ವಿಡಿಯೋ: ಹಗಲಿನಲ್ಲೇ ಗಲ್ಲಾ ಪೆಟ್ಟಿಗೆಯಿಂದ ಹೇಗೆ ಹಣ ಎಗರಿಸ್ತಾರೆ ನೋಡಿ!
Recommended Video

ಬೆಂಗಳೂರು, ಜನವರಿ 16 : ರಾಜ್ಯ ರಾಜಧಾನಿಯ ಮಳಿಗೆಯೊಂದರಲ್ಲಿ ಹಗಲು ಹೊತ್ತಿನಲ್ಲೇ ಹಣ ಲಪಟಾಯಿಸಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಭಿಕ್ಷುಕರಂತೆ ಮಹಿಳೆಯರ ಗುಂಪೊಂದು ಅಂಗಡಿಯೊಳಗೆ ಬರುತ್ತದೆ. ಅವ್ರನ್ನು ಅಲ್ಲಿಂದ ಹೊರಗೆ ಕಳುಹಿಸಲು ಕೆಲಸಗಾರ ಹುಡುಗರು ಪ್ರಯತ್ನಿಸುತ್ತಾರೆ.
ಈ ಮಧ್ಯೆ ಅಲ್ಲಿಂದ ಪುಟ್ಟ ಹುಡುಗಿಯೊಬ್ಬಳು ಬೇರೆ ಆಗುತ್ತಾಳೆ. ಆ ನಂತರ ಗಲ್ಲಾ ಪೆಟ್ಟಿಗೆ ಬಳಿ ಯಾರೂ ಇಲ್ಲದ್ದನ್ನು ಗಮನಿಸಿ ಹಣ ಎಗರಿಸಿ, ಮತ್ತೊಬ್ಬ ಮಹಿಳೆ ಜತೆಗೆ ಮೆಲ್ಲಗೆ ಜಾಗ ಖಾಲಿ ಮಾಡುತ್ತಾಳೆ. ಈ ಖತರ್ನಾಕ್ ಗುಂಪು ತಮ್ಮನ್ನು ತಾವೇ ಬುದ್ಧಿವಂತರೆಂದು ಭಾವಿಸಿದಂತಿದೆ. ಈ ಕೃತ್ಯವು ಮಳಿಗೆಯಲ್ಲಿರುವ ಸಿಸಿ ಟಿವಿ ಕ್ಯಾಮೆರಾದಲ್ಲಿ ನಿಚ್ಚಳವಾಗಿ ಸೆರೆಯಾಗಿದೆ.
ಮಳಿಗೆಯಲ್ಲಿ ಕೆಲಸ ನಿರ್ವಹಿಸುವ ಹುಡುಗರು ಸ್ವಲ್ಪ ಹೊತ್ತು ಬೇರೆಡೆ ಹೋಗಿ, ವಾಪಸ್ ಬರುವುದರೊಳಗಾಗಿ ಕೈ ಚಳಕ ತೋರಿಸಿದ್ದಾರೆ. ಅದರಲ್ಲೂ ಪುಟ್ಟ ಬಾಲಕಿಯೊಬ್ಬಳು ಗಲ್ಲಾ ಪೆಟ್ಟಿಗೆ ಬಳಿ ಬಂದು ಹಣ ಎಗರಿಸುವ ದೃಶ್ಯವನ್ನು ಗಮನಿಸಿದರೆ, ಈ ಗುಂಪು ಬೇರೆ ಎಲ್ಲೆಲ್ಲಿ ಇಂಥ ಕೆಲಸ ಮಾಡಿದೆಯೋ ಎಂಬ ಅನುಮಾನ ಮೂಡುತ್ತದೆ.

ವಾಪಸ್ ಬಂದ ಹುಡುಗ ಗಲ್ಲಾ ಪೆಟ್ಟಿಗೆ ತೆರೆದಿರುವುದನ್ನು ನೋಡಿ ಗಾಬರಿಯಾಅಗಿ, ಸಹೋದ್ಯೋಗಿಗಳನ್ನು ಪ್ರಶ್ನಿಸುತ್ತಾನೆ. ಆ ನಂತರ ಬೀಗ ಹಾಕಿರುವ ಮತ್ತೊಂದು ಕಡೆಯೂ ಗಮನಿಸುತ್ತಾನೆ. ಅಲ್ಲೆಲ್ಲೂ ಹಣ ಇಲ್ಲದಿರುವುದನ್ನು ಗಮನಿಸಿ, ಮಳಿಗೆಯಿಂದ ಆಚೆಗೆ ಗುಂಪನ್ನು ಹುಡುಕಿಕೊಂಡು ಹೊರಡುತ್ತಾನೆ. ಆದರೆ ಏನೂ ಪ್ರಯೋಜನ ಆಗುವುದಿಲ್ಲ.











Click it and Unblock the Notifications