ಮೇ 30 ರ ಬಳಿಕ ಹೋಟೆಲ್ ಡೈನಿಂಗ್‌ಗೆ ಅವಕಾಶ?

ಬೆಂಗಳೂರು, ಮೇ 26: ''ಹೋಟೆಲ್ ಡೈನಿಂಗ್ ತೆಗೆಯಲು ಅವಕಾಶ ಮಾಡಿಕೊಡುವಂತೆ ಹೋಟೆಲ್ ಮಾಲೀಕರು ಮನವಿ ಮಾಡಿದ್ದಾರೆ. ಮುಖ್ಯಮಂತ್ರಿಗಳ ಅವರು ಈ ತಿಂಗಳ 30 ರ ಬಳಿಕ ಹೋಟೆಲ್ ಡೈನಿಂಗ್ ತೆರೆಯಲು ಅವಕಾಶ ಕೊಡುವ ಸಾಧ್ಯತೆ ಇದೆ'' ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಹೇಳಿದ್ದಾರೆ.

Recommended Video

      ಲಾಕ್‌ಡೌನ್ ನಂತರ ಹಾರಿದ ಮೊದಲ ವಿಮಾನದಲ್ಲಿನ ಕನ್ನಡದ ಗಗನಸಖಿ| Kannadati Air Hostess Explain Current situation

      ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಕೊರೊನಾ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಈ ತಿಂಗಳ 30 ರ ಬಳಿಕ ಸಿಎಂ ಹೋಟೆಲ್ ಡೈನಿಂಗ್ ಗೆ ಅವಕಾಶ ಮಾಡಿಕೊಡ್ತಾರೆ ಎನ್ನುವ ವಿಶ್ವಾಸವಿದೆ'' ಎಂದು ಹೇಳಿದರು.

      ''ರಾಜ್ಯದಲ್ಲಿ ಬೇರೆ ರಾಜ್ಯಗಳಿಂದ ಬಂದವರಿಂದಲೇ ಕೊರೊನಾವೈರಸ್ ಜಾಸ್ತಿ ಆಗಿದೆ. ಮಹಾರಾಷ್ಟ್ರದಿಂದ ಬಂದವರಿಂದಲೇ ಅತಿ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ಮಹಾರಾಷ್ಟ್ರ ಸರ್ಕಾರ ಅವರನ್ನ ಚೆಕ್ ಮಾಡಿಸದೇ ಕಳಿಸಿದೆ. ರಾಜ್ಯದ ಗಡಿಗಳಲ್ಲಿ ಅಕ್ರಮವಾಗಿ ಬರುತ್ತಿದ್ದಾರೆ'' ಎಂದು ವಿಶ್ವನಾಥ್ ಆರೋಪಿಸಿದರು.

      Covid19: Hotel Dining Will Open Shortly Says S R Vishawanath

      ''ಹೊರ ರಾಜ್ಯದಿಂದ ಬರುವವರು ರಾಜ್ಯಕ್ಕೆ ಬರಲಿ. ಆದರೆ, ಕೊರೊನಾ ತಡೆ ನಿಯಮ ಪಾಲಿಸಲಿ. ಅಕ್ರಮವಾಗಿ ಬಂದವರನ್ನ ಪೊಲೀಸರು ಬಂಧಿಸಬೇಕು'' ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಸ್ ಆರ್ ವಿಶ್ವನಾಥ ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+