ಕಬ್ಬನ್‌ ಪಾರ್ಕ್‌ನಲ್ಲಿ ಯುವತಿ ಆತ್ಮಹತ್ಯೆ: ಪ್ರಿಯಕರನ ಬಂಧನ

ಬೆಂಗಳೂರು, ಆಗಸ್ಟ್ 20: ಪ್ರಿಯಕರ ಕೈಕೊಟ್ಟನೆಂದು ಯುವತಿ ಕಬ್ಬನ್‌ ಪಾರ್ಕ್‌ನಲ್ಲೇ ನೇಣಿಗೆ ಶರಣಾದ ಘಟನೆಗೆ ಸಂಬಂಧಿಸಿದಂತೆ ಯುವತಿ ತಂದೆ ನೀಡಿದ ದೂರಿನ ಮೇರೆಗೆ ಪ್ರಿಯಕರ ನರೇಶ್‌ನನ್ನು ಬಂಧಿಸಲಾಗಿದೆ.

ಡಿಸೋಜಾ ಲೇಔಟ್‌ ನಿವಾಸಿ ನೇಪಾಳ ಮೂಲದ ಸಂತೋಷಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಸಂತೋಷಿ ತಂದೆ ನಗರದ ಖಾಸಗಿ ಸಂಸ್ಥೆಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಯುವತಿ ಯುಬಿ ಸಿಟಿಯ ಸ್ಪಾ ಒಂದರಲ್ಲಿ ಕೆಲಸ ಮಾಡುತ್ತಿದ್ದಳು, ತನ್ನ ಜತೆಗೆ ಕೆಲಸ ಮಾಡುತ್ತಿದ್ದ ನರೇಶ್‌ ಎಂಬುವವನನ್ನು ಪ್ರೀತಿಸುತ್ತಿದ್ದಳು, ಅವರ ಪ್ರೀತಿ ವಿಚಾರ ಎರಡೂ ಕುಟುಂಬದವರಿಗೂ ತಿಳಿದಿತ್ತು. ನಂತರದಲ್ಲಿ ಆತ ಮದುವೆಗೆ ನಿರಾಕರಿಸಿದ್ದ.

Cubbon park suicide case: Youth arrest

ಆಕೆ ಶನಿವಾರ ರಾತ್ರಿ ಕಬ್ಬನ್‌ ಪಾರ್ಕ್‌ನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ,,ಬೆಳಗ್ಗೆ ಭದ್ರತಾ ಸಿಬ್ಬಂದಿ ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಸಂತೋಷಿ ಶನಿವಾರ ನರೇಶನ ಮನೆಗೆ ತೆರಳಿ ವಿಷಯ ತಿಳಿಸಿದ್ದಳು, ಆದರೆ ಇದಕ್ಕೆ ನರೇಶನ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಘಟನೆ ಸ್ಥಳದಲ್ಲಿ ಟೆತ್‌ ನೋಟ್‌ ಏನೂ ಪತ್ತಯಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+