದ್ದಾರೆ.

DCM Ashwatha Narayan Tweet About Swachh Survekshan 2020

ಸಮೀಕ್ಷೆಯ ಲಿಂಕ್ ಅಪ್ ಲೋಡ್:

ಇನ್ನು, ಸ್ವಚ್ಛ್ ಸರ್ವೇಕ್ಷಣಾ ಸಮೀಕ್ಷೆ 2020ಕ್ಕೆ ಸಂಬಂಧಿಸಿದಂತೆ ಅಧಿಕೃತ ವೆಬ್ ಸೈಟ್ ನ ಲಿಂಕ್ ನ್ನು ಕೂಡಾ ಡಿಸಿಎಂ ಅಶ್ವಥ್ ನಾರಾಯಣ್ ಶೇರ್ ಮಾಡಿದ್ದಾರೆ. ತಮ್ಮ ಟ್ವೀಟ್ ನಲ್ಲೇ ಈ ಬಗ್ಗೆ ಬರೆದುಕೊಂಡಿರುವ ಅವರು, ಸ್ವಚ್ಛತೆಗೆ ಆದ್ಯತೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+