‘ಮನುವಾದ vs ಬಸವ ತತ್ವದ ಸೈದ್ಧಾಂತಿಕ ಸಂಘರ್ಷದ ದ್ವೇಷ’
ಬೆಂಗಳೂರು: ಬಿಜೆಪಿ ವಿರುದ್ಧ ಕಾಂಗ್ರೆಸ್ ಲಿಂಗಾಯತ ಅಸ್ತ್ರ ಮುಂದುವರಿಸಿದೆ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ನಾಯಕರ ವಿರುದ್ಧ ಇದೇ ವಿಚಾರ ಮುಂದಿಟ್ಟುಕೊಂಡು ಯುದ್ಧ ಸಾರಿರುವ ಕಾಂಗ್ರೆಸ್, 'ಬಿಜೆಪಿಯ ಲಿಂಗಾಯತ ವಿರೋಧಿ ನೀತಿ ಕೇವಲ ರಾಜಕೀಯ ಕಾರಣಕ್ಕಾಗಿ ಮಾತ್ರವಲ್ಲ' ಎಂಬ ಬಾಂಬ್ ಸಿಡಿಸಿದೆ.
ಜಗದೀಶ್ ಶೆಟ್ಟರ್ ರಾಜೀನಾಮೆ ಬಳಿಕ ಟ್ವೀಟ್ ವಾರ್ ಜೋರಾಗಿದೆ. ಅದರಲ್ಲೂ ಬಿಜೆಪಿ ವಿರುದ್ಧ ಇದನ್ನೇ ಚುನಾವಣಾ ಅಸ್ತ್ರವಾಗಿಸಿದೆ ಕಾಂಗ್ರೆಸ್. ಹೀಗಾಗಿ ಟ್ವೀಟ್ ಮೇಲೆ ಟ್ವೀಟ್ ಮಾಡುತ್ತಾ, ಕಮಲ ಪಾಳಯದ ನಾಯಕರಿಗೆ ತಿರುಗೇಟು ನೀಡುವ ಕೆಲಸ ಮುಂದುವರಿಸಿದೆ 'ಕೈ' ಪಡೆ. ಇದರ ಮುಂದುವರಿದ ಭಾಗವಾಗಿ, 'ಬಿಜೆಪಿಯ ಲಿಂಗಾಯತ ವಿರೋಧಿ ನೀತಿ ಕೇವಲ ರಾಜಕೀಯ ಕಾರಣಕ್ಕಾಗಿ ಮಾತ್ರವಲ್ಲ, ಅದು ಮನುವಾದ vs ಬಸವ ತತ್ವದ ಸೈದ್ದಂತಿಕ ಸಂಘರ್ಷದ ದ್ವೇಷ' ಎಂದಿದೆ ಕಾಂಗ್ರೆಸ್.

'ಲಿಂಗಾಯತ ವಿರೋಧಿ ಬಿಜೆಪಿ'
ಅಲ್ಲದೆ ' ಚುನಾವಣೆಗಾಗಿ ವಾರಕ್ಕೊಮ್ಮೆ ಕರ್ನಾಟಕಕ್ಕೆ ಬರುವ ಪ್ರಧಾನಿ @narendramodi ಅವರಿಗೆ ಸಿದ್ದಗಂಗಾ ಶ್ರೀಗಳ ಅಂತ್ಯಸಂಸ್ಕಾರಕ್ಕೆ ಬರಲು ಸಮಯವಿರಲಿಲ್ಲವೇ? #ಲಿಂಗಾಯತವಿರೋಧಿಬಿಜೆಪಿ' ಎಂದು ಹ್ಯಾಶ್ ಟ್ಯಾಗ್ ಹಾಕಿದೆ ಕರ್ನಾಟಕ ಕಾಂಗ್ರೆಸ್ ಘಟಕ. ಹೀಗೆ ಕಾಂಗ್ರೆಸ್ ಟ್ವೀಟ್‌ಗೆ ಕಮಲ ಪಾಳಯ ಕೂಡ ಪ್ರತ್ಯುತ್ತರ ನೀಡುತ್ತಿದ್ದು, ಬಿಜೆಪಿ ವಲಸಿಗರಿಗೆ ಟಿಕೆಟ್ ಕೊಡುತ್ತಿರುವ ಕಾಂಗ್ರೆಸ್ ಕ್ರಮದ ಬಗ್ಗೆ ಬಿಜೆಪಿ ಟ್ವಿಟ್ಟರ್ ಪೇಜ್‌ನಲ್ಲಿ ಕುಹಕವಾಡಿ ಪೋಸ್ಟ್ ಹಾಕಲಾಗಿತ್ತು.
