ಲಜ್ಜೆಗೆಟ್ಟ ಅಪ್ಪನ ಕಾಮದಾಹಕ್ಕೆ ಬಲಿಯಾದ ಮಗಳು

ಬೆಂಗಳೂರು, ನ. 20: ಬಾಲಕಿಯೋರ್ವಳು ತನ್ನ ತಂದೆಯಿಂದಲೇ ವರ್ಷಕ್ಕಿಂತ ಹೆಚ್ಚು ಕಾಲ ಲೈಂಗಿಕ ಕಿರುಕುಳ ಹಾಗೂ ದೈಹಿಕ ಹಿಂಸೆ ಅನುಭವಿಸಿದ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ತಂದೆ ತನ್ನ ಸಹೋದರನ ಪತ್ನಿ ಹಾಗೂ ಮನೆಗೆಲಸದ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿರುವುದನ್ನು ನೋಡಿದ್ದೇ ಮಗಳು ತಸ್ಲಿಂ (16, ಹೆಸರು ಬದಲಾಯಿಸಲಾಗಿದೆ) ಗೆ ಮುಳುವಾಯಿತು. ಇದಕ್ಕಾಗಿ ತಸ್ಲೀಂ ವರ್ಷಕ್ಕಿಂತ ಹೆಚ್ಚು ಕಾಲ ತಂದೆಯಿಂದಲೇ ಲೈಂಗಿಕವಾಗಿ ಹಾಗೂ ದೈಹಿಕವಾಗಿ ದೌರ್ಜನ್ಯ ಅನುಭವಿಸಿದಳು. ಅಸಹ್ಯಕರ ಬೈಯ್ಗುಳ ಸಹಿಸಿಕೊಂಡಿದ್ದಲ್ಲದೆ, ಆಸಿಡ್ ದಾಳಿಗೊಳಗಾಗುವ ಭೀತಿಯಲ್ಲಿ ಬದುಕಿದಳು. [ಅತ್ಯಾಚಾರ ಆರೋಪಿ ಮುಸ್ತಫಾ ಬಂಧನ]

ಬೆಂಗಳೂರಿನ ವಸಂತನಗರದ ನಿವಾಸಿ ಅಕ್ರಂ, ಆತನ ಸಹೋದರನ ಪತ್ನಿ ಶಫೀನಾ, ಮನೆಗೆಲಸದ ಮಹಿಳೆ ಅಲ್ಮಾ ಹಾಗೂ ಆಕೆಯ ಸಹೋದರ ಭಾಷಾ ಪ್ರಕರಣದ ಆರೋಪಿಗಳು (ಎಲ್ಲರ ಹೆಸರು ಬದಲಾಯಿಸಲಾಗಿದೆ).

rape

ಪ್ರಕರಣದ ವಿವರ: ಒಂದು ವರ್ಷದ ಹಿಂದೆ ತಸ್ಲೀಂ ಅಚಾನಕ್ಕಾಗಿ ಮನೆಗೆ ಬಂದಿದ್ದಳು. ಆಗ ತನ್ನ ತಂದೆ ಅಕ್ರಂ ಆತನ ಸಹೋದರನ ಪತ್ನಿ ಶಫೀನಾಳೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದನ್ನು ನೋಡುತ್ತಾಳೆ. ತಕ್ಷಣ ತಸ್ಲಿಂ ಅಲ್ಲಿಂದ ಓಡಿಹೋಗಲು ಯತ್ನಿಸಿದರೂ ತಂದೆ ಬಂದು ಹಿಡಿದುಕೊಳ್ಳುತ್ತಾನೆ. ಇಲ್ಲಿಂದ ಆಕೆಗೆ ನರಕಯಾತನೆ ಆರಂಭವಾಗುತ್ತದೆ.

ಈ ವಿಷಯವನ್ನು ತಸ್ಲಿಂ ತನ್ನ ತಾಯಿಗೆ ತಿಳಿಸಿದರೆ ಆಕೆ ಹಾಗೂ ತಾಯಿ ಇಬ್ಬರೂ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆಂದು ತಂದೆ ಅಕ್ರಂ ಎಚ್ಚರಿಕೆ ನೀಡುತ್ತಾನೆ. ಆಗ ಭಯದಿಂದ ತಸ್ಲಿಂ ಸುಮ್ಮನಾಗುತ್ತಾಳೆ. ಆಕೆಯ ಮೌನ ನೋಡಿದ ತಂದೆ ದೌರ್ಜನ್ಯವನ್ನು ನಿರಾತಂಕವಾಗಿ ಮುಂದುವರಿಸುತ್ತಾನೆ. [ಅಪಹರಣ, ಸಾಮೂಹಿಕ ಅತ್ಯಾಚಾರ]

