ಕೈಗೆಟುಕುವ ಬೆಲೆಗೆ ಆಲ್ಕೋಹಾಲ್-ರಹಿತ ಶುದ್ಧಿ ಸ್ಯಾನಿಟೈಜರ್ ಮಾರುಕಟ್ಟೆಗೆ

ಬೆಂಗಳೂರು, ಏಪ್ರಿಲ್ 2: ಕೊರೊನಾ ವೈರಾಣು-19 ( ಕೋವಿಡ್-19 ) ಒಳಗೊಂಡಂತೆ ಯಾವುದೇ ಸೋಂಕು ತಗುಲದಂತೆ ಅನುಕೂಲವಾಗುವ ಆಲ್ಕೋಹಾಲ್-ರಹಿತ ಸ್ಯಾನಿಟೈಸರ್ ಇದೀಗ ಮಾರುಕಟ್ಟೆಗೆ ಬಂದಿದೆ.

ಶುಚಿತ್ವ ಕಾಪಾಡಿಕೊಳ್ಳಲು ಆಲ್ಕೋಹಾಲ್ ಆಧಾರಿತ ಸ್ಯಾನಿಟೈಜರ್‍ಗಳು ಮಾತ್ರವಲ್ಲ, ಆಲ್ಕೋಹಾಲ್ ಅಂಶ ರಹಿತವಾಗಿರುವ ಜೈವಿಕ ಸ್ಯಾನಿಟೈಜರ್ ಕೂಡಾ ಮಾರುಕಟ್ಟೆ ಪ್ರವೇಶಿಸಿದೆ.

ಬೆಂಗಳೂರಿನ ಮಲ್ಟಿಪ್ಲೆಕ್ಸ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ತಯಾರಿಸಿರುವ ಮಲ್ಟಿಪ್ಲೆಕ್ಸ್ ಶುದ್ಧಿ ಹ್ಯಾಂಡ್ ಸ್ಯಾನಿಟೈಜರ್ ಹೆಸರಿನ ಈ ಜೈವಿಕ ಸ್ಯಾನಿಟೈಜರ್ ಬಳಸಿದಾಗ, ಅಲ್ಕೋಹಾಲ್ ಅಂಶವನ್ನು ಒಳಗೊಂಡ ಇತರೆ ಎಲ್ಲಾ ಪಾರಂಪರಿಕ ಸ್ಯಾನಿಟೈಜರ್ ಗಳಿಗಿಂತಲೂ ಸುದೀರ್ಘ ಕಾಲ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ. ಅಲ್ಲದೆ, ಆಲ್ಕೋಹಾಲ್ ಅಂಶವನ್ನು ಒಳಗೊಂಡ ಸ್ಯಾನಿಟೈಸರ್ ಗಳಿಗಿಂತಲೂ ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ. ಮಲ್ಟಿಪ್ಲೆಕ್ಸ್ ಶುದ್ಧಿ ಹ್ಯಾಂಡ್ ಸ್ಯಾನಿಟೈಜರ್ ನ 100 ಎಂ ಎಲ್ ಬಾಟಲಿಯ ಬೆಲೆ ಕೇವಲ ಐವತ್ತು ರೂಪಾಯಿಗಳು ಮಾತ್ರ ಎಂಬುದು ಗಮನಾರ್ಹ.

Covid19: Multiplex Bio Tech organic hand sanitizer

ಕೊರೊನಾ ವೈರಾಣು ವ್ಯಾಪಿಸುತ್ತಿರುವ ಹಾಗೂ ಸಾಮಾಜಿಕ ಸ್ವಾಸ್ಥ್ಯದ ಈ ತುರ್ತು ಪರಿಸ್ಥಿತಿಯಲ್ಲಿ ರ್ಸಾಜನಿಕರಿಗೆ, ಅದರಲ್ಲೂ, ಬಡಜನರು ಹಾಗೂ ಮಧ್ಯಮ ವರ್ಗದವರಿಗೆ, ಕೈಗೆಟುಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಜೈವಿಕ ಸ್ಯಾನಿಟೈಜರ್ ( ಬಯೋ ಆಗ್ರ್ಯಾನಿಕ್ ) ಪೂರೈಸಬೇಕೆಂಬ ಸದಾಶಯದೊಂದಿಗೆ ಮಲ್ಟಿಪ್ಲೆಕ್ಸ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ತನ್ನ ಈ ಹೊಸ ಆವಿಷ್ಕಾರದಿಂದ ಜೈವಿಕ ತಂತ್ರಜ್ಞಾನದ ಸಾಧ್ಯತೆಗಳನ್ನು ಸಾಧಿಸಿದೆ.

Covid19: Multiplex Bio Tech organic hand sanitizer

ಕೊರೊನಾವೈರಸ್ ವಿರುದ್ಧ ಹೋರಾಡಲು ಕರ್ನಾಟಕ ಸರ್ಕಾರಕ್ಕೆ ನೆರವಾಗುವ ನಿಟ್ಟಿನಿಂದ ಮಲ್ಟಿಪೆಕ್ಸ್ ಬಯೋಟೆಕ್ ಸಂಸ್ಥೆಯ ಮಹೇಶ್ ಶೆಟ್ಟಿ ಅವರು ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪರನ್ನು ಭೇಟಿಯಾಗಿ ಸಿಎಂ ಪರಿಹಾರ ನಿಧಿಗೆ 10 ಲಕ್ಷ ರು ದೇಣಿಗೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+