Pavithra Gowda: ಅಮ್ಮಾ..... ಬಾ... ಮಾ.. ಮನೆಗೆ ಹೋಗೋಣ.... ಬಿಕ್ಕಿ ಬಿಕ್ಕಿ ಅತ್ತ ಪವಿತ್ರಾ ಗೌಡ ಮಗಳು
ಬೆಂಗಳೂರು ಜೂನ್ 21: ಕರುಳ ಬಳ್ಳಿ ಸಂಬಂಧ ಅಂದರೆ ಹಾಗೇ. ತನ್ನವರಿಗೆ ಏನಾದ್ರೂ ಆದರೆ ಅದು ಸಹಿಸುವುದೇ ಇಲ್ಲ. ಅದರಲ್ಲೂ ತಾಯಿ ಮಕ್ಕಳ ಸಂಬಂಧ ಎಲ್ಲಾ ಸಂಬಂಧಗಳಿಗಿಂತ ಮಿಗಿಲಾದದ್ದು. ಮಕ್ಕಳಿಗೆ ಏನಾದ್ರು ಆದರೆ ತಾಯಿ ಹೃದಯ ಹೇಗೆ ಚಡಿಪಡಿಸುತ್ತೋ ಹಾಗೇ ತಾಯಿಗೆ ಸಣ್ಣ ಬೇಸರವಾದರೂ ಮಕ್ಕಳ ಮನಸ್ಸು ತಳಮಳಗೊಳ್ಳುತ್ತೆ. ಜೈಲುಪಾಲಾಗುತ್ತಿರುವ ತಾಯಿಯನ್ನು ಕಂಡು ಮಗಳು ಬಿಕ್ಕಿ ಬಿಕ್ಕಿ ಅತ್ತ ಕರುಳು ಹಿಂಡುವ ದೃಶ್ಯ ಕಳೆದ ದಿನ ನ್ಯಾಯಾಲಯದ ಮುಂದೆ ನಡೆದಿದೆ.
ಹೌದು... ಕೊಲೆ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಜೈಲು ಪಾಲಾಗುತ್ತಿರುವ ದೃಶ್ಯವನ್ನು ಕಂಡು ಮಗಳ ಮನಸ್ಸು ನೊಂದು ಹೋಯಿತು. ಅಮ್ಮಾ..... ಬಾ... ಮಾ.. ಮನೆಗೆ ಹೋಗೋಣ... ಅಂತ ಪವಿತ್ರಾ ಗೌಡ ಮಗಳು ಬಿಕ್ಕಿ ಬಿಕ್ಕಿ ಅತ್ತ ದೃಶ್ಯ ಕಲ್ಲು ಮನಸ್ಸನ್ನೂ ಕರಗಿಸುವಂತಿತ್ತು.

ತನ್ನ ಅಜ್ಜಿಯೊಂದಿಗೆ ತಾಯಿ ಪವಿತ್ರಾ ಗೌಡ ಅವರನ್ನ ನೋಡಲು ಬಂದಿದ್ದ ಮಗಳು ಖುಷಿ, ತಾಯಿಯನ್ನು ಪೊಲೀಸ್ ವಾಹನದಲ್ಲಿ ಕೂರಿಸುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಅಮ್ಮಾ ಬಾ.. ಮಾ... ಅಂತ ಅಮ್ಮನನ್ನು ಕೈ ಚಾಚಿ ಕರೆದಿದ್ದಾಳೆ. ಈ ದೃಶ್ಯ ನಿಜಕ್ಕೂ ಅಲ್ಲಿದ್ದವರ ಕಣ್ಣಲ್ಲಿ ನೀರು ತರಿಸಿದೆ. ತಾಯಿ ಮಗಳ ನೋವನ್ನು ಕಂಡು ಸ್ಥಳದಲ್ಲಿವರ ಕಣ್ಣು ತುಂಬಿ ಬಂದಿವೆ. ತಾಯಿ ಮಕ್ಕಳು ದೂರವಾಗುವ ಸನ್ನಿವೇಶ ನಿಜಕ್ಕೂ ಯಾರಿಗೂ ಬೇಡ.
ಚಿತ್ರದುರ್ಗಾದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ನಟಿ ಪವಿತ್ರಾ ಗೌಡ ಅವರನ್ನು ಗುರುವಾರ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ವಾದ ವಿವಾದಗಳನ್ನು ಆಲಿಸಿದ ಕೋರ್ಟ್ ದರ್ಶನ್ ಸಹಿತ 4 ಮಂದಿಯನ್ನು ಮತ್ತೆ ಪೊಲೀಸ್ ಕಸ್ಟಡಿಗೆ ನೀಡಿದರೆ, ಪವಿತ್ರಾ ಗೌಡ ಸಹಿತ 9 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಇತ್ತ ವಿಚಾರಣೆ ಬಳಿಕ ತಾನು ತನ್ನ ತಾಯಿಯನ್ನು ನೋಡಬಹುದು ಎಂದು ಕಾದು ಕುಳಿತಿದ್ದ ಪವಿತ್ರಾ ಗೌಡ ಪುತ್ರಿ ಖುಷಿಗೆ ನಿರಾಸೆಯಾಗಿದೆ. ತನ್ನ ಅಜ್ಜಿಯೊಂದಿಗೆ ತಾಯಿ ಪವಿತ್ರಾ ಗೌಡಳನ್ನು ನೋಡಲು ಕೋರ್ಟ್್ಗೆ ಬಂದಿದ್ದ ಖುಷಿಗೆ ಅಮ್ಮನನ್ನು ಮಾತನಾಡಿಸಲು, ಅಪ್ಪಿಕೊಳ್ಳಲು ಪೊಲೀಸರು ಬಿಡಲಿಲ್ಲ.