ಬಿಜೆಪಿಯ ಲಿಂಗಾಯತ ವಿರೋಧಿ ನೀತಿ ಕೇವಲ ರಾಜಕೀಯ ಕಾರಣಕ್ಕಾಗಿ ಮಾತ್ರವಲ್ಲ, ಅದು ಮನುವಾದ vs ಬಸವ ತತ್ವದ ಸೈದ್ದಂತಿಕ ಸಂಘರ್ಷದ ದ್ವೇಷ.
— Karnataka Congress (@INCKarnataka) April 18, 2023
ಚುನಾವಣೆಗಾಗಿ ವಾರಕ್ಕೊಮ್ಮೆ ಕರ್ನಾಟಕಕ್ಕೆ ಬರುವ ಪ್ರಧಾನಿ @narendramodi ಅವರಿಗೆ ಸಿದ್ದಗಂಗಾ ಶ್ರೀಗಳ ಅಂತ್ಯಸಂಸ್ಕಾರಕ್ಕೆ ಬರಲು ಸಮಯವಿರಲಿಲ್ಲವೇ?#ಲಿಂಗಾಯತವಿರೋಧಿಬಿಜೆಪಿ
ಗೆಲ್ಲುವ ಅಲ್ಲ, ನಿಲ್ಲುವ ಅಭ್ಯರ್ಥಿಗಳೇ ಇಲ್ಲ!
ಕಾಂಗ್ರೆಸ್ ಟ್ವಿಟ್ಟರ್ ಪೇಜ್‌ನಲ್ಲಿ ಮಾಡುತ್ತಿರುವ ಟ್ವೀಟ್‌ಗೆ ಬಿಜೆಪಿ ಪ್ರತ್ಯುತ್ತರ ನೀಡುತ್ತಿದ್ದು, 'ಗೆಲ್ಲುವ ಅಭ್ಯರ್ಥಿಗಳಲ್ಲ, @INCKarnatakaಕ್ಕೆ ನಿಲ್ಲುವ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಹಾಗಾಗಿ ಅಭ್ಯರ್ಥಿಗಳನ್ನು ಆಮದು ಮಾಡುವ ಸ್ಥಿತಿಗೆ ತಲುಪಿದೆ. ಕಮಲವನ್ನೇ ಅರಳಿಸುತ್ತೇವೆಂದು ಜನ ತೀರ್ಮಾನ ಮಾಡಿರುವಾಗ, ನಿಮ್ಮ ಹಳೇ ಬಂಡಿಗೆ ಎಷ್ಟೇ ಬಣ್ಣ ಬಳಿದರೂ ಬಂಡಿ ಮಾತ್ರ ಹೊಸತಾಗುವುದಿಲ್ಲ.' ಎಂದು ತಿರುಗೇಟು ನೀಡಲಾಗಿತ್ತು.
ಗೆಲ್ಲುವ ಅಭ್ಯರ್ಥಿಗಳಲ್ಲ, @INCKarnatakaಕ್ಕೆ ನಿಲ್ಲುವ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಹಾಗಾಗಿ ಅಭ್ಯರ್ಥಿಗಳನ್ನು ಆಮದು ಮಾಡುವ ಸ್ಥಿತಿಗೆ ತಲುಪಿದೆ.
