ರಾಜಾಜಿನಗರ ಬಿಜೆಪಿ ಅಭ್ಯರ್ಥಿ ಮುಂದೆಯೇ ಬಿಜೆಪಿಗೆ ಧಿಕ್ಕಾರ ಕೂಗಿದ ಮತದಾರರು: ವಿಡಿಯೋ ಹಂಚಿಕೊಂಡ ಕಾಂಗ್ರೆಸ್
ಬೆಂಗಳೂರಿನ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ್ ಕುಮಾರ್ ವಿರುದ್ಧ ಮತದಾರರು ಆಕ್ರೋಶ ವ್ಯಕ್ತಪಡಿಸಿರುವು ವಿಡಿಯೋವನ್ನು ಕರ್ನಾಟಕ ಕಾಂಗ್ರೆಸ್ ಹಂಚಿಕೊಂಡಿದೆ. ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಇಡೀ ರಾಜ್ಯದಲ್ಲಿ ಬಿಜೆಪಿ ವಿರುದ್ಧ ಮತದಾರರು ಸಿಟ್ಟಾಗಿದ್ದಾರೆ ಎಂದು ಹೇಳಿದೆ.
ಸುರೇಶ್ ಕುಮಾರ್ ಮತಯಾಚನೆಗೆ ತೆರಳಿದ್ದ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರೊಬ್ಬರು ಜೋರಾಗಿ ಪ್ರಶ್ನೆ ಮಾಡುತ್ತಿರುವುದನ್ನು ನೋಡಬಹುದು, ಅರ್ಚಕರಿಗೆ ಉತ್ತರ ಕೊಡಲಾಗದೆ ಸುರೇಶ್ ಕುಮಾರ್ ಮುಂದೆ ಸಾಗುತ್ತಾರೆ. ನಂತರ ಸ್ಥಳೀಯರು ಬಿಜೆಪಿಗೆ ಧಿಕ್ಕಾರ ಎಂದು ಕೂಗುತ್ತಿರುವುದನ್ನು ಕೇಳಬಹುದು.

ಸದ್ಯ ಈ ವಿಡಿಯೋವನ್ನು ಹಂಚಿಕೊಂಡಿರುವ ಕಾಂಗ್ರೆಸ್, " ಬಿಜೆಪಿ ಅಭ್ಯರ್ಥಿಗಳು ಮತ ಕೇಳಲು ಹೋದಲ್ಲೆಲ್ಲಾ ಜನರಿಂದ ಧಿಕ್ಕಾರ ಕೇಳಿಸಿಕೊಂಡು ಬರುತ್ತಿದ್ದಾರೆ. ರಾಜಾಜಿನಗರದ ಅಭ್ಯರ್ಥಿ ಸುರೇಶ್ ಕುಮಾರ್ ಅವರಿಗೆ ದೇವಸ್ಥಾನದ ಅರ್ಚಕರು ಸೇರಿದಂತೆ ಸ್ಥಳೀಯರೆಲ್ಲ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಾದ್ಯಂತ ಬಿಜೆಪಿ ವಿರುದ್ದದ ಜನಾಕ್ರೋಶ ಇದೇ ಮಾದರಿಯಲ್ಲಿದೆ. ಪ್ರಧಾನಿ ನರೇಂದ್ರ ಮೋದಿಯವರೇ ಈ ಜನರ ಮಾತನ್ನು ಕೇಳಿಸಿಕೊಳ್ಳಿ" ಎಂದು ಹೇಳಿದೆ.
'@BJP4Karnataka ಮತ ಕೇಳಲು ಹೋದಲ್ಲೆಲ್ಲಾ ಜನರಿಂದ "ಧಿಕ್ಕಾರ" ಕೇಳಿಸಿಕೊಂಡು ಬರುತ್ತಿದ್ದಾರೆ.
