RR ನಗರದಲ್ಲಿ ಕಾಂಗ್ರೆಸ್ ಗೆದ್ದಿದ್ದು ಹಣ ಬಲದಿಂದ: ಯಡಿಯೂರಪ್ಪ
Recommended Video

ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಗೆದ್ದಿದ್ದು ಹಣ ಬಲದಿಂದ ಅಂತಾರೆ ಬಿ ಎಸ್ ವೈ | Oneindia Kannada
ಬೆಂಗಳೂರು, ಮೇ 31: ಹಣದ ಬಲದ ಮುಂದೆ ಏನೂ ನಡೆಯಲ್ಲ ಎಂದು ಈ ಫಲಿತಾಂಶ ಸಾಬೀತು ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ರಾಜರಾಜೇಶ್ವರಿ ನಗರ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜರಾಜೇಶ್ವರಿ ನಗರ ಚುನಾವಣೆ ಬೇಸರ ಮೂಡಿಸಿದೆ ಆದರೆ ಜನರ ಆದೇಶಕ್ಕೆ ತಲೆ ಬಾಗಲೇ ಬೇಕಿದೆ ಎಂದು ಅವರು ಹೇಳಿದರು.

ರಾಜರಾಜೇಶ್ವರಿ ನಗರ ಚುನಾವಣೆಯಲ್ಲಿ ಬಿಜೆಪಿಯ ಮುನಿರಾಜು ಗೌಡ 82,572 ಮತಗಳನ್ನು ಗಳಿಸಿ ಕಾಂಗ್ರೆಸ್‌ನ ಮುನಿರತ್ನ ಅವರ ವಿರುದ್ಧ ಸೋಲನುಭವಿಸಿದ್ದಾರೆ.
ಜಯನಗರ ಚುನಾವಣೆ ಮೇಲೆ ಬಿಜೆಪಿ ಸಂಪೂರ್ಣ ಬಲ ಪ್ರದರ್ಶಿಸಲಿದ್ದು, ಜಯನಗರದಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು. RR ನಗರ ಮತದಾನವು ಚುನಾವಣಾ ಅಕ್ರಮದ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು.












Click it and Unblock the Notifications