ಮೈತ್ರಿಯಾ ಬಗ್ಗೆ ಡಾಟಿ ಸದಾನಂದ ಗೌಡರು ಹೇಳಿದ್ದೇನು?
ಬೆಂಗಳೂರು, ಸೆ.5 : "ನನಗೆ ವೈಯಕ್ತಿಕವಾಗಿ ಮೈತ್ರಿಯಾ ಗೌಡ ಯಾರೆಂದು ಪರಿಚಯವಿಲ್ಲ. ಒಂದು ಬಾರಿ ನನಗೆ ತಾನು ಕಾರ್ತಿಕ್ ಗೌಡನ ಸ್ನೇಹಿತೆ ಎಂದು ಆಕೆ ಕರೆ ಮಾಡಿದ್ದಳು". ಎಂದು ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡರ ಪತ್ನಿ ಡಾಟಿ ಸದಾನಂದ ಗೌಡರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಕಾರ್ತಿಕ್ ಗೌಡ-ಮೈತ್ರಿಯಾ ಪ್ರಕರಣದ ತನಿಖೆ ನಡೆಸುತ್ತಿರುವ ಆರ್.ಟಿ.ನಗರ ಪೊಲೀಸರು ಗುರುವಾರ ರಾತ್ರಿ ಡಿ.ವಿ. ಸದಾನಂದ ಗೌಡರ ಪತ್ನಿ ಡಾಟಿ ಅವರನ್ನು ಸುಮಾರು ಒಂದೂವರೆ ತಾಸು ವಿಚಾರಣೆ ನಡೆಸಿದ್ದು, ಅವರ ಹೇಳಿಕೆಯನ್ನು ಪಡೆದಿದ್ದಾರೆ.

ಸಂಜಯನಗರದಲ್ಲಿರುವ ಸಚಿವರ ನಿವಾಸಕ್ಕೆ ಜೆ.ಸಿ.ನಗರ ಉಪ-ವಿಭಾಗದ ಎಸಿಪಿ ಓಂಕಾರಯ್ಯ ನೇತೃತ್ವದ ಪೊಲೀಸ್ ತಂಡ ತೆರಳಿ ವಿಚಾರಣೆ ನಡೆಸಿದಾಗ, ಪ್ರಕರಣದ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲ ಎಂದು ಡಾಟಿ ಅವರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. [ಯಾವುದೇ ಕ್ಷಣದಲ್ಲಿ ಕಾರ್ತಿಕ್ ಗೌಡ ಬಂಧನ]
"ನನಗೆ ವೈಯಕ್ತಿಕವಾಗಿ ಮೈತ್ರಿಯಾ ಗೌಡ ಯಾರೆಂಬುದು ಪರಿಚಯವಿಲ್ಲ. ಒಂದು ಬಾರಿ ನನಗೆ ತಾನು ಕಾರ್ತಿಕ್ ಗೌಡನ ಸ್ನೇಹಿತೆ ಎಂದು ಆಕೆ ಕರೆ ಮಾಡಿದ್ದಳು. ಇದರ ಹೊರತು ನನಗೆ ಯಾವುದೇ ವಿಷಯ ಗೊತ್ತಿಲ್ಲವೆಂದು" ಡಾಟಿ ಸದಾನಂದ ಗೌಡರು ಪೊಲೀಸರಿಗೆ ಹೇಳಿದ್ದಾರೆ. [ಸದಾನಂದ ಗೌಡರ ಪುತ್ರ ಕಾರ್ತಿಕ್ ಕೈ ಕೊಟ್ಟ]
"ಸದಾನಂದಗೌಡರ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿದೆ. ಇದರಲ್ಲಿ ಮೈತ್ರಿಯಾ ಗೌಡ ಪಾತ್ರಧಾರಿಯಾಗಿದ್ದಾಳೆ. ನಮ್ಮ ಕುಟುಂಬದ ಆಸ್ತಿ ಕಬಳಿಸಲು ವಿರೋಧಿಗಳಿಂದ ಹುನ್ನಾರ ಕೂಡ ನಡೆದಿರುವ ಬಗ್ಗೆ ಅನುಮಾನವಿದೆ" ಎಂದು ಅವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. [ಸದಾನಂದ ಗೌಡರ ಪುತ್ರನ ವಿರುದ್ಧ ದೂರು ನೀಡಿದ ನಟಿ]
ಪ್ರಕರಣ ಬೆಳಕಿಗೆ ಬಂದ ನಂತರ ನಾಪತ್ತೆಯಾದ ಕಾರ್ತಿಕ್ ಕುರಿತು ಡಾಟಿ ಅವರು ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ ಎಂದು ತಿಳಿದುಬಂದಿದೆ. ಕಾರ್ತಿಕ್ ಗೌಡ ವಿರುದ್ಧ ಈಗಾಗಲೇ ಬಂಧನ ವಾರೆಂಟ್ ಜಾರಿಯಾಗಿದ್ದು, ಯಾವುದೇ ಕ್ಷಣದಲ್ಲಿ ಪೊಲೀಸರು ಅವರನ್ನು ಬಂಧಿಸಬಹುದಾಗಿದೆ.
ವಿಚಾರಣೆ ಮೂಂದೂಡಿಕೆ : ಕೇಂದ್ರ ರೈಲ್ವೆ ಸಚಿವ ಸದಾನಂದ ಗೌಡರ ಪುತ್ರ ಕಾರ್ತಿಕ್ ಗೌಡ ಬಂಧನಕ್ಕೆ ಬೆಂಗಳೂರು ಪೊಲೀಸರು ನ್ಯಾಯಾಲಯದಿಂದ ವಾರಂಟ್ ಪಡೆದುಕೊಂಡಿದ್ದಾರೆ. ಬಂಧನ ಭೀತಿ ಎದುರಿಸುತ್ತಿರುವ ಕಾರ್ತಿಕ್ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು 8ನೇ ಎಸಿಎಂಎಂ ನ್ಯಾಯಾಲಯ ಶುಕ್ರವಾರಕ್ಕೆ ಮುಂದೂಡಿದೆ.












Click it and Unblock the Notifications