ಅಕ್ರಂ ತಾನು ಶಫೀನಾಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದನ್ನು ನೋಡಬೇಕೆಂದು ಮಗಳ ಮೇಲೆ ಅನೇಕ ಬಾರಿ ಒತ್ತಡ ಹೇರಿದ್ದಾನೆ. ಈ ಸಂದರ್ಭದಲ್ಲಿ ಮಗಳಿಗೂ ಲೈಂಗಿಕ ಕಿರುಕುಳ ನೀಡಿದ್ದಾನೆ. ತಸ್ಲಿಂ ಸ್ನಾನ ಮಾಡುವಾಗ ಬಾಗಿಲು ತೆರೆದಿರಬೇಕೆಂದು ಸೂಚಿಸಿದ್ದಾನೆ. ಬಟ್ಟೆ ಬದಲಾಯಿಸುವಾಗ ಕೋಣೆಯೊಳಕ್ಕೆ ಬಂದಿದ್ದಾನೆ.

ಈ ರೀತಿ ಸುಮಾರು ಒಂದು ವರ್ಷ ಮುಂದುವರಿದಿದೆ. ವಿಷಯ ಹೊರಗೆ ಬಾಯಿಬಿಟ್ಟರೆ ಮುಖಕ್ಕೆ ಆಸಿಡ್ ಎರಚುವುದಾಗಿಯೂ ಅಕ್ರಂ ಬೆದರಿಸಿದ್ದ. [ಬೆಂಗಳೂರಿನಲ್ಲಿ ಸಾಮೂಹಿಕ ಅತ್ಯಾಚಾರ]

ಕೆಲಸದವಳೊಂದಿಗೂ ಸಂಬಂಧ: ಕೆಲವೇ ದಿನಗಳಲ್ಲಿ ತಸ್ಲಿಂಗೆ ತನ್ನ ತಂದೆಗೆ ಮನೆಗೆಲಸದ ಮಹಿಳೆ ಅಲ್ಮಾ ಜೊತೆಗೂ ಸಂಬಂಧ ಇದೆ ಎಂಬುದು ತಿಳಿಯಿತು. ಇದೇ ಸಂದರ್ಭ ಉಪಯೋಗಿಸಿಕೊಂಡ ಅಲ್ಮಾ ಸಹೋದರ ಭಾಷಾ ಕಣ್ಣು ತಸ್ಲಿಂ ಮೇಲೆ ಬೀಳುತ್ತದೆ. ಕ್ರುದ್ಧಗೊಂಡ ತಸ್ಲಿಂ ತಕ್ಷಣ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾಳೆ. ಆಗ ಸಂಪೂರ್ಣ ಪ್ರಕರಣ ಬಯಲಿಗೆ ಬಂದಿದೆ.

ಈ ಕುರಿತು ವಿವರಣೆ ನೀಡಿರುವ ಡಿಸಿಪಿ (ಕೇಂದ್ರೀಯ) ಸಂದೀಪ್ ಪಾಟೀಲ, ಗಂಡನ ಅನೈತಿಕ ಸಂಬಂಧಗಳನ್ನು ಸಹಿಸಲಾಗದೆ ಸಂತ್ರಸ್ತೆ ತಸ್ಲಿಂಳ ತಾಯಿ ಪತಿಯನ್ನು ಬಿಟ್ಟು ಹೋಗಿದ್ದಳು ಎಂದು ತಿಳಿಸಿದ್ದಾರೆ. [ಶಾಲೆಯಲ್ಲಿ ಮತ್ತೊಂದು ಅತ್ಯಾಚಾರ]

ಪೊಲೀಸರು ಬಾಲಕಿಯ ತಂದೆ ಅಕ್ರಂ, ಚಿಕ್ಕಮ್ಮ ಶಫೀನಾ, ಮನೆಗೆಲಸದ ಮಹಿಳೆ ಅಲ್ಮಾ ಹಾಗೂ ಆಕೆಯ ಸಹೋದರ ಭಾಷಾನನ್ನು ಬಂಧಿಸಿದ್ದು ವಿಚಾರಣೆ ಮುಂದುವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+