ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ: ಥರ್ಮಲ್ ಸ್ಕ್ಯಾನಿಂಗ್, ಪೇಸ್ ಶೀಲ್ಡ್‌ಗಳ ಹಸ್ತಾಂತರ

|
Google Oneindia Kannada News

ಬೆಂಗಳೂರು, ಏಪ್ರಿಲ್ 29: ಕೊವಿಡ್-19 ಹಿನ್ನೆಲೆಯಲ್ಲಿ ಬಿಬಿಎಂಪಿ ಕೇಂದ್ರ ಕಛೇರಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಆರೋಗ್ಯ ತಪಾಸಣೆ ಮಾಡುವ ಉದ್ದೇಶದಿಂದ, ಎಸ್.ವಿ.ಪಿ (social venture partners) ಹಾಗೂ ಬಿ ಪ್ಯಾಕ್ ವತಿಯಿಂದ ಉಚಿತವಾಗಿ 40 ಥರ್ಮಲ್ ಸ್ಕ್ಯಾನಿಂಗ್ ಯಂತ್ರಗಳು ಹಾಗೂ 50 ಪೇಸ್ ಶೀಲ್ಡ್ ಗಳನ್ನು ಬಿಬಿಎಂಪಿ ಆರೋಗ್ಯ ವಿಭಾಗಕ್ಕೆ ಇಂದು ಹಸ್ತಾಂತರಿಸಲಾಯಿತು.

ಕೋವಿಡ್-19 ಹಿನ್ನೆಲೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾಲಿಕೆಯು ಈಗಾಗಲೇ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪಾಲಿಕೆಯ ಜೊತೆಗೆ ಹಲವಾರು ಸಂಘಸಂಸ್ಥೆಗಳು ಕೈಜೋಡಿಸಿ ಸಹಕಾರ ನೀಡುತ್ತಿವೆ. ಅದರಂತೆ ಇಂದು ಎಸ್.ವಿ.ಪಿ ಮತ್ತು ಬಿ ಪ್ಯಾಕ್ ವತಿಯಿಂದ ಉಚಿತವಾಗಿ 40 ಥರ್ಮಲ್ ಸ್ಯಾನಿಂಗ್ ಯಂತ್ರಗಳು ಹಾಗೂ 50 ಪೇಸ್ ಶೀಲ್ಡ್ ಗಳನ್ನು ನೀಡಿವೆ ಎಂದು ಮಹಾಪೌರ ಎಂ ಗೌತಮ್ ಕುಮಾರ್ ತಿಳಿಸಿದರು.

ಎಸ್.ವಿ.ಪಿ ವತಿಯಿಂದ ಈಗಾಗಲೇ ನಗರದಲ್ಲಿ ಪಾಲಿಕೆ ಫೀವರ್ ಕ್ಲೀನಿಕ್, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ 10 ಸಾವಿರ ಪೇಸ್ ಶೀಲ್ಡ್, ಪೋಲೀಸ್ ಸಿಬ್ಬಂದಿಗೆ 20 ಸಾವಿರ ಪುನರ್ ಬಳಕೆ ಮುಖಗವಸುಗಳು ಹಾಗೂ 600 ಪಿಪಿಇ‌ ಕಿಟ್ ಗಳನ್ನು ನೀಡಲಾಗಿದೆ. ಅಲ್ಲದೆ 65 ಥರ್ಮಲ್ ಸ್ಕ್ಯಾನಿಂಗ್ ಗಳಲ್ಲಿ ಈಗಾಗಲೇ 35 ಥರ್ಮಲ್ ಸ್ಕ್ಯಾನಿಂಗ್ ಗಳನ್ನು ಆಸ್ಪತ್ರೆಗಳಿಗೆ ನೀಡಲಾಗಿದೆ ಎಂದರು.

Thermal Screening And Face Shields Donated By SVP And BPack

ಈ ವೇಳೆ ಉಪಮಹಾಪೌರ ರಾಮಮೋಹನ ರಾಜು, ಮುಖ್ಯ ಆರೋಗ್ಯಾಧಿಕಾರಿ(ಕ್ಲಿನಿಕಲ್) ಡಾ. ನಿರ್ಮಲಾ ಬುಗ್ಗಿ, ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತರು ಸರ್ಫರಾಜ್ ಖಾನ್, ಬಿ ಪ್ಯಾಕ್ ಸಿ.ಇ.ಒ, ರೇವತಿ ಅಶೋಕ್, ಎಸ್.ವಿ.ಪಿಯ ಮ್ಯಾನೇಜ್ಮೆಂಟ್ ಕಮಿಟಿ ಪದ್ಮಶ್ರೀ ಬಲರಾಮ್ ಹಾಗೂ ಇತರರು ಉಪಸ್ಥಿತರಿದ್ದರು.

English summary
Thermal Screening And Face Shields Donated By SVP And BPack. BBMP Mayor Gouthm Kumar Received It.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X