ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಭೀತಿ: ಸಿಲಿಕಾನ್ ಸಿಟಿಯಲ್ಲಿ ದುಬಾರಿ ಆಯ್ತು ಮಾಸ್ಕ್ ಬೆಲೆ

|
Google Oneindia Kannada News

ಬೆಂಗಳೂರು, ಮಾರ್ಚ್ 3: ಕರ್ನಾಟಕದಲ್ಲಿ ಕೊರೊನಾ ಭೀತಿ ಹೆಚ್ಚಾಗುತ್ತಿದ್ದಂತೆ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಣೆಯಾಗಿದೆ. ತೆಲಂಗಾಣ ಮೂಲದ ವ್ಯಕ್ತಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಸಿಲಿಕಾನ್ ಸಿಟಿಯಲ್ಲಿ ಆತಂಕ ಹೆಚ್ಚಿದೆ.

ಮತ್ತೊಂದೆಡೆ ಕೊರೊನಾ ವೈರಸ್ ಸೋಂಕಿನಿಂದ ತಪ್ಪಿಸಿಕೊಳ್ಳಲು ಮಾಸ್ಕ್ ಧರಿಸುವುದು ಉತ್ತಮ ಎಂದು ತಿಳಿಯುತ್ತಿದ್ದಂತೆ ಮಾರುಕಟ್ಟೆಯಲ್ಲಿ ಮಾಸ್ಕ್ ಗೆ ಬೇಡಿಕೆ ಹೆಚ್ಚಿದೆ.

ಕೊರೊನಾ ಪೀಡಿತ ಬೆಂಗಳೂರಿನ ಯಾವ ಕಂಪನಿಯಲ್ಲಿದ್ದ.? ಹೇಳಿ ಪ್ಲೀಸ್ಕೊರೊನಾ ಪೀಡಿತ ಬೆಂಗಳೂರಿನ ಯಾವ ಕಂಪನಿಯಲ್ಲಿದ್ದ.? ಹೇಳಿ ಪ್ಲೀಸ್

ಇದನ್ನೇ ಬಂಡವಾಳವಾಗಿಸಿಕೊಂಡಿರುವ ವ್ಯಾಪಾರಿಗಳು ಮಾಸ್ಕ್ ಬೆಲೆಯನ್ನು ಹೆಚ್ಚಿಸಿದ್ದಾರೆ. ಬೆಂಗಳೂರಿನಲ್ಲಿರುವ ಬಹುತೇಕ ಮೆಡಿಕಲ್ ಶಾಪ್ ಗಳಲ್ಲಿ ಮಾಸ್ಕ್ ಲಭ್ಯವಿಲ್ಲ. ಹಾಗಾಗಿ, ಲಭ್ಯವಿರುವ ಶಾಪ್ ಗಳಲ್ಲಿ ಮಾಸ್ಕ್ ಬೆಲೆ ನಿಗದಿತ ಬೆಲೆಗಿಂತ ದುಪ್ಪಟು ಮಾಡಿದ್ದಾರೆ.

Coronavirus Mask Price Rise In Medical Shop

ಸಾಮಾನ್ಯವಾಗಿ 3 ರೂಪಾಯಿ ಇದ್ದ ಮಾಸ್ಕ್ 10 ರೂಪಾಯಿ ಮಾಡಲಾಗಿದೆ. ಅದೇ ರೀತಿ 10 ರೂಪಾಯಿ ಇದ್ದ ಮಾಸ್ಕ್ 38 ರೂಪಾಯಿವರೆಗೂ ಆಗಿದೆ. ಇಷ್ಟು ದಿನ ಯಾರೂ ಬಳಸದ ಕಾರಣ ಸ್ಟಾಕ್ ಇರಲಿಲ್ಲ. ಸರಬರಾಜು ಕೂಡ ಆಗುತ್ತಿರಲಿಲ್ಲ. ಈಗ ಇದ್ದಕ್ಕಿದ್ದಂತೆ ಬೇಡಿಕೆ ಹೆಚ್ಚಿರುವ ಕಾರಣ ಬೆಲೆ ಹೆಚ್ಚು ಮಾಡಲಾಗಿದೆ.

ಇಷ್ಟು ದಿನ ಚೀನಾ, ವಿದೇಶದಲ್ಲಿ ಕೊರೊನಾ ವೈರಸ್ ಎಂದು ಸುದ್ದಿ ಓದುತ್ತಿದ್ದ ಜನರು, ನಮ್ಮ ದೇಶಕ್ಕೆ ಕೊರೊನಾ ಕಾಲಿಟ್ಟಿದೆ ಎಂದು ತಿಳಿದು ತೀವ್ರ ಆತಂಕಕ್ಕೆ ಗುರಿಯಾಗಿದ್ದಾರೆ. ತೆಲಂಗಾಣ, ಆಗ್ರಾ ಸೇರಿದಂತೆ ಹಲವು ಕಡೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ.

English summary
After high alert in karnataka, coronavirus mask price rise in medical shops.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X