ನ್ಯಾಯಾಲಾಯದಿಂದ ಹೊರಬರುತ್ತಿದ್ದಂತೆ ಅವರನ್ನು ಪೊಲೀಸ್ ವ್ಯಾನ್‌ನಲ್ಲಿ ಕೂರಿಸಲಾಗಿದೆ. ಈ ವೇಳೆ ಪವಿತ್ರಾ ಗೌಡ ಅವರ ತಾಯಿ ಹಾಗೂ ಮಗಳು ಕಣ್ಣೀರು ಹಾಕಿದ್ದಾರೆ. ಈ ಸಮಯದಲ್ಲಿ ಪವಿತ್ರಾ ಗೌಡಗೆ ಏನು ಮಾಡಬೇಕು ಅಂತ ತೋಚಲಿಲ್ಲ. ಕಣ್ಣು ತುಂಬಿ ಬಂತು. ದು:ಖವನ್ನು ಕಟ್ಟಿಹಾಕಿ ತಾಯಿ ಮಗಳಿಗೆ ಸಮಾಧಾನ ಮಾಡಿದ್ದಾರೆ.
ಮಗಳೊಂದಿಗೆ ಕಣ್ಣೀರು ಹಾಕುತ್ತಾ ಏನೂ ಆಗೋದಿಲ್ಲ... ಸುಮ್ಮನೇ ಇರು... ಎಂದು ಪವಿತ್ರಾ ಗೌಡ ಮಗಳನ್ನು ಸಮಾಧಾನ ಮಾಡಿದ್ದಾರೆ. ಅಮ್ಮನ ಬಳಿ ಮಾತನಾಡಲಾಗಲಿ, ಅಪ್ಪಿಕೊಳ್ಳಲಾಗಲಿ ಮಗಳಿಗೆ ಅವಕಾಶವೇ ಸಿಗಲಿಲ್ಲ. ಕೂಡಲೇ ವ್ಯಾನ್ ಹೊರಟು ಹೋಯಿತು. ಅಳುತ್ತಲೇ ತಲೆ ತಗ್ಗಿಸಿಕೊಂಡ ಪವಿತ್ರಾ ಮಗಳು ಹಾಗೂ ತಾಯಿಯನ್ನು ಬಿಟ್ಟು ಹೋಗಲಾಗದೇ ನೊಂದುಕೊಂಡರು.
ಪವಿತ್ರಾ ಗೌಡ ಅವರಿಗೇ ಈಗಾಗಲೇ ಮದುವೆಯಾಗಿದ್ದು ಅವರಿಗೆ ಒಬ್ಬ ಮಗಳಿದ್ದಾಳೆ. ಸಂಜಯ್ ಸಿಂಗ್ ಎಂಬುವವರೊಂದಿಗೆ ಪವಿತ್ರಾ ಗೌಡ ಅವರು ಮದುವೆಯಾಗಿದ್ದರು. ಈ ದಂಪತಿಗೆ ಖುಷಿ ಎಂಬ ಮುದ್ದಾದ ಮಗಳಿದ್ದಾಳೆ. ಆದರೆ ಇತ್ತೀಚೆಗೆ ಸಂಜಯ್ ಸಿಂಗ್ ಅವರೊಂದಿಗೆ ವಿಚ್ಚೇದಪಡಿದಿದ್ದ ಪವಿತ್ರಾ ಗೌಡ ಅವರಿಗೆ ನಟ ದರ್ಶನ್ ಅವರೊಂದಿಗೆ ಸ್ನೇಹ ಬೆಳದಿತ್ತು. ಈ ಸ್ನೇಹ ಪ್ರೀತಿಯಾಗಿ ರೂಪ ಪಡೆದುಕೊಂಡಿತ್ತು. ಈ ಕುರುಡು ಪ್ರೀತಿ ಸದ್ಯ ಒಂದು ಜೀವವನ್ನು ಬಲಿ ತೆಗೆದುಕೊಂಡಿದೆ. ಅದ್ಯಾರೋ ಮಾಡಿದ ತಪ್ಪಿಗೆ ಮಗಳು ತಾಯಿಯಿಂದ ದೂರವಾಗಬೇಕಾಗಿದೆ.












Click it and Unblock the Notifications