— Karnataka Congress (@INCKarnataka) May 4, 2023
ರಾಜಾಜಿನಗರದ ಅಭ್ಯರ್ಥಿ ಸುರೇಶ್ ಕುಮಾರ್ ಅವರಿಗೆ ದೇವಸ್ಥಾನದ ಅರ್ಚಕರು ಸೇರಿದಂತೆ ಸ್ಥಳೀಯರೆಲ್ಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಾದ್ಯಂತ ಬಿಜೆಪಿ ವಿರುದ್ದದ ಜನಾಕ್ರೋಶ ಇದೇ ಮಾದರಿಯಲ್ಲಿದೆ.@narendramodi ಅವರೇ, ಈ ಜನ್ ಕಿ ಬಾತ್… pic.twitter.com/usoeeKEgEA
ಬಜರಂಗದಳ ಬ್ಯಾನ್ ವಿಚಾರದಲ್ಲಿ ಕೂಡ ಕಾಂಗ್ರೆಸ್ ತಿರುಗೇಟು
ಬಜರಂಗದಳ ಬ್ಯಾನ್ ವಿಚಾರದಲ್ಲಿ ರಾಜಕೀಯ ಮಾಡಲಿ ಯತ್ನಿಸುತ್ತಿರುವ ಬಿಜೆಪಿ ವಿರುದ್ಧ ಕೂಡ ಕಾಂಗ್ರೆಸ್ ಕಿಡಿ ಕಾರಿದೆ. ಇಂದು ಬಜರಂಗದಳದ ಬಗ್ಗೆ ಭಾರಿ ಪ್ರೀತಿ ವ್ಯಕ್ತಪಡಿಸುತ್ತಿರ ಬಿಜೆಪಿ ಎಷ್ಟು ಜನ ಭಜರಂಗದಳ ಕಾರ್ಯಕರ್ತರಿಗೆ ಟಿಕೆಟ್ ನೀಡಿದೆ ಎಂದು ಪ್ರಶ್ನೆ ಮಾಡಿದೆ. ಮಾತ್ರವಲ್ಲದೆ ಸಿಟಿ ರವಿ ಮಕ್ಕಳು, ಆರ್ ಅಶೋಕ್ ಮಗ ಯಾಕೆ ಬಜರಂಗದಳದಲ್ಲಿ ಇಲ್ಲ ಎಂದು ಪ್ರಶ್ನಿಸಿದೆ. ಸಂಸದ ತೇಜಸ್ವಿ ಸೂರ್ಯ ಯಾಕೆ ಬಜರಂಗದಳ ಸೇರಿಲ್ಲ, ಬಿಎಸ್ ಬೊಮ್ಮಾಯಿ ಮಗ ಬಜರಂಗದಳ ಸೇರುವುದು ಬಿಟ್ಟು ಉದ್ಯಮಿಯಾಗಿದ್ದೇಕೆ ಎಂದು ಕೇಳಿದೆ.
ಬಜರಂಗದಳ ಬಿಜೆಪಿಯ ಮುದ್ದಿನ ಕೂಸು ಎನ್ನುವುದಾದರೆ, "ದಿನೇಶ್ ನಾಯ್ಕ ಎಂದ ದಲಿತನ ಹೊಣೆಯನ್ನು ಬಿಜೆಪಿ ಹೊರಲಿ, ಮಂಗಳೂರಿನ ಪಬ್ ದಾಳಿಯ ಹೊಣೆಯನ್ನು ಬಿಜೆಪಿ ಹೊರಲಿ, ಸಮಾಜಘಾತುಕ ಕೃತ್ಯಗಳೆಲ್ಲದರ ಹೊಣೆಯನ್ನು ಬಿಜೆಪಿಯೇ ಹೊರಲಿ, ನಂತರ ಬಜರಂಗದಳವನ್ನು ಸಮರ್ಥಿಸಿಕೊಳ್ಳಲಿ" ಎಂದು ಕಾಂಗ್ರೆಸ್ ಟ್ವಿಟ್ ಮಾಡಿದೆ.
"ನಿಜವಾದ ಭಜರಂಗಿಗಳು (ಕ್ರೀಡಾಪಟುಗಳು) ದೆಹಲಿಯ ಜಂತರ್ ಮಂಥರ್‌ನಲ್ಲಿ ತಮಗಾದ ಶೋಷಣೆಯ ನೋವು ತಾಳದೆ ಪ್ರತಿಭಟಿಸುತ್ತಿದ್ದಾರೆ. ನರೇಂದ್ರ ಮೋದಿ ಅವರೇ, ಇಲ್ಲಿನ ನಕಲಿ ಭಜರಂಗಿಗಳ ಓಲೈಕೆ ಬಿಟ್ಟು ಅಸಲಿ ಭಜರಂಗಿಗಳ ನೋವು ಆಲಿಸಿ. ಅಲ್ಲೂ "ಬಜರಂಗಿ ಪುನಿಯಾ" ಎಂಬ ಹೆಸರಿನ ಕ್ರೀಡಾಪಟು ನೋವಿನಲ್ಲಿದ್ದಾರೆ. ನಿಮಗೆ ಆ ಅಸಲಿ ಬಜರಂಗಿಗಳ ಹಿತ ಬೇಡವೇ?" ಎಂದು ಪ್ರಶ್ನೆ ಮಾಡಿದೆ.












Click it and Unblock the Notifications