Darshan arrest: ಮೋರಿ ಸೇರುವ ಮುನ್ನ ರೇಣುಕಾಸ್ವಾಮಿ ಶವ, ಇಲ್ಲೇ ಈರಿಸಲಾಗಿತ್ತು?
ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಈ ಪ್ರಕರಣ ದಿನ ಕಳೆದಂತೆ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಆರಂಭದಲ್ಲಿ ನಟ ದರ್ಶನ್ ಹಾಗೂ ಪ್ರಕರಣಕ್ಕೆ ಏನು ಸಂಬಂಧನೇ ಇಲ್ಲ ಎಂದು ತೋರುತ್ತಿತ್ತು. ಆದರೆ ಈಗ ಎಲ್ಲ ಸಾಕ್ಷಿಗಳು ಸಹ ದರ್ಶನ್ ವಿರುದ್ಧ ಸಮರ ಸಾರಿದಂತೆ ಕಾಣುತ್ತಿದೆ.
ಈ ಪ್ರಕರಣದ ಜಾಡನ್ನು ಹಿಡಿದು ಹೊರಟ ಪೊಲೀಸರಿಗೆ ಹತ್ತು ಹಲವು ದಾಖಲೆಗಳು ಸಿಕ್ಕಿವೆ. ಈ ದಾಖಲೆಗಳು ದರ್ಶನ್ ಪ್ರಕರಣದ ವೇಳೆ ಹಾಜರಿರುವ ಬಗ್ಗೆ ಸಾಕ್ಷಿಯನ್ನು ಹೇಳುತ್ತಿವೆ. ಈಗ ಪೊಲೀಸರ ಕೈಗೆ ಮತ್ತೊಂದು ಬಲವಾದ ಸಾಕ್ಷಿ ಸಿಕ್ಕಿದೆ ಎಂದು ತಿಳಿದು ಬಂದಿದೆ. ಈ ಪ್ರಕರಣದ ಸ್ಥಳ ಮಹಜರನ್ನು ಸಹ ಪೊಲೀಸರು ಮಾಡಿದ್ದಾರೆ. ಅಲ್ಲದೆ ಸಂಬಂಧ ಪಟ್ಟವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಗಳು ಬಹಿರಂಗವಾಗುತ್ತಿವೆ.

ಸಿಕ್ಕ ಮಾಹಿತಿ ಏನು?
ಚಿತ್ರದುರ್ಗದ ರೇಣುಕಾಸ್ವಾಮಿ, ದರ್ಶನ್ ಪ್ರೇಯಸಿ ಪವಿತ್ರಾ ಗೌಡರಿಗೆ ಅಶ್ಲೀಲ ಮೆಸೇಜ್ ಕಳಿಸಿದ್ದಾರೆಂದು, ದರ್ಶನ್ ಅವರ ಅಭಿಮಾನಿಗಳ ಮೂಲಕ ರೇಣುಕಾಸ್ವಾಮಿರನ್ನು ಬೆಂಗಳೂರಿಗೆ ಕರೆಸಿಕೊಂಡು, ಪಟ್ಟಣಗೆರೆ ಶೆಡ್ಡನಲ್ಲಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಇದೆ. ಅಲ್ಲದೆ ಘಟನೆ ನಡೆದ ಬಳಿಕ ಶವವನ್ನು ಪಟ್ಟಣಗೆರೆ ಶೆಡ್ಡನಿಂದ ಸಮನಹಳ್ಳಿಯ ಮೋರಿಗೆ ಎಸೆದಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಆದರೆ, ಮೋರಿಗೆ ಎಸೆಯುವ ಮುನ್ನ ಈ ಶವವನ್ನು ಎಲ್ಲಿ ಇಟ್ಟಿದ್ದರು ಎಂಬ ಬಗ್ಗೆ ಈ ಮಾಹಿಸಿ ಸಿಕ್ಕಿದೆ.
ಶವವನ್ನು ಎಲ್ಲಿ ಇಟ್ಟಿದ್ದರು?
ನ್ಯೂಸ್ ಫಸ್ಟ್ಗೆ ವರದಿಯ ಪ್ರಕಾರ, ಪಟ್ಟಣಗೆರೆ ಶೆಡ್ ನಲ್ಲಿ ರೇಣುಕಾಸ್ವಾಮಿ ಕೊಲೆ ಮಾಡಲಾಗಿದೆ. ಹತ್ಯೆಯಾದ ಬಳಿಕ ರೇಣುಕಾಸ್ವಾಮಿ ಶವವನ್ನು ಅಲ್ಲಿಯೇ ಇದ್ದ ಸೆಕ್ಯುರಿಟಿ ರೂಂನಲ್ಲಿ ಹಾಕಲಾಗಿತ್ತು. ಇದೇ ರೂಮ್‌ನಲ್ಲಿ ಶೆಡ್ ಕಾಯುತ್ತಿದ್ದ ಸೆಕ್ಯುರಿಟಿ ಗಾರ್ಡ್ ಇದಾಗಿತ್ತು. ಇದೇ ರೂಮ್‌ನಲ್ಲೇ ಮೊದಲು ಶವವನ್ನು ಹಾಕಲಾಗಿತ್ತು.

ಈ ಶವವನ್ನು ಎಲ್ಲಿಗೆ ಸಾಗಿಸಬೇಕು ಎಂಬ ಬಗ್ಗೆ ಫೈನಲ್ ಆಗುವವರೆಗೂ, ಈ ಶವವನ್ನು ಸೆಕ್ಯುರಿಟಿ ಗಾರ್ಡ್ ರೂಮ್‌ನಲ್ಲಿ ಇಡಲಾಗಿತ್ತು. ಪೊಲೀಸರು ತನಿಖೆ ನಡೆಸುವಾಗ ಸೆಕ್ಯುರಿಟಿ ರೂಂ ಸಹ ಪರಿಶೀಲನೆ ನಡೆಸಿದ್ದಾರೆ. ಆಗ ಅಲ್ಲಿ ರಕ್ತದ ಕಲೆಗಳು ಪತ್ತೆಯಾಗಿದ್ದಾಗಿ ವರದಿ ಮಾಡಿದೆ. ಈ ಸ್ಥಳವನ್ನು ಸಹ ಪೊಲೀಸರು ಮಹಜರು ಮಾಡಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶೆಡ್ಡ ಸೆಕ್ಯುರಿಟಿರನ್ನು ಸಹ ಪೊಲೀಸರು ವಿಚಾರಣೆ ನಡೆಸಿ, ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.












Click it and Unblock the Notifications