ಮಹಾಮೈತ್ರಿ ವಿರುದ್ಧ ದಂಗೆ ಹೇಳಿಕೆ ಅಸ್ತ್ರ ಬಳಕೆಗೆ ಬಿಜೆಪಿ ಚಿಂತನೆ?
ಬೆಂಗಳೂರು, ಸೆ.22: ಕರ್ನಾಟಕದಲ್ಲಿ ಬಿಜೆಪಿ ವಿರುದ್ಧ ದಂಗೆಗೆ ಕರೆ ನೀಡುವ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಕಾಂಗ್ರೆಸ್ ಬೆಂಬಲ ನೀಡಿದೆ, ದಂಗೆಗೆ ಕರೆ ಕೊಡುವ ಪಕ್ಷ ಮಹಾಘಟಬಂಧನ್ ಭಾಗವಾಗಿದೆ ಎಂದು ಬಿಂಬಿಸಲು ಬಿಜೆಪಿ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಶೀಘ್ರದಲ್ಲಿ ನಡೆಯಲಿರುವ ಮೂರ್ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಮಹಾಘಟಬಂಧನ್ ವಿರುದ್ಧ ಬಲವಾಗಿ ದಂಗೆ ಹೇಳಿಕೆ ಬಳಸಲು ಬಿಜೆಪಿ ಚಿಂತನೆ ನಡೆಸಿದೆ ಎನ್ನಲಾಗಿದೆ. ತೆಲಂಗಾಣ ಸೇರಿ ಚುನಾವಣೆ ನಡೆಯುವ ರಾಜ್ಯಗಳಲ್ಲಿ ದಂಗೆ ಅಸ್ತ್ರವನ್ನು ಬಳಕೆ ಮಾಡಲು ಬಿಜೆಪಿ ಚಿಂತನೆ ನಡೆಸಿದೆ., ಲೋಕಸಭೆ ಚುನಾವಣೆಗೂ ಸಿಎಂ ಹೇಳಿಕೆಯ ಲಾಭ ಪಡೆಯುವ ಬಗ್ಗೆ ಬಿಜೆಪಿ ಆಲೋಚಿಸಿದೆ.
ಕುಮಾರಸ್ವಾಮಿ ದಂಗೆ ಹೇಳಿಕೆ ಕುರಿತು ಬಿಜೆಪಿ ಪ್ರತಿಭಟನೆ ಮತ್ತು ರಾಜ್ಯಪಾಲರಿಗೆ ದೂರು ನೀಡಿರುವ ವಿಚಾರದ ಕುರಿತು ರಾಜ್ಯ ಬಿಜೆಪಿಯು ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಗೆ ವರದಿ ಸಲ್ಲಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ನಿವಾಸದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್, ಮಾಜಿ ಶಾಸಕ ಬಿ.ವೈ ರಾಘವೇಂದ್ರ ಮತ್ತಿತರು ಸಮಾಲೋಚನೆ ನಡೆಸಿದ್ದಾರೆ.












Click it and Unblock the Notifications