ಬೆಂಗಳೂರು : ಅಸಭ್ಯವಾಗಿ ವರ್ತಿಸಿದ ಕಾಂಗೋ ಪ್ರಜೆಗೆ ಥಳಿತ

ಬೆಂಗಳೂರು, ಮಾ. 16 : ಮಹಿಳೆಗೆ ಹಣ ನೀಡಿ ಲೈಂಗಿಕ ಕ್ರಿಯೆಗೆ ಆಹ್ವಾನ ನೀಡಿದ ಎಂದು ಆರೋಪಿಸಿ ಕಾಂಗೋ ದೇಶದ ಪ್ರಜೆಯೊಬ್ಬನಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಮಹದೇವಪುರದಲ್ಲಿ ನಡೆದಿದೆ. ಕಾಂಗೋ ಪ್ರಜೆಯನ್ನು ಬಂಧಿಸಿರುವ ಪೊಲೀಸರು ಲೈಂಗಿಕ ಕಿರುಕುಳ ಆರೋಪದಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಹಲ್ಲೆಗೊಳದಾದ ಕಾಂಗೋ ದೇಶದ ಪ್ರಜೆಯನ್ನು ಲೆಗ್ರಾಂಡ್ ಮಂಡೆ (29) ಎಂದು ಗುರುತಿಸಲಾಗಿದೆ. ಮಹದೇವಪುರ ಸಮೀಪದ ಎಇಸಿಎಸ್‌ ಲೇಔಟ್‌ನಲ್ಲಿ ಮಹಿಳೆಯೊಬ್ಬರಿಗೆ ಹಣ ಕೊಟ್ಟು ಲೈಂಗಿಕ ಕ್ರಿಯೆಗೆ ಕರೆದ ಎಂದು ಸ್ಥಳೀಯರು ಆತನಿಗೆ ಥಳಿಸಿದ್ದಾರೆ.

Mahadevapura

ಘಟನೆಯ ವಿವರ : ಲೆಗ್ರಾಂಡ್ ಮಂಡೆ ಸುಮಾರು ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದು ಕುಂದಲ­ಹಳ್ಳಿಯ ಸಾಫ್ಟ್‌ವೇರ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎಇಸಿಎಸ್‌ ಲೇಔಟ್‌ನ ತಮ್ಮ ಮನೆಯ ಸಮೀಪದ ಇಸ್ತ್ರಿ ಅಂಗಡಿಗೆ ಬಟ್ಟೆಗಳನ್ನು ಈತ ಕೊಡುತ್ತಿದ್ದ. ಆದ್ದರಿಂದ ಇಸ್ತ್ರಿ ಅಂಗಡಿಯ ಮಾಲೀಕ ಹಾಗೂ ಅವರ ಪತ್ನಿಯ ಪರಿಚಯವಾಗಿತ್ತು. [ಬೆಂಗಳೂರು: ಆಫ್ರಿಕಾ ಪ್ರಜೆಗಳ ಮೇಲೆ ಹಲ್ಲೆ]

ಮಾರ್ಚ್ 9ರಂದು ಬಟ್ಟೆಗಳನ್ನು ಕೊಡಲು ಹೋಗಿದ್ದಾಗ ಲೆಗ್ರಾಂಡ್ ಇಸ್ತ್ರಿ ಅಂಗಡಿಯಲ್ಲಿದ್ದ ಮಹಿಳೆಗೆ 500 ರೂ. ನೀಡಿ ಲೈಂಗಿಕ ಕ್ರಿಯೆಗೆ ಆಹ್ವಾನ ನೀಡಿದ್ದ ಎಂದು ಆರೋಪಿಸಲಾಗಿದೆ. ಲೆಗ್ರಾಂಡ್ ವರ್ತನೆ ಕಂಡು ಮಹಿಳೆ ಕೂಗಿಕೊಂಡಾಗ ಆತ ಅಲ್ಲಿಂದ ಪರಾರಿಯಾಗಿದ್ದ.

ಭಾನುವಾರ ಸಂಜೆಯ ವೇಳೆಗೆ ಲೆಗ್ರಾಂಡ್ ಅಂಗಡಿ ಬಳಿ ಬರುತ್ತಿದ್ದಂತೆ ತನ್ನ ಪತಿ ಮತ್ತು ಸುತ್ತಮುತ್ತಲಿನ ಜನರಿಗೆ ಮಹಿಳೆ ಮಾಹಿತಿ ನೀಡಿದ್ದಾಳೆ. ತಕ್ಷಣ ಆತನನ್ನು ಹಿಡಿದ ಸ್ಥಳೀಯರು ದೊಣ್ಣೆ ಮತ್ತು ವಿಕೆಟ್‌ಗಳಿಂದ ಆತನ ಮೇಲೆ ಹಲ್ಲೆ ಮಾಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ಸ್ಥಳೀಯರಿಂದ ಲೆಗ್ರಾಂಡ್‌ನನ್ನು ವಶಕ್ಕೆ ಪಡೆದಿರುವ ಪೊಲೀಸರು ಆತನ ವಿರುದ್ಧ ಲೈಂಗಿಕ ಕಿರುಕುಳದ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಲೆಗ್ರಾಂಡ್ ಪತ್ನಿ ಸ್ಥಳೀಯರ ಆರೋಪವನ್ನು ತಳ್ಳಿಹಾಕಿದ್ದು, ಹಲ್ಲೆ ನಡೆಸಿದವರ ವಿರುದ್ಧ ದೂರು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+