— BJP Karnataka (@BJP4Karnataka) April 18, 2023
ಕಮಲವನ್ನೇ ಅರಳಿಸುತ್ತೇವೆಂದು ಜನ ತೀರ್ಮಾನ ಮಾಡಿರುವಾಗ, ನಿಮ್ಮ ಹಳೇ ಬಂಡಿಗೆ ಎಷ್ಟೇ ಬಣ್ಣ ಬಳಿದರೂ ಬಂಡಿ ಮಾತ್ರ ಹೊಸತಾಗುವುದಿಲ್ಲ.#BJPYeBharavase pic.twitter.com/JmZHiFjLRm
ಬಿಜೆಪಿ ವಿರುದ್ಧ ಬ್ಯಾಂಕ್ ಅಸ್ತ್ರ!
ಲಿಂಗಾಯತ ಅಸ್ತ್ರದ ಜೊತೆಯಲ್ಲೇ ಬ್ಯಾಂಕ್ ವಿಲೀನ, ಕೆಎಂಎಫ್ ವಿಚಾರವನ್ನೂ ಟ್ವೀಟ್‌ಗಳಲ್ಲಿ ಪ್ರಸ್ತಾಪಿಸುತ್ತಿದೆ ಕಾಂಗ್ರೆಸ್. 'ಬಿಜೆಪಿಯಿಂದಾಗಿ ಕರ್ನಾಟಕದ ಅಸ್ಮಿತೆಯ ಪ್ರತೀಕವಾಗಿದ್ದ ಒಂದೊಂದೇ ಸಂಸ್ಥೆಗಳು ಕರ್ನಾಟಕದಿಂದ ಕಣ್ಮರೆಯಾಗುತ್ತಿವೆ. ವಿಜಯ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಎಲ್ಲವೂ ಈಗ ಮಾಯವಾಗಿವೆ. ಬಿಜೆಪಿ ತೊಲಗಿಸದಿದ್ದರೆ ನಾಳೆ ನಮ್ಮ 'ನಂದಿನಿ'ಯೂ ಮಾಯವಾಗುವುದು ಖಚಿತ. #ಬಿಜೆಪಿ_ತೊಲಗಿಸಿ_ಕರ್ನಾಟಕ_ಉಳಿಸಿ' ಎಂದು ಟ್ವೀಟ್ ಮಾಡಿದೆ ಕಾಂಗ್ರೆಸ್.
ಬಿಜೆಪಿಯಿಂದಾಗಿ ಕರ್ನಾಟಕದ ಅಸ್ಮಿತೆಯ ಪ್ರತೀಕವಾಗಿದ್ದ ಒಂದೊಂದೇ ಸಂಸ್ಥೆಗಳು ಕರ್ನಾಟಕದಿಂದ ಕಣ್ಮರೆಯಾಗುತ್ತಿವೆ. ವಿಜಯ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಎಲ್ಲವೂ ಈಗ ಮಾಯವಾಗಿವೆ.
— Karnataka Congress (@INCKarnataka) April 18, 2023
ಬಿಜೆಪಿ ತೊಲಗಿಸದಿದ್ದರೆ ನಾಳೆ ನಮ್ಮ 'ನಂದಿನಿ'ಯೂ ಮಾಯವಾಗುವುದು ಖಚಿತ.#ಬಿಜೆಪಿ_ತೊಲಗಿಸಿ_ಕರ್ನಾಟಕ_ಉಳಿಸಿ pic.twitter.com/AyTGTpyucx
ಕುಟುಂಬ ರಾಜಕಾರಣದ ಕೂಸು!
'ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿಯಲ್ಲೂ ಕುಟುಂಬ ರಾಜಕಾರಣದ ಕೂಸಿಗೆ ಆರೈಕೆ ಮಾಡಿ ಬೆಳೆಸಲಾಗಿದೆ. ವಂಶಪಾರಂಪರ್ಯದ ಹಕ್ಕು ಎಂಬಂತೆ ಟಿಕೆಟ್ ಹಂಚಿಕೆ ಮಾಡಿ ಇತರ ಪಕ್ಷಗಳತ್ತ ಬೆರಳು ತೋರಿಸುವುದು @BJP4Karnataka ಬಂಡತನಕ್ಕೆ ಸಾಕ್ಷಿ. ಅಭ್ಯರ್ಥಿಗಳ ಆಯ್ಕೆಗೆ ಕಾರ್ಯಕರ್ತರ ಮತದಾನ ಮಾಡಿಸಿದ್ದು ಒಂದು ಡೋಂಗಿ ನಾಟಕವಲ್ಲವೇ @nalinkateel?' ಎಂದು ಮತ್ತೊಂದು ಟ್ವೀಟ್ ಮೂಲಕ ಕುಹಕವಾಡಿದೆ ಕಾಂಗ್ರೆಸ್.
ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿಯಲ್ಲೂ ಕುಟುಂಬ ರಾಜಕಾರಣದ ಕೂಸಿಗೆ ಆರೈಕೆ ಮಾಡಿ ಬೆಳೆಸಲಾಗಿದೆ.
— Karnataka Congress (@INCKarnataka) April 18, 2023
ವಂಶಪಾರಂಪರ್ಯದ ಹಕ್ಕು ಎಂಬಂತೆ ಟಿಕೆಟ್ ಹಂಚಿಕೆ ಮಾಡಿ ಇತರ ಪಕ್ಷಗಳತ್ತ ಬೆರಳು ತೋರಿಸುವುದು @BJP4Karnataka ಬಂಡತನಕ್ಕೆ ಸಾಕ್ಷಿ.
ಅಭ್ಯರ್ಥಿಗಳ ಆಯ್ಕೆಗೆ ಕಾರ್ಯಕರ್ತರ ಮತದಾನ ಮಾಡಿಸಿದ್ದು ಒಂದು ಡೋಂಗಿ ನಾಟಕವಲ್ಲವೇ @nalinkateel?
ಒಟ್ನಲ್ಲಿ ಅತ್ತ ಜಗದೀಶ್ ಶೆಟ್ಟರ್ ಕಾಂಗ್ರೆಸ್ 'ಕೈ' ಹಿಡಿದು ಬಿಜೆಪಿ ಒಳಜಗಳದ ಗುಟ್ಟು ರಟ್ಟು ಮಾಡುತ್ತಿದ್ದಂತೆ ಕಾಂಗ್ರೆಸ್‌ನ ಲಿಂಗಾಯತ ಅಸ್ತ್ರಕ್ಕೆ ಮತ್ತಷ್ಟು ಬಲ ಬಂದಿದೆ. ಇದೇ ಕಾರಣಕ್ಕೆ ಲಿಂಗಾಯತ ನಾಯಕರ ವಿಚಾರವನ್ನೇ ಮುಂದಿಟ್ಟುಕೊಂಡು ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ಮುಂದುವರಿಸಿದೆ.
ಇನ್ನೊಂದು ಕಡೆ ಬಿಜೆಪಿ ಕೂಡ ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಪ್ರತ್ಯುತ್ತರ ನೀಡುತ್ತಿದೆ. ಚುನಾವಣೆ ಹೊತ್ತಲ್ಲೇ ಈ ಆರೋಪ-ಪ್ರತ್ಯಾರೋಪದ ಬಗ್ಗೆ ಚರ್ಚೆ ಕೂಡ ಜೋರಾಗಿದೆ. ಆದರೆ ಕರ್ನಾಟಕದ ಮತದಾರ ಪ್ರಭು ಈ ದಾಳಿ-ವಾಗ್ದಾಳಿ ವಿಚಾರವನ್ನು ಯಾವ ರೀತಿ ಸ್ವೀಕರಿಸುತ್ತಾನೆ. ಚುನಾವಣೆ ಮೇಲೆ ಇದು ಯಾವ ರೀತಿ ಪ್ರಭಾವ ಬೀರಲಿದೆ ಎಂಬುದನ್ನ ಕಾದು ನೋಡಬೇಕಿದೆ.












Click it and Unblock the